ಆ್ಯಪ್ನಗರ

ಹಲ್ಲಿ ಕಂಡರೆ ಹೆದರುತ್ತಿದ್ದ ಮಯಾಂಕ್ ಇಬ್ಬರನ್ನು ಕೊಂದಿದ್ದು ಹೇಗೆ?

ಹುಟ್ಟಿ, ಬೆಳೆದ ಊರಿನಲ್ಲಿ ಬುದ್ಧಿವಂತನೆಂದು ಗುರುತಿಸಿಕೊಂಡು, ಹೀರೋ ಆಗಿದ್ದ, ಮಯಾಂಕ್ ಕೊಲೆಗಾರನಾಗಬಹುದೆಂದು ಯಾರೂ ಊಹಿಸಿರಲಿಲ್ಲ.

ಏಜೆನ್ಸೀಸ್ 4 Jun 2016, 4:05 pm
ದುರ್ಗಾಪುರ್: ಪತ್ನಿ ಹಾಗೂ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ಮಾಜಿ ಪ್ರೊಫೆಸರ್‌ ಒಬ್ಬರನ್ನು ಬುಧವಾರ ಗುಂಡಿಕ್ಕಿ ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಖರಗ್‌ಪುರ ಐಐಟಿ ಪದವೀಧರ ಮಾಯಾಂಕ್‌ ಸರಕಾರ್‌ ನಡೆ ಬಗ್ಗೆ ಊರಿನ ಜನರಿಗೆ ಎಲ್ಲಿಲ್ಲದ ಆಶ್ಚರ್ಯ. ಊರಿನಲ್ಲಿ ಹೀರೋ ಆಗಿದ್ದ, ಬುದ್ಧಿವಂತ ವಿದ್ಯಾರ್ಥಿಯೊಬ್ಬ ಈ ಮಟ್ಟಿಗಿನ ಕೊಲೆಗಾರನಾಗಬಹುದೆಂದು ಯಾರೂ ಊಹಿಸಿರಲಿಲ್ಲ.
Vijaya Karnataka Web local hero who turned a killer stuns durgapur
ಹಲ್ಲಿ ಕಂಡರೆ ಹೆದರುತ್ತಿದ್ದ ಮಯಾಂಕ್ ಇಬ್ಬರನ್ನು ಕೊಂದಿದ್ದು ಹೇಗೆ?


ಹಲ್ಲಿ ನೋಡಿದರೂ ಹೆದರುತ್ತಿದ್ದ, ಸದಾ ಪುಸ್ತಕದ ಮಧ್ಯೆಯೇ ಅವಿತಿರುತ್ತಿದ್ದ ಹೀರೋ ಜಾಗತಿಕ ಪಾತಿಕಿಯಾಗಿದ್ದು ಹೇಗೆಂದು ಊರ ಮಂದಿ, ಹಿಂದಿನ ಸಹಪಾಠಿಗಳು, ಶಿಕ್ಷಕರು ಮತ್ತು ನೆರೆಹೊರೆಯವರು ಮಾತನಾಡಿಕೊಳ್ಳುತ್ತಿದ್ದಾರೆ. ಸದಾ ಅವನು ಒಂಟಿಯಾಗಿದ್ದ ಎಂಬುವುದು ಬಹುತೇಕರ ಅಭಿಪ್ರಾಯ. ಮನೆಯ ಗೋಡೆ ಹಾಗೂ ಬಾಗಿಲ ಮೇಲೆಲ್ಲ ಬರೀ ಸಮಿಕರಣಗಳನ್ನೇ ಗೀಚಿಡುತ್ತಿದ್ದ, ಪುಸ್ತಕದ ಹುಳುವಾಗಿದ್ದ ಮಯಾಂಕ್ ಯಾವತ್ತೂ ಹೊರಗೆ ಹೋಗಿ ಆಡಿದವನಲ್ಲ.

ಪತ್ರಕರ್ತರು, ಪೊಲೀಸರು ಹಾಗೂ ಇತರರು ಮಯಾಂಕ್ ಹುಟ್ಟಿ, ಬೆಳೆದ ಬಿಧಾನ್ ನಗರದ ಫ್ಲ್ಯಾಟ್ ಬಳಿ ಶುಕ್ರವಾರ ಸೇರಿದ್ದರು. ಸಂಕೋಚ ಸ್ವಭಾವದ ಮಯಾಂಕ್ ಯೊರೊಂದಿಗೂ ಹೆಚ್ಚು ಬೆರೆಯುತ್ತಿರಲಿಲ್ಲ. ಪುಸ್ತಕ ಬಿಟ್ಟರೆ ಬೇರೆ ಯಾರೂ ಆತನಿಗೆ ಸ್ನೇಹಿತರೂ ಇರಲಿಲ್ಲವೆಂಬುವುದು ಬಹುತೇಕರ ಅಭಿಪ್ರಾಯ.

ಪ್ರೊಫೆಸರ್ ಹತ್ಯೆಗೂ ಮುನ್ನ ಪತ್ನಿಯನ್ನು ಕೊಂದಿದ್ದ ಮಯಾಂಕ್

ಐಐಟಿಗೆ ಸೇರಿದನಿಂದ ಊರಿಗೆ ಬರೋದು ಕಡಿಮೆ ಮಾಡಿದ ಮಯಾಂಕ್, 15 ವರ್ಷಗಳ ಹಿಂದೆ ಮಡಿದ ತಾಯಿಯ ಅಂತ್ಯ ಸಂಸ್ಕಾರಕ್ಕೆ ಕೊಲ್ಕತ್ತಾಕ್ಕೆ ಬಂದಿದ್ದು ಬಿಟ್ಟರೆ, ಮತ್ತೆ ಈ ಕಡೆ ಸುಳಿದೇ ಇಲ್ಲ.

ವಿದೇಶಿ ಯುವತಿಯನ್ನು ಮದುವೆಯಾದ ಮಗನನ್ನು ಒಪ್ಪಿಕೊಳ್ಳುವುದು ಮಯಾಂಕ್ ತಂದೆ ಸತ್ಯನ್‌ಗೆ ಸಾಧ್ಯವಾಗಲೇ ಇಲ್ಲ. ಆದ್ದರಿಂದ ತಂದೆ-ಮಗನ ಸಂಬಂಧವೂ ಹಳಸಿತ್ತು. ಹೌರ್ ನಿಲ್ದಾಣದಲ್ಲಿ ರೈಲೊಂದನ್ನು ಹತ್ತುವಾಗ ಹೃದಯಾಘಾತಕ್ಕೆ ಒಳಗಾಗಿದ್ದ ಸತ್ಯನ್, ತಮ್ಮ ಅಂತಿಮ ದಿನಗಳನ್ನು ವೃದ್ಧಾಶ್ರಮವೊಂದರಲ್ಲಿ ಕಳೆದಿದ್ದರು.

ಮಯಾಂಕ್ ಅಕ್ಕ ಕಂಪ್ಯೂಟರ್ ಸೈನ್ಸ್ ಎಂಜಿನಿಯರ್ ಆಗಿದ್ದು, ಮುಂಬಯಿಯಲ್ಲಿ ಪತಿಯೊಂದಿಗೆ ನೆಲೆಸಿದ್ದಾರೆ.

ಸೇಂಟ್ ಮಿಶೆಲ್ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದ ಮಯಾಂಕ್ ಸದಾ ಮೊದಲ ಸ್ಥಾನ ಪಡೆಯುತ್ತಿದ್ದ. ಐಐಟಿ ಪ್ರವೇಶ ಪರೀಕ್ಷೆಯನ್ನು ಮೊದಲ ಯತ್ನದಲ್ಲಿಯೇ ಪಾಸ್ ಮಾಡಿ, 1,676 ರ‍್ಯಾಂಕ್ ಪಡೆದಿದ್ದ. 2002ಕ್ಕೆ ಅಮೆರಿಕಕ್ಕೆ ತೆರಳಿದ ಈತ 2011ರಲ್ಲಿ ಅಮೆರಿಕ ಪ್ರಜೆ ಆ್ಯಶ್ಲೆ ಹಸ್ತಿಯನ್ನು ವರಿಸಿದ್ದ. 2014ರಲ್ಲಿ ಅಮೆರಿಕದ ಪ್ರಭುತ್ವವೂ ಸಿಕ್ಕಿತ್ತು. 'ನಕ್ಷತ್ರದಂತೆ ಮಿನುಗುತ್ತಿದ್ದ ಮಯಾಂಕ್ ಈಗ ಪಾತಕಿಯಂತೆ ಕಾಣಿಸುತ್ತಿದ್ದಾನೆ,' ಎನ್ನುತ್ತಾರೆ ದರ್ಗಾಪುರದ ಜನರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ