ಆ್ಯಪ್ನಗರ

ಮಧ್ಯಪ್ರದೇಶದ 16 'ಕೈ' ಶಾಸಕರ ರಾಜೀನಾಮೆ ಅಂಗೀಕಾರ, ಪತನದತ್ತ ಕಮಲ್‌ನಾಥ್‌ ಸರಕಾರ

ಮಧ್ಯಪ್ರದೇಶದ ವಿಧಾನಸಭೆಗೆ ಮಾರ್ಚ್‌ 10ರಂದು ರಾಜೀನಾಮೆ ನೀಡಿದ 16 ಶಾಸಕರ ರಾಜೀನಾಮೆಯನ್ನು ಸ್ಪೀಕರ್‌ ಎನ್‌.ಪಿ.ಪ್ರಜಾಪತಿ ಅಂಗೀಕರಿಸಿದ್ದಾರೆ. ಈ ಮೂಲಕ ಇಂದಿನ ವಿಶ್ವಾಸಮತಕ್ಕೂ ಮುನ್ನ ಕಮಲ್‌ನಾಥ್‌ ಸರ್ಕಾರ ಬಹುಮತ ಕಳೆದುಕೊಂಡಿದ್ದು, ಸರಕಾರ ಪತನಾವಗುವುದು ಖಚಿತವಾಗಿದೆ.

Vijaya Karnataka Web 20 Mar 2020, 12:25 am
ಭೋಪಾಲ್‌: ಮಧ್ಯಪ್ರದೇಶ ಮುಖ್ಯಮಂತ್ರಿ ಕಮಲ್‌ನಾಥ್‌ಗೆ ಇಂದು ವಿಶ್ವಾಸಮತ ಯಾಚಿಸಲು ಸುಪ್ರೀಂ ಕೋರ್ಟ್‌ ಆದೇಶ ನೀಡಿದ ಬೆನ್ನಲ್ಲಿಯೇ 16 ಕಾಂಗ್ರೆಸ್‌ ಶಾಸಕರ ರಾಜೀನಾಮೆಯನ್ನು ಸ್ಪೀಕರ್‌ ಅಂಗೀಕರಿಸಿದ್ದಾರೆ. ಈ ಮೂಲಕ ಕಮಲ್‌ನಾಥ್‌ ಸರಕಾರ ಪತನವಾಗುವುದು ಖಚಿತವಾಗಿದೆ.
Vijaya Karnataka Web SPEAKER


ಕಳೆದ ಎರಡು ವಾರಗಳಿಂದ ದೇಶದಲ್ಲಿ ಸಾಕಷ್ಟು ಸುದ್ದಿಯಾಗಿದ್ದ ಮಧ್ಯಪ್ರದೇಶ ರಾಜಕೀಯ ಬಿಕ್ಕಟ್ಟಿಗೆ ಇಂದು ತೆರೆಬೀಳಲಿದೆ. ಸ್ಪೀಕರ್‌ ಎನ್‌.ಪಿ.ಪ್ರಜಾಪತಿ ಮಾರ್ಚ್‌ 10ನೇ ತಾರೀಕಿನಂದು ರಾಜೀನಾಮೆ ನೀಡಿದ 16 ಕಾಂಗ್ರೆಸ್‌ ಶಾಸಕರ ರಾಜೀನಾಮೆಯನ್ನು ಅಂಗೀಕರಿಸಿದ್ದು, ವಿಶ್ವಾಸಮತಕ್ಕೂ ಮುನ್ನ ಕಮಲ್‌ನಾಥ್‌ ಸರಕಾರ ಬಹುಮತ ಕಳೆದುಕೊಂಡಂತಾಗಿದೆ.


ಬೆಂಗಳೂರಿನ ರೆಸಾರ್ಟ್‌ನಲ್ಲಿದ್ದ ಕಾಂಗ್ರೆಸ್‌ ಶಾಸಕರು ಮಾರ್ಚ್‌ 10ರಂದು ರಾಜೀನಾಮೆ ಪತ್ರವನ್ನು ಸ್ಪೀಕರ್‌ ಕಚೇರಿಗೆ ತಲುಪಿಸಿದ್ದರು. ಆದರೆ, ಕುದ್ದಾಗಿ ಬಂದು ಶಾಸಕರು ರಾಜೀನಾಮೆ ನೀಡದ್ದರಿಂದ ಸ್ಪೀಕರ್‌ ಇಷ್ಟು ದಿನ ರಾಜೀನಾಮೆ ಅಂಗೀಕರಿಸುವುದನ್ನು ಮುಂದೂಡಿದ್ದರು ಎನ್ನಲಾಗಿದೆ. ಅದಲ್ಲದೇ, ಕರ್ನಾಟಕದಂತೆ ರಾಜೀನಾಮೆ ನೀಡಿದ ಶಾಸಕರನ್ನು ಅನರ್ಹಗೊಳಿಸುವ ಸಾಧ್ಯತೆಯೂ ಇತ್ತು ಎನ್ನಲಾಗಿತ್ತು. ಆದರೆ, ಇದೆಲ್ಲದಕ್ಕೂ ತೆರೆ ಬಿದ್ದಿದ್ದು, 16 ಶಾಸಕರ ರಾಜೀನಾಮೆಯನ್ನು ಸ್ಪೀಕರ್‌ ಅಂಗೀಕರಿಸಿದ್ದಾರೆ.

ಸರಕಾರ-ರಾಜ್ಯಪಾಲರ ನಡುವೆ ಕಚ್ಚಾಟ, ಮಧ್ಯಪ್ರದೇಶ ವಿಶ್ವಾಸಮತಕ್ಕೆ ತಾತ್ಕಾಲಿಕ ಬ್ರೇಕ್‌

ಮಾರ್ಚ್‌ 16ರಂದು ರಾಜ್ಯಪಾಲರು ವಿಶ್ವಾಸಮತ ಯಾಚನೆಗೆ ಸಿಎಂ ಕಮಲ್‌ನಾಥ್‌ಗೆ ಸೂಚಿಸಿದ್ದರು. ಆದರೆ, ಕೊರೊನಾ ನೆಪ ಹೇಳಿ ಸದನವನ್ನು ಮುಂದೂಡಿದ್ದ ಕಮಲ್‌ನಾಥ್‌ ಸರಕಾರ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡಿತ್ತು. ಆದರೆ, ರಾಜ್ಯಪಾಲ ಲಾಲ್‌ಜಿ ಟಂಡನ್‌ ಮಾರ್ಚ್‌ 17ರಂದು ವಿಶ್ವಾಸಮತ ಯಾಚಿಸಲೇಬೇಕು ಇಲ್ಲದಿದ್ದರೆ, ನಿಮ್ಮ ಸರಕಾರಕ್ಕೆ ಬಹುಮತ ಇಲ್ಲವೆಂಬುದು ಅಧಿಕೃತವಾಗುತ್ತದೆ ಎಂದು ಸೂಚಿಸಿದ್ದರು.

ಮಧ್ಯಪ್ರದೇಶದ 16 ಸಚಿವರ ರಾಜೀನಾಮೆ, ಸರಕಾರ ಉಳಿಸಿಕೊಳ್ಳಲು ಕಮಲ್‌ನಾಥ್‌ ಶತಪ್ರಯತ್ನ

ರಾಜ್ಯಪಾಲರ ಎರಡನೇ ಸೂಚನೆಗೂ ತಲೆಕೆಡಸಿಕೊಳ್ಳದ ಕಮಲ್‌ನಾಥ್‌ ವಿರುದ್ಧ ಬಿಜೆಪಿ ಸುಪ್ರೀಂ ಕೋರ್ಟ್‌ ಮೊರೆ ಹೋಗಿತ್ತು. ವಿಶ್ವಾಸಮತ ಯಾಚನೆಗೆ ಆದೇಶ ನೀಡಿ ಎಂದು ಮನವಿ ಮಾಡಿಕೊಂಡಿತ್ತು. ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ ಶುಕ್ರವಾರ ಸಂಜೆ 5ಗಂಟೆಯ ಒಳಗಡೆ ವಿಶ್ವಾಸಮತ ಯಾಚಿಸಲು ಕಮಲ್‌ನಾಥ್‌ಗೆ ಅವಕಾಶ ನೀಡಿತ್ತು. ಆದರೆ, ಈಗ ವಿಶ್ವಾಸಮತ ಯಾಚನೆಗೂ ಮುನ್ನ ಸ್ಪೀಕರ್‌ ಶಾಸಕರ ರಾಜೀನಾಮೆ ಅಂಗೀಕರಿಸಿದ್ದರಿಂದ, ಕಮಲ್‌ನಾಥ್‌ ವಿಶ್ವಾಸಮತ ಯಾಚಿಸಿದೇ ವಿದಾಯದ ಭಾಷಣ ಮಾಡುವ ಸಾಧ್ಯತೆ ಇದೆ.

ಶುಕ್ರವಾರ ಸಂಜೆ 5 ಗಂಟೆ ಮೊದಲು ಬಹುಮತ ಸಾಬೀತುಪಡಿಸಿ: ಕಮಲ್‌ನಾಥ್‌ಗೆ ಸುಪ್ರೀಂ ಡೆಡ್‌ಲೈನ್‌

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ