ಆ್ಯಪ್ನಗರ

ಬಿಹಾರ ಚುನಾವಣೆ: ಜೆಡಿಯು ಜತೆ ಎಲ್‌ಜೆಪಿ ಮೈತ್ರಿ ಕಡಿತ..! ಬಿಜೆಪಿ ನೇತೃತ್ವದ ಎನ್‌ಡಿಎ ಬೇಕೆಂದ ಪಾಸ್ವಾನ್‌

ಬಿಹಾರ ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ಎಲೆಕ್ಷನ್‌ ರಣಾಂಗಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಚಿರಾಗ್‌ ಪಾಸ್ವಾನ್‌ ನೇತೃತ್ವದ ಲೋಕ ಜನಶಕ್ತಿ ಪಕ್ಷ ನಿತೀಶ್‌ ಕುಮಾರ್‌ ಮುಂದಾಳತ್ವದ ಎನ್‌ಡಿಎ ಭಾಗವಾಗದಿರಲು ನಿರ್ಧರಿಸಿದ್ದು, ಏಕಾಂಗಿಯಾಗಿಯೇ ಚುನಾವಣೆ ಎದುರಿಸುವ ಸಾಧ್ಯತೆ ಇದೆ.

Agencies 4 Oct 2020, 5:05 pm
ಹೊಸದಿಲ್ಲಿ: ಮುಂಬರುವ ಬಿಹಾರ ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ಇಂತಹ ಸಂದರ್ಭದಲ್ಲಿ ಚಿರಾಗ್‌ ಪಾಸ್ವಾನ್‌ ನೇತೃತ್ವದ ಲೋಕ ಜನಶಕ್ತಿ ಪಕ್ಷ ನಿತೀಶ್‌ ಕುಮಾರ್‌ ಮುಂದಾಳತ್ವದ ಎನ್‌ಡಿಎ ಭಾಗವಾಗಿ ಚುನಾವಣೆಯಲ್ಲಿ ಸ್ಪರ್ಧಿಸದಿರಲು ನಿರ್ಧರಿಸಿದೆ. ಏಕಾಂಗಿಯಾಗಿಯೇ ಎಲ್‌ಜೆಪಿ ಚುನಾವಣೆ ಎದುರಿಸುವ ಸಾಧ್ಯತೆಗಳು ನಿಚ್ಚಳವಾಗಿದೆ.
Vijaya Karnataka Web ljp decides not to fight bihar election under nitish kumars leadership of nda
ಬಿಹಾರ ಚುನಾವಣೆ: ಜೆಡಿಯು ಜತೆ ಎಲ್‌ಜೆಪಿ ಮೈತ್ರಿ ಕಡಿತ..! ಬಿಜೆಪಿ ನೇತೃತ್ವದ ಎನ್‌ಡಿಎ ಬೇಕೆಂದ ಪಾಸ್ವಾನ್‌


ದಿಲ್ಲಿಯಲ್ಲಿ ಎಲ್‌ಜೆಪಿ ಮುಖ್ಯಸ್ಥ ಚಿರಾಗ್‌ ಪಾಸ್ವಾನ್‌ ನೇತೃತ್ವದಲ್ಲೊ ನಡೆದ ಪಕ್ಷದ ಸಂಸದೀಯ ಮಂಡಳಿ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಆದರೆ, ನಿತೀಶ್‌ ಕುಮಾರ್‌ ನೇತೃತ್ವದ ಎನ್‌ಡಿಎ ಭಾಗವಾಗದಿರಲು ತೀರ್ಮಾನಿಸಿರುವ ಎಲ್‌ಜೆಪಿ ಕೇವಲ ಬಿಜೆಪಿಯೊಂದಿಗೆ ಮಾತ್ರ ಮೈತ್ರಿ ಮಾಡಿಕೊಳ್ಳುವ ಪ್ರಸ್ತಾಪವನ್ನು ಬಿಜೆಪಿ ಮುಂದಿಟ್ಟಿದ್ದು, ಬಿಹಾರದಲ್ಲಿಯೂ ಕೇಂದ್ರದಲ್ಲಿದ್ದಂತೆ ಬಿಜೆಪಿ ನೇತೃತ್ವದ ಸರಕಾರ ಬೇಕು ಎಂದು ಹೇಳಿದೆ.

ಸಂಸದೀಯ ಮಂಡಳಿ ಸಭೆ ಬಳಿಕ ಮಾತನಾಡಿದ ಎಲ್‌ಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಅಬ್ದುಲ್‌ ಖಾನ್‌, ಈ ಬಾರಿಯ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿಂದ ಜೆಡಿಯು ಜೊತೆಗಿನ ಮೈತ್ರಿಯೊಂದಿಗೆ ನಾವು ಚುನಾವಣೆಯನ್ನು ಎದುರಿಸಲ್ಲ ಎಂದು ಹೇಳಿದ್ದಾರೆ. ಇದಕ್ಕೂ ಮುನ್ನ ಜೆಡಿಯು ಕೂಡ ಎಲ್‌ಜೆಪಿ ಜೊತೆ ಮೈತ್ರಿ ಸಾಧ್ಯವಿಲ್ಲ ಎಂದು ಹೇಳಿತ್ತು.

ಬಿಹಾರ ಚುನಾವಣೆ: ಎನ್‌ಡಿಎ ಸೀಟು ಹಂಚಿಕೆ ಕಸರತ್ತು..! ಬಿಜೆಪಿಯ 50:50 ಸೂತ್ರಕ್ಕೆ ಒಪ್ಪದ ಜೆಡಿಯು

ಚುನಾವಣೆಯಲ್ಲಿ ನಿತೀಶ್‌ ಕುಮಾರ್‌ ನೇತೃತ್ವದ ಜೆಡಿಯು ಅಭ್ಯರ್ಥಿಗಳ ವಿರುದ್ಧ ತನ್ನ ಉಮೇದುದಾರರನ್ನು ಕಣಕ್ಕಿಳಿಸಲು ಎಲ್‌ಜೆಪಿ ನಿರ್ಧರಿಸಿದೆ. ಆದರೆ, ಬಿಜೆಪಿ ಸ್ಪರ್ಧಿಸುವ ಕ್ಷೇತ್ರಗಳಿಂದ ದೂರ ಉಳಿಯುವ ನಿರ್ಧಾರ ತೆಗೆದುಕೊಳ್ಳುವ ಮೂಲಕ ಪ್ರಸ್ತಾವಿತ ಎಲ್‌ಜೆಪಿ-ಬಿಜೆಪಿ ಮೈತ್ರಿಯ ಅವಕಾಶಗಳನ್ನು ಮುಕ್ತವಾಗಿರಿಸಿಕೊಳ್ಳುವ ಇರಾದೆಯಲ್ಲಿ ಚಿರಾಗ್‌ ಪಾಸ್ವಾನ್‌ ಇದ್ದಾರೆ.

ಬಿಹಾರದಲ್ಲಿ ಮುಗಿಯದ ಸೀಟು ಹಂಚಿಕೆ ಸರ್ಕಸ್‌..! ಕಾಂಗ್ರೆಸ್‌, ಎಲ್‌ಜೆಪಿಗೆ ಅಸ್ತಿತ್ವದ ಪ್ರಶ್ನೆ

ಇನ್ನು, ಮಣಿಪುರ ಮಾದರಿಯಲ್ಲಿ ಸ್ವತಂತ್ರವಾಗಿ ಚುನಾವಣೆಗೆ ಸ್ಪರ್ಧಿಸಿ ಫಲಿತಾಂಶದ ಬಳಿಕ ಸರಕಾರದ ಭಾಗವಾಗುವ ಬಗ್ಗೆ ಎಲ್‌ಜೆಪಿ ಯೋಚಿಸುತ್ತಿದೆ ಎಂದು ಮೂಲಗಳು ತಿಳಿಸಿದ್ದವು. ಜೆಡಿಯು ಮತ್ತು ಎಲ್‌ಜೆಪಿಯ ತಿಕ್ಕಾಟ ಬಿಜೆಪಿಗೆ ಬಿಸಿ ತುಪ್ಪವಾಗಿದ್ದು, ಸಂದಿಗ್ಧ ಸನ್ನಿವೇಶವನ್ನು ಯಾವ ರೀತಿ ನಿಭಾಯಿಸಲಿದೆ ಎನ್ನುವ ಕುತೂಹಲ ಎಲ್ಲರಲ್ಲೂ ಮೂಡಿದೆ.

ಬಿಜೆಪಿಗೆ ಬಿಸಿತುಪ್ಪವಾದ ಬಿಹಾರ ಸೀಟು ಹಂಚಿಕೆ..! ಎನ್‌ಡಿಎಯಿಂದ ಎಲ್‌ಜೆಪಿ ಹೊರ ನಡೆಯೋ ಸಾಧ್ಯತೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ