ಆ್ಯಪ್ನಗರ

ಲವ್‌ ಜಿಹಾದ್‌ ಪ್ರಕರಣ: ಭಯೋತ್ಪಾದಕರನ್ನು ಮನೆಯೊಳಗೆ ಇಟ್ಟುಕೊಳ್ಳಲಾರೆ ಎಂದ ಅಶೋಕನ್‌

'ಲವ್‌ ಜಿಹಾದ್‌' ಪ್ರಕರಣದ ಕೇಂದ್ರ ಬಿಂದುವಾಗಿರುವ ಕೇರಳದ ಯುವತಿ ಹಾದಿಯಾಗೆ ಶಿಕ್ಷಣ ಮುಂದುವರಿಸಲು ಅವಕಾಶ ನೀಡಿದ ಸುಪ್ರೀಂ ಕೋರ್ಟ್‌ ತೀರ್ಪನ್ನು ಆಕೆಯ ತಂದೆ ಸ್ವಾಗತಿಸಿದ್ದಾರೆ.

PTI 28 Nov 2017, 4:31 pm
ಹೊಸದಿಲ್ಲಿ: 'ಲವ್‌ ಜಿಹಾದ್‌' ಪ್ರಕರಣದ ಕೇಂದ್ರ ಬಿಂದುವಾಗಿರುವ ಕೇರಳದ ಯುವತಿ ಹಾದಿಯಾಗೆ ಶಿಕ್ಷಣ ಮುಂದುವರಿಸಲು ಅವಕಾಶ ನೀಡಿದ ಸುಪ್ರೀಂ ಕೋರ್ಟ್‌ ತೀರ್ಪನ್ನು ಆಕೆಯ ತಂದೆ ಸ್ವಾಗತಿಸಿದ್ದಾರೆ.
Vijaya Karnataka Web love jihad case cannot have a terrorist in the family says hadiyas father
ಲವ್‌ ಜಿಹಾದ್‌ ಪ್ರಕರಣ: ಭಯೋತ್ಪಾದಕರನ್ನು ಮನೆಯೊಳಗೆ ಇಟ್ಟುಕೊಳ್ಳಲಾರೆ ಎಂದ ಅಶೋಕನ್‌


ಅಂತರ್‌-ಧರ್ಮೀಯ ಮದುವೆಗಳ ಕುರಿತ ನಿಮ್ಮ ನಿಲುವೇನು ಎಂಬ ಪ್ರಶ್ನೆಗೆ ಹಾದಿಯಾ ತಂದೆ ಕೆ.ಎಂ ಅಶೋಕನ್, 'ಒಂದು ಧರ್ಮ ಮತ್ತು ಒಬ್ಬ ದೇವರಲ್ಲಿ ನನಗೆ ನಂಬಿಕೆಯಿದೆ; ಆದರೆ ಕುಟುಂಬದಲ್ಲಿ ಭಯೋತ್ಪಾದಕರನ್ನು ಇಟ್ಟುಕೊಳ್ಳಲು ಸಾಧ್ಯವಿಲ್ಲ' ಎಂದು ಉತ್ತರಿಸಿದರು.

'ಇಸ್ಲಾಂಗೆ ಮತಾಂತರಗೊಂಡ ಬಳಿಕ ತಾನು ತೆರಳಬೇಕಿದ್ದ ಸಿರಿಯಾದ ಬಗ್ಗೆ ಹಾದಿಯಾಗೆ ಯಾವುದೇ ಕಲ್ಪನೆಯಿಲ್ಲ' ಎಂದು ಅಶೋಕನ್‌ ನುಡಿದರು.

'ನನ್ನ ಕುಟುಂಬದಲ್ಲಿ ಭಯೋತ್ಪಾದಕರನ್ನು ಇಟ್ಟುಕೊಳ್ಳಲಾರೆ' ಎಂದು ಅವರು ಸ್ಪಷ್ಟಪಡಿಸಿದರು.

'ಲವ್‌ ಜಿಹಾದ್‌' ಬಲಿಪಶು ಎನ್ನಲಾದ 25 ವರ್ಷದ ಯುವತಿ ಹಾದಿಯಾಳನ್ನು ಹೆತ್ತವರ ವಶದಿಂದ ಸುಪ್ರೀಂ ಕೋರ್ಟ್‌ ಮಂಗಳವಾರ ಮುಕ್ತಗೊಳಿಸಿದ್ದು, ಆಕೆಯ ಶಿಕ್ಷಣ ಮುಂದುವರಿಸಲು ಅನುಮತಿ ನೀಡಿತು. ತನ್ನ ಗಂಡ ಶಫೀನ್ ಜಹಾನ್ ಜತೆ ತೆರಳಲು ಅನುಮತಿ ನೀಡಬೇಕೆಂದೂ ಹಾದಿಯಾ ಕೋರಿದ್ದಳು.

'ಆಕೆಯ ಶಿಕ್ಷಣಕ್ಕೆ ಅಡ್ಡಿಯಾದ ಈ ಎಲ್ಲ ಕಹಿ ಅನುಭವಗಳ ಬಗ್ಗೆ ನನಗೆ ಬೇಸರವಿದೆ. ಆದರೆ ಈಗ ಆಕೆಗೆ ಶಿಕ್ಷಣ ಮುಂದುವರಿಸಲು ಕೋರ್ಟ್‌ ಅನುಮತಿ ನೀಡಿರುವುದು ಸಂತಸ ತಂದಿದೆ' ಎಂದು ಅಶೋಕನ್‌ ಸುದ್ದಿಗಾರರಿಗೆ ತಿಳಿಸಿದರು.

ಆಕೆಯನ್ನು ಗೃಹಬಂಧನದಲ್ಲಿಡಲಾಗಿತ್ತು ಎಂಬ ಆರೋಪಗಳನ್ನು ಅಶೋಕನ್‌ ಅಲ್ಲಗಳೆದರು. ಆದರೆ 'ಮನೆಯ ಒಳಗೆ ಮತ್ತು ಹೊರಗೆ ಪೊಲೀಸರು ಆಕೆಯನ್ನು ಸುತ್ತುವರಿದಿದ್ದರು' ಎಂದು ಅವರು ತಿಳಿಸಿದರು.

ಅಗತ್ಯವಿದ್ದಾಗ ಮತ್ತು ಕೋರ್ಟ್‌ ಅನುಮತಿಸಿದಾಗ ಸೇಲಂಗೆ ತೆರಳಿ ಆಕೆಯನ್ನು ಭೇಟಿ ಮಾಡುವೆ ಎಂದು ಅಶೋಕನ್‌ ಹೇಳಿದರು.

'ನನ್ನ ಮಗುವಿನ ಪೋಷಕತ್ವವನ್ನು ಕೋರ್ಟ್‌ ಯಾರಿಗೂ ನೀಡಿಲ್ಲ' ಎಂದ ಅವರು, ಸಮೀಪದ ಬಂಧುಗಳಿಗೆ ಮಾತ್ರ ಆಕೆಯನ್ನು ಭೇಟಿಯಾಗಲು ಕೋರ್ಟ್‌ ಅನುಮತಿ ನೀಡುತ್ತದೆ ಎಂಬ ಭರವಸೆ ವ್ಯಕ್ತಪಡಿಸಿದರು.

ಹಾದಿಯಾ ಕೇರಳ ಪೊಲೀಸರ ರಕ್ಷಣೆಯಲ್ಲಿ ಸೇಲಂಗೆ ತೆರಳಿದ್ದಾಳೆ. ಸುಪ್ರೀಂ ಕೋರ್ಟ್‌ ಸೋಮವಾರದಂದು ಹಾದಿಯಾಳ ಜತೆ ಆಕೆಯ ತಂದೆಯ ಇಚ್ಛೆಗೆ ವಿರುದ್ಧವಾಗಿ ಅರ್ಧಗಂಟೆ ಕಾಲ ರಹಸ್ಯ ವಿಚಾರಣೆ ನಡೆಸಿತ್ತು. ನಂತರ ಆದಷ್ಟು ಬೇಗನೆ ಸೇಲಂಗೆ ತೆರಳಿ ಅಲ್ಲಿನ ಶಿವರಾಜ್‌ ಮೆಡಿಕಲ್‌ ಕಾಲೇಜ್‌ನಲ್ಲಿ ಹೋಮಿಯೋಪಥಿ ಅಧ್ಯಯನ ಮುಂದುವರಿಸಲು ಅಗತ್ಯ ರಕ್ಷಣೆ ನೀಡುವಂತೆ ಕೇರಳ ಪೊಲೀಸರಿಗೆ ಕೋರ್ಟ್‌ ಆದೇಶಿಸಿತ್ತು.

ಶಫಿನ್ ಜಹಾನ್‌ ಜತೆ ನಡೆದ ಹಾದಿಯಾಳ ನಿಖಾವನ್ನು ಮೇ 29ರಂದು ರದ್ದುಪಡಿಸಿದ ಕೇರಳ ಹೈಕೋರ್ಟ್‌, ಹಾದಿಯಾಳನ್ನು ಹೆತ್ತವರ ವಶಕ್ಕೆ ಒಪ್ಪಿಸಿತ್ತು.

ಹಿಂದೂ ಕುಟುಂಬದಲ್ಲಿ ಜನಿಸಿದ್ದ ಹಾದಿಯಾ ತನ್ನ ಮದುವೆಗೆ ಕೆಲವು ತಿಂಗಳ ಮೊದಲೇ ಇಸ್ಲಾಂಗೆ ಮತಾಂತರಗೊಂಡಿದ್ದಳು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ