ಆ್ಯಪ್ನಗರ

ತವರಿನ ಪ್ರೀತಿ, ಶಿವನ ಅನುಗ್ರಹದಿಂದ 'ವಿಷವನ್ನು' ಜೀರ್ಣಿಸಿಕೊಂಡೆ: ಪ್ರಧಾನಿ ಮೋದಿ

ತವರಿನ ಜನತೆ ತಮ್ಮ ಮೇಲಿಟ್ಟಿರುವ ಅಗಾಧ ಪ್ರೀತಿ-ವಿಶ್ವಾಸಗಳು ದೇಶದ ಸೇವೆ ಮಾಡಲು ತಮಗೆ ಹೊಸ ಚೈತನ್ಯ ನೀಡಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

TNN 8 Oct 2017, 3:00 pm
ವಡ್ನಾಗರ್: ತವರಿನ ಜನತೆ ತಮ್ಮ ಮೇಲಿಟ್ಟಿರುವ ಅಗಾಧ ಪ್ರೀತಿ-ವಿಶ್ವಾಸಗಳು ದೇಶದ ಸೇವೆ ಮಾಡಲು ತಮಗೆ ಹೊಸ ಚೈತನ್ಯ ನೀಡಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
Vijaya Karnataka Web love of vadnagars people has given me new energy to serve the nation modi
ತವರಿನ ಪ್ರೀತಿ, ಶಿವನ ಅನುಗ್ರಹದಿಂದ 'ವಿಷವನ್ನು' ಜೀರ್ಣಿಸಿಕೊಂಡೆ: ಪ್ರಧಾನಿ ಮೋದಿ


ಪ್ರಧಾನಿಯಾದ ಬಳಿಕ ಮೊದಲ ಬಾರಿಗೆ ಹುಟ್ಟೂರು ವಡ್ನಾಗರಕ್ಕೆ ಭಾನುವಾರ ಭೇಟಿ ನೀಡಿದ ಅವರು, ತವರಿನ ಜನತೆ ತಮ್ಮ ಮೇಲಿಟ್ಟಿರುವ ಅಪಾರ ಪ್ರೀತಿ ವಿಶ್ವಾಸಗಳಿಗೆ ಧನ್ಯವಾದ ಸಮರ್ಪಿಸಿದರು.

ಚುನಾವಣೆಗೆ ಸಜ್ಜಾಗುತ್ತಿರುವ ಗುಜರಾತ್‌ನಲ್ಲಿ ಎರಡು ದಿನಗಳ ಪ್ರವಾಸ ಕೈಗೊಂಡಿರುವ ಪ್ರಧಾನಿ ಎರಡನೇ ದಿನ ತವರಿಗೆ ಬಂದರು. ಮೆಹ್ಸಾನಾ ಜಿಲ್ಲೆಯಲ್ಲಿರುವ ವಡ್ನಾಗರದಲ್ಲಿ ಅವರು ಬೃಹತ್‌ ರೋಡ್‌ಶೋ ನಡೆಸಿದರು. ರಸ್ತೆಯ ಇಕ್ಕೆಲಗಳಲ್ಲಿ ಭಾರಿ ಸಂಖ್ಯೆಯ ಜನರು ಸಾಲುಗಟ್ಟಿ ನಿಂತು ನೆಚ್ಚಿನ ನಾಯಕನಿಗೆ ಅಭಿನಂದನೆ ಸಲ್ಲಿಸಿದರು.

I go back with your blessings and assure you that I will work even harder for the nation: PM @narendramodi to the people of Vadnagar pic.twitter.com/9hWUprRcT3 — PMO India (@PMOIndia) October 8, 2017 ಪ್ರಧಾನಿಯ ಸ್ವಾಗತಕ್ಕೆ ಇಡೀ ಪಟ್ಟಣವನ್ನು ಅಲಂಕರಿಸಲಾಗಿತ್ತು. ರೋಡ್‌ ಶೋ ನಡೆಸಿದ ಮಾರ್ಗದುದ್ದಕ್ಕೂ ಜನತೆ 'ಮೋದಿ-ಮೋದಿ' ಎಂದು ಘೋಷಣೆ ಕೂಗುತ್ತ ಹೂವಿನ ಮಳೆಗರೆದರು.

'ವಡ್ನಾಗರದಲ್ಲಿ ಜನರು ಇಂದು ನನ್ನ ಮೇಲೆ ತೋರಿದ ಪ್ರೀತಿಗೆ ಹೃದಯ ತುಂಬಿ ಬಂದಿದೆ. ದೇಶದ ಸೇವೆ ಮಾಡಲು ಇಂದು ನನಗೆ ಹೊಸ ಚೈತನ್ಯ ದೊರೆತಿದ್ದು, ನಿಮ್ಮ ಪ್ರೀತಿಗೆ ಚಿರಋಣಿ' ಎಂದು ಪ್ರಧಾನಿ ನುಡಿದರು.

Coming back to one's home town and receiving such a warm welcome is special. Whatever I am today is due to the values I have learnt on this soil, among you all in Vadnagar: PM @narendramodi pic.twitter.com/Ko9nR5I1ir — PMO India (@PMOIndia) October 8, 2017 ಮೊದಲ ಬಾರಿಗೆ ಗುಜರಾತಿನ ಮುಖ್ಯಮಂತ್ರಿಯಾದಂದಿನಿಂದ ಪ್ರಧಾನಿ ಹುದ್ದೆಗೆ ಏರಿ ಇಂದಿನ ದಿನದ ವರೆಗೂ ಸಾಗಿ ಬಂದ ಮಾರ್ಗವನ್ನು ಅವರು ಭಾವುಕರಾಗಿ ನೆನಪಿಸಿಕೊಂಡರು.

ಕೆಲವು ಜನರು 2001ರಿಂದಲೂ ತಮ್ಮ ವಿರುದ್ಧ ವಿಷವನ್ನೇ ಕಾರುತ್ತಿದ್ದರೂ, ಭಗವಾನ್‌ ಶಿವನು ತಮಗೆ ಶಕ್ತಿ ನೀಡಿದ್ದಾನೆ ಎಂದು ಮೋದಿ ನುಡಿದರು.

'ಭೋಲೆ ಬಾಬಾ (ಭಗವಾನ್ ಶಿವನ) ಆಶೀರ್ವಾದವೇ ನನಗೆ ವಿಷವನ್ನು ನುಂಗಿ ಅರಗಿಸಿಕೊಳ್ಳುವ ಶಕ್ತಿ ನೀಡಿದ್ದಾನೆ. ಆ ಶಕ್ತಿಯಿಂದಲೇ 2001ರಿಂದಲೂ ಕೆಲವರು ನನ್ನ ಮೇಲೆ ಕಾರುತ್ತಿರುವ ವಿಷವನ್ನು ಜೀರ್ಣಿಸಿಕೊಂಡಿದ್ದೇನೆ. ಆ ಶಕ್ತಿಯಿಂದಲೇ ನಾನು ಇದುವರೆಗೂ ತಾಯ್ನಾಡಿನ ಸೇವೆ ಮಾಡಲು ಸಾಧ್ಯವಾಗಿದೆ' ಎಂದು ಪ್ರಧಾನಿ ಸ್ಮರಿಸಿದರು.

'ನಾನು ವಡ್ಗಾನಗರದಿಂದ ಯಾತ್ರೆ ಆರಂಭಿಸಿ ಈಗ ಕಾಶಿಗೆ (ವಾರಾಣಸಿ) ತಲುಪಿದ್ದೇನೆ. ವಡ್ನಾಗರದಂತೆ ಕಾಶಿ ಕೂಡ ಭಗವಾನ್‌ ಶಿವನ ಪಟ್ಟಣವಾಗಿದೆ. ಅವನ ಅನುಗ್ರಹವೇ ನನಗೆ ದೊಡ್ಡ ಶಕ್ತಿ' ಎಂದು ಮೋದಿ ತಿಳಿಸಿದರು.

Love of Vadnagar's people has given me new energy to serve the nation: Modi

VADNAGAR: On his first visit to his hometown as Prime Minister, Narendra Modi on Sunday said the immense love showered by people of Vadnagar has given him a new energy to serve the nation with more zeal.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ