Please enable javascript.ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರ,ಮಮತಾ ಬ್ಯಾನರ್ಜಿ ಸರ್ಕಾರಕ್ಕೆ ದಾಖಲೆ ಸಲ್ಲಿಸಲು ವಿಫಲ : ಬಿಜೆಪಿ ಅಭ್ಯರ್ಥಿಯ ನಾಮಪತ್ರ ತಿರಸ್ಕೃತ - lok sabha election 2024 : bjp's birbhum constituency candidate debasish dhar's nomination rejected - Vijay Karnataka

ಮಮತಾ ಬ್ಯಾನರ್ಜಿ ಸರ್ಕಾರಕ್ಕೆ ದಾಖಲೆ ಸಲ್ಲಿಸಲು ವಿಫಲ : ಬಿಜೆಪಿ ಅಭ್ಯರ್ಥಿಯ ನಾಮಪತ್ರ ತಿರಸ್ಕೃತ

Authored byಬಾಲರಾಜ್ ತಂತ್ರಿ | Vijaya Karnataka Web 28 Apr 2024, 12:01 pm
Subscribe

BJP Candidate Nomination Rejected : ನೋ ಡ್ಯೂ ಸರ್ಟಿಫಿಕೇಟ್ ನೀಡದ ಹಿನ್ನಲೆಯಲ್ಲಿ ಬಿಜೆಪಿ ಅಭ್ಯರ್ಥಿಯ ನಾಮಪತ್ರ ತಿರಸ್ಕೃತಗೊಂಡಿದೆ. ಇದು ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಸರ್ಕಾರದ ದ್ವೇಷದ ರಾಜಕಾರಣ ಎಂದು ಬಿಜೆಪಿ ಆರೋಪಿಸಿದೆ.

ಹೈಲೈಟ್ಸ್‌:

  • ಬೀರಭೂಮ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ
  • ಮಾಜಿ ಐಪಿಎಸ್ ಅಧಿಕಾರಿ ದೇಬಶಿಷ್ ಧರ್ ನಾಮಪತ್ರ ತಿರಸ್ಕೃತ
  • ಮಮತಾ ಬ್ಯಾನರ್ಜಿ ಸರ್ಕಾರದ ದ್ವೇಷದ ರಾಜಕಾರಣ ಎಂದ ಬಿಜೆಪಿ

wb
BJP Candidate Debasish Dhar's Nomination Rejected
ಕೋಲ್ಕತ್ತಾ : ಗುಜರಾತ್ ರಾಜ್ಯದ ಸೂರತ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯ ನಾಮಪತ್ರ ಇತ್ತೀಚೆಗೆ ತಿರಸ್ಕೃತಗೊಂಡಿತ್ತು. ಈಗ, ಪಶ್ಚಿಮ ಬಂಗಾಳದ ಬಿಜೆಪಿ ಅಭ್ಯರ್ಥಿಯ ನಾಮಪತ್ರವನ್ನು ಕೇಂದ್ರ ಚುನಾವಣಾ ಆಯೋಗ ತಿರಸ್ಕೃತಗೊಳಿಸಿದೆ.

ಮಮತಾ ಬ್ಯಾನರ್ಜಿ ಸರ್ಕಾರಕ್ಕೆ No Due Certificate ಸಲ್ಲಿಕೆಯಾಗದ ಹಿನ್ನಲೆಯಲ್ಲಿ ರಾಜ್ಯದ ಬೀರಭೂಮ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮತ್ತು ಮಾಜಿ ಐಪಿಎಸ್ ಅಧಿಕಾರಿಯೂ ಆಗಿರುವ ದೇಬಶಿಷ್ ಧರ್ ಅವರ ನಾಮಪತ್ರ ತಿರಸ್ಕೃತಗೊಂಡಿದೆ.
ಬಿಜೆಪಿ ಜತೆ ಸಿಬಿಐ ಸಂಚು: ಚುನಾವಣೆ ದಿನವೇ ದಾಳಿ ಪ್ರಶ್ನಿಸಿ ಆಯೋಗಕ್ಕೆ ಟಿಎಂಸಿ ದೂರು

ಆಯೋಗದ ಈ ನಿರ್ಧಾರವನ್ನು ಕೋಲ್ಕತ್ತಾ ಹೈಕೋರ್ಟ್ ನಲ್ಲಿ ಪ್ರಶ್ನಿಸುವುದಾಗಿ ದೇಬಶಿಷ್ ಹೇಳಿದ್ದಾರೆ. ಕಳೆದ ಶುಕ್ರವಾರ (ಏಪ್ರಿಲ್ 26) ಇವರ ನಾಮಪತ್ರವನ್ನು ಚುನಾವಣಾ ಆಯೋಗ ತಿರಸ್ಕೃತಗೊಳಿಸಿತ್ತು. ಮಾಜಿ ಐಪಿಎಸ್ ಅಧಿಕಾರಿ ದೇಬಶಿಷ್ ಅವರ ನಾಮಪತ್ರ ರದ್ದುಗೊಳ್ಳುವ ಸಾಧ್ಯತೆಯನ್ನು ಅರಿತ ಬಿಜೆಪಿ, ಎರಡನೇ ಅಭ್ಯರ್ಥಿ ದೇಬತನು ಭಟ್ಟಾಚಾರ್ಯ ಅವರನ್ನು ಕಣಕ್ಕಿಳಿಸಿದೆ.


“ಕೇಂದ್ರ ಅಥವಾ ರಾಜ್ಯ ಸರ್ಕಾರಿ ಸೇವೆಯಲ್ಲಿರುವವರು ರಾಜೀನಾಮೆ ನೀಡಿ, ಯಾವುದೇ ಚುನಾವಣೆಗೆ ಸ್ಪರ್ಧಿಸುವ No Due Certificate ನೀಡುವುದು ಕಡ್ಡಾಯವಾಗಿದೆ. ದೇಬಶಿಷ್ ಆ ದಾಖಲೆಯನ್ನು ಸಲ್ಲಿಸುವಲ್ಲಿ ವಿಫಲರಾದ ಕಾರಣ ಅವರ ನಾಮಪತ್ರವನ್ನು ರದ್ದುಗೊಳಿಸಲಾಗಿದೆ " ಎಂದು ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.


ತಮ್ಮ ಉಮೇದುವಾರಿಕೆಯನ್ನು ಚುನಾವಣಾ ಆಯೋಗಾ ರದ್ದುಗೊಳಿಸಿರುವುದನ್ನು ಪ್ರಶ್ನಿಸಿ ಕೋಲ್ಕತ್ತಾ ಹೈಕೋರ್ಟ್‌ಗೆ ಮೊರೆ ಹೋಗುವುದಾಗಿ ದೇಬಶಿಷ್ ಹೇಳಿದ್ದಾರೆ. ಇವರು ನ್ಯಾಯಮೂರ್ತಿ ಸಬ್ಯಸಾಚಿ ಭಟ್ಟಾಚಾರ್ಯ ಅವರ ಪೀಠಕ್ಕೆ ಮನವಿ ಮಾಡಿದ್ದರೂ, ತುರ್ತು ವಿಚಾರಣೆಗೆ ಈ ಅರ್ಜಿ ಸ್ವೀಕರಿಸಲು ನ್ಯಾಯಾಲಯ ನಿರಾಕರಿಸಿದೆ ಎಂದು ವರದಿಯಾಗಿದೆ.


ಚುನಾವಣೆ ನಡೆಯುತ್ತಿರುವ ಸಂದರ್ಭದಲ್ಲಿ ನ್ಯಾಯಾಲಯ ಮಧ್ಯ ಪ್ರವೇಶಿಸುವುದಿಲ್ಲ ಎನ್ನುವ ಮಾಹಿತಿ ಇದ್ದಿದ್ದರಿಂದ ನಾವು ಬ್ಯಾಕ್ ಅಪ್ ಅಭ್ಯರ್ಥಿಯಾಗಿ ದೇಬತನು ಭಟ್ಟಾಚಾರ್ಯ ಅವರನ್ನು ಕಣಕ್ಕಿಳಿಸಿದ್ದೆವು ಎಂದು ರಾಜ್ಯ ಬಿಜೆಪಿ ನಾಯಕರೊಬ್ಬರು ಹೇಳಿದ್ದಾರೆ.


ಪಶ್ಚಿಮ ಬಂಗಾಳ ಸರ್ಕಾರದ ಮೂಲಗಳ ಪ್ರಕಾರ ದೇಬಶಿಷ್ ಧರ್ ಅವರ ರಾಜೀನಾಮೆಯನ್ನು ಮಮತಾ ಬ್ಯಾನರ್ಜಿ ಸರ್ಕಾರ ಇನ್ನೂ ಆಂಗೀಕರಿಸಿಲ್ಲ. ಮೂರು ಬಾರಿಯ ಸಂಸದ ತೃಣಮೂಲ ಕಾಂಗ್ರೆಸ್ಸಿನ ಶತಾಬ್ದಿ ರಾಯ್ ಮತ್ತು ಈ ಕ್ಷೇತ್ರದಿಂದ ಮತ್ತೆ ಸ್ಪರ್ಧಿಸುತ್ತಿದ್ದಾರೆ. ಇಲ್ಲಿನ ಚುನಾವಣೆ ಮೇ 13ರಂದು ನಡೆಯಲಿದೆ.


ದೇಬಶಿಷ್ ಅವರ ನಾಮಪತ್ರ ತಿರಸ್ಕೃತಗೊಂಡಿರುವುದು ಮಮತಾ ಬ್ಯಾನರ್ಜಿಯವರ ದ್ವೇಷದ ರಾಜಕೀಯಕ್ಕೆ ಕಾರಣ ಎಂದು ಬಿಜೆಪಿ ಆರೋಪಿಸಿದೆ. ಚುನಾವಣಾ ಆಯೋಗದ ಮೇಲೆ ನಮಗೆ ಏನೂ ತಕರಾರು ಇಲ್ಲ. ಇದು ಸೋಲಿನ ಭಯದಿಂದ ಟಿಎಂಸಿ ಸರ್ಕಾರದ ನಿರ್ಧಾರ ಎಂದು ಬಿಜೆಪಿ ಕಿಡಿಕಾರಿದೆ.
ಬಾಲರಾಜ್ ತಂತ್ರಿ
ಲೇಖಕರ ಬಗ್ಗೆ
ಬಾಲರಾಜ್ ತಂತ್ರಿ
ಬಾಲರಾಜ್ ತಂತ್ರಿ ಅವರು ಕನ್ನಡ ಡಿಜಿಟಲ್ ಪತ್ರಿಕೋದ್ಯಮದಲ್ಲಿ ಸುಮಾರು ಹನ್ನೆರಡಕ್ಕೂ ಹೆಚ್ಚು ವರ್ಷಗಳಿಂದ ಸಕ್ರಿಯರಾಗಿದ್ದಾರೆ. ರಾಜ್ಯ, ರಾಷ್ಟ್ರೀಯ ಸುದ್ದಿಗಳು, ಮನೋರಂಜನೆ ಇವರ ಪ್ರಮುಖ ಆಸಕ್ತಿಯ ವಿಭಾಗಗಳು. ರಾಜಕೀಯ ಮತ್ತು ಮನೋರಂಜನಾ ಕ್ಷೇತ್ರದ ಹತ್ತು ಹಲವರ ವಿಡಿಯೋ ಸಂದರ್ಶನ ಮಾಡಿದ ಅನುಭವವೂ ಇವರಿಗಿದೆ. ರಾಜ್ಯ ಮತ್ತು ರಾಷ್ಟ್ರ ರಾಜಕೀಯದ ಆಗುಹೋಗುಗಳ ಬಗ್ಗೆ ವಿಶ್ಲೇಷಣೆ/ಬೈಲೈನ್ ಸುದ್ದಿಯನ್ನು ಬರೆಯುವುದರಲ್ಲಿ ಪರಿಣತರು. ಕನ್ನಡ ಸಿನಿಮಾಗಳ ಅಭಿಮಾನಿಯಾಗಿರುವ ಇವರ ಪ್ರಮುಖ ಹವ್ಯಾಸ ಪ್ರವಾಸ, ಕ್ರೀಡೆ, ಹಳೆಯ ಸಿನಿಮಾ ಹಾಡುಗಳನ್ನು ಕೇಳುವುದು.... ಇನ್ನಷ್ಟು ಓದಿ
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ