ಆ್ಯಪ್ನಗರ

'ತಾಜ್‌ ಮಹೋತ್ಸವ'ದಲ್ಲಿ ಈ ಬಾರಿಯಿಂದ ರಾಮಲೀಲೆ!

ತಾಜ್‌ ಮಹಲ್‌ ವಿಚಾರವಾಗಿ ಉತ್ತರ ಪ್ರದೇಶದ ಯೋಗಿ ಸರಕಾರ ಹೊಸ ವಿವಾದವನ್ನು ಎಬ್ಬಿಸಿದ್ದು, ಪ್ರತೀ ವರ್ಷದಂತೆ ನಡೆಯುವ ತಾಜ್‌ ಮಹೋತ್ಸವದಲ್ಲಿ ಈ ಬಾರಿ ರಾಮಲೀಲೆಯನ್ನು ಪ್ರದರ್ಶಿಸಲಾಗುತ್ತದೆ ಎಂದು ಘೊಷಿಸಲಾಗಿದೆ

Vijaya Karnataka Web 5 Feb 2018, 5:05 pm
ಲಖನೌ: ತಾಜ್‌ ಮಹಲ್‌ ವಿಚಾರವಾಗಿ ಉತ್ತರ ಪ್ರದೇಶದ ಯೋಗಿ ಸರಕಾರ ಹೊಸ ವಿವಾದವನ್ನು ಎಬ್ಬಿಸಿದ್ದು, ಪ್ರತೀ ವರ್ಷದಂತೆ ನಡೆಯುವ ತಾಜ್‌ ಮಹೋತ್ಸವದಲ್ಲಿ ಈ ಬಾರಿ ರಾಮಲೀಲೆಯನ್ನು ಪ್ರದರ್ಶಿಸಲಾಗುತ್ತದೆ ಎಂದು ಘೋಷಿಸಲಾಗಿದೆ
Vijaya Karnataka Web lord ramas drama in taj mahotsav
'ತಾಜ್‌ ಮಹೋತ್ಸವ'ದಲ್ಲಿ ಈ ಬಾರಿಯಿಂದ ರಾಮಲೀಲೆ!


ಇದೇ ತಿಂಗಳ 18-27ರ ವರೆಗೆ ಶಿಲ್ಪಗ್ರಾಮದಲ್ಲಿ ನಡೆಯುವ ತಾಜ್‌ ಮಹೋತ್ಸವದಲ್ಲಿ ಮೊಘಲ್ ಸಂಸ್ಕೃತಿಯನ್ನು ಬಿಂಬಿಸಲಾಗುತ್ತಿತ್ತು. ಆದರೆ ಈ ಬಾರಿ ಈ ಕಾರ್ಯಕ್ರಮದಲ್ಲಿ ರಾಮ ಲೀಲೆಯನ್ನೂ ಸಹ ಬಿಂಬಿಸಲಾಗುತ್ತದೆ ಎಂದು ಸ್ಥಳೀಯ ಆಡಳಿತ ಮಂಡಳಿ ಹೇಳಿರುವುದಾಗಿ ವರದಿಯಾಗಿದೆ.

ಪ್ರತೀ ವರ್ಷದಂತೆ ಈ ವರ್ಷದಂತೆ ನಾವು ಜನರಿಂದ ತಾಜ್‌ ಮಹೋತ್ಸವವನ್ನು ಆಚರಿಸುವ ಕುರಿತು ಅಭಿಪ್ರಾಯ ಹಾಗೂ ಸಲಹೆಯನ್ನು ಕೇಳಿದ್ದೆವು. ಪ್ರತಿಯಾಗಿ ನಮಗೆ ಒಟ್ಟಾರೆ 180-185 ಸಲಹೆಗಳು ಬಂದಿದ್ದವು. ಇದರಲ್ಲಿ ಧಾರೋಹರ್‌ ವಿಷಯವನ್ನು ನಾವು ಆಯ್ಕೆ ಮಾಡಿಕೊಂಡೆವು ಎಂದು ರಾಜ್ಯ ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕ ದಿನೇಶ್ ಕುಮಾರ್ ಹೇಳಿದ್ದಾರೆ.

ಹೊಸ ನಿಯಮದ ಕುರಿತು ವಿರೋಧ ವ್ಯಕ್ತ ಪಡಿಸಿರುವ ಸಮಾಜವಾದಿ ಪಕ್ಷದ ರಾಜ್ಯಾಧ್ಯಕ್ಷ ಅಖಿಲೇಶ್‌ ಯಾದವ್‌, ಇದೊಂದು ರಾಜಕೀಯ ನಾಟಕ, ಮುಂದಿನ ಚುನಾವಣೆಗಾಗಿ ಈ ರೀತಿಯ ನಾಟಕವನ್ನು ಯೋಗಿ ಸರಕಾರ ಮಾಡುತ್ತಿದೆ ಎಂದು ಅಖಿಲೇಶ್‌ ಆರೋಪಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ