ಆ್ಯಪ್ನಗರ

ಧರಣಿ ಬದಲು ಮಾತನಾಡಿರೆಂದು ಜನಪ್ರತಿನಿಧಿಗಳಿಗೆ ಸ್ಪೀಕರ್‌ ಸಲಹೆ

''ಪ್ರಬುದ್ಧವಾಗಿ ಮಾತಾಡುವ ಮೂಲಕ ಸದಸ್ಯರು ತಮ್ಮ ಸಲಹೆ-ಸೂಚನೆಗಳನ್ನು ನೀಡಬೇಕು. ಉತ್ತಮ ನಡತೆಯ ಮೂಲಕವೇ ಸರಕಾರವನ್ನು ಹೆಚ್ಚು ಹೊಣೆಗಾರಿಕೆಗೆ ಸಿಕ್ಕಿಸಬಹುದು. ಅಂತಹ ಸತ್ಸಂಪ್ರದಾಯ ರೂಢಿಸಿಕೊಳ್ಳುವಂತೆ ಲೋಕಸಭೆಯ ಎಲ್ಲಾ ಸದಸ್ಯರಿಗೆ ಸಲಹೆ ಮಾಡಿದ್ದೇನೆ. ಲೋಕಸಭೆ ಅಧಿವೇಶನ ಉತ್ತಮವಾಗಿ ನಡೆದರೆ, ವಿಧಾನಸಭೆಗಳ ಕಲಾಪ ಕೂಡ ಉತ್ತಮವಾಗಿ ನಡೆಯಲು ಸಾಧ್ಯ,'' ಎಂದು ಓಂ ಬಿರ್ಲಾ ಹೇಳಿದರು.

PTI 8 Jul 2019, 5:00 am
ಜೈಪುರ: ಸದನದಲ್ಲಿ ಧರಣಿ ನಡೆಸಿ ಹೀರೋ ಆಗುವ ಕಾಲ ಮುಗಿದಿದೆ, ಈಗೇನಿದ್ದರೂ ಪ್ರಬುದ್ಧವಾಗಿ ಮಾತಾಡುವ ಸದಸ್ಯರನ್ನು ಮಾತ್ರ ಜನ ಗೌರವಿಸುತ್ತಾರೆ ಎಂದು ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ ಹೇಳಿದ್ದಾರೆ.
Vijaya Karnataka Web birla

ಭಾನುವಾರ ರಾಜಸ್ಥಾನ ವಿಧಾನಸಭೆ ಸದಸ್ಯರ ಒಂದು ದಿನದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಗಲಾಟೆ-ಗದ್ದಲದಿಂದ ಗುಣಾತ್ಮಕವಾದದ್ದೇನನ್ನೂ ಸಾಧಿಸಲು ಸಾಧ್ಯವಿಲ್ಲ. ಹೆಚ್ಚೆಂದರೆ ಅದರಿಂದ ಕಲಾಪ ಮುಂದೂಡಿಕೆಯಾಗಬಹುದಷ್ಟೇ ಎಂದರು.
''ಪ್ರಬುದ್ಧವಾಗಿ ಮಾತಾಡುವ ಮೂಲಕ ಸದಸ್ಯರು ತಮ್ಮ ಸಲಹೆ-ಸೂಚನೆಗಳನ್ನು ನೀಡಬೇಕು. ಉತ್ತಮ ನಡತೆಯ ಮೂಲಕವೇ ಸರಕಾರವನ್ನು ಹೆಚ್ಚು ಹೊಣೆಗಾರಿಕೆಗೆ ಸಿಕ್ಕಿಸಬಹುದು. ಅಂತಹ ಸತ್ಸಂಪ್ರದಾಯ ರೂಢಿಸಿಕೊಳ್ಳುವಂತೆ ಲೋಕಸಭೆಯ ಎಲ್ಲಾ ಸದಸ್ಯರಿಗೆ ಸಲಹೆ ಮಾಡಿದ್ದೇನೆ. ಲೋಕಸಭೆ ಅಧಿವೇಶನ ಉತ್ತಮವಾಗಿ ನಡೆದರೆ, ವಿಧಾನಸಭೆಗಳ ಕಲಾಪ ಕೂಡ ಉತ್ತಮವಾಗಿ ನಡೆಯಲು ಸಾಧ್ಯ,'' ಎಂದು ಓಂ ಬಿರ್ಲಾ ಹೇಳಿದರು.

ಸದಸ್ಯರು ಕಲಾಪದ ನಿಯಮಾವಳಿ ಅರಿತು ವಿಷಯಾಧಾರಿತ ಚರ್ಚೆ ಮಾಡಬೇಕು ಎಂದ ಅವರು, ಯಾವುದೇ ಆರೋಪ ಮಾಡುವ ಮೊದಲು ಸಾಕ್ಷ್ಯಾಧಾರ ಇಟ್ಟುಕೊಳ್ಳಬೇಕು. ಸುದ್ದಿ ಮಾಡುವುದಕ್ಕಾಗಿ ಸುಳ್ಳು ಆರೋಪ ಮಾಡುವುದು ಸರಿಯಲ್ಲ ಎಂದು ಕಿವಿ ಮಾತು ಹೇಳಿದರು.
ಸರಕಾರವನ್ನು ಹೆಚ್ಚು ಹೊಣೆಗಾರಿಕೆಗೆ ಒಳಪಡಿಸಲು ದೀರ್ಘಾವಧಿಯ ಅಧಿವೇಶನಗಳನ್ನು ನಡೆಸುವ ಅಗತ್ಯ ಇದೆ. ಶಾಸಕರು ಕೂಡ ಹೆಚ್ಚೆಚ್ಚು ಪ್ರಶ್ನೆಗಳನ್ನು ಕೇಳಿಬೇಕು ಎಂದು ಇದೇ ವೇಳೆ ಸ್ಪೀಕರ್‌ ಸಲಹೆ ಮಾಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ