ಆ್ಯಪ್ನಗರ

ನಮ್ಮ ಆಹಾರ ತಿಂದು, ನಮ್ಮ ಯೋಧರ ಮೇಲೆ ದಾಳಿ ನಡೆಸೋ ಪಾಕ್‌ಗೆ ಟೊಮ್ಯಾಟೋಗಳನ್ನು ಪೂರೈಕೆ ಮಾಡಲ್ಲ!

ರಾಷ್ಟ್ರದ ಪ್ರತಿಯೊಂದು ವರ್ಗದ ಜನರು ಪಾಕಿಸ್ತಾನದ ವಿರುದ್ಧ ಭಾರಿ ಅಸಮಾಧಾನಗೊಂಡಿದ್ದು, ಎಲ್ಲಾ ರೀತಿ ಸಂಬಂಧಗಳನ್ನು ಕಡಿದುಕೊಳ್ಳಲು ಮುಂದಾಗಿದ್ದಾರೆ. ವ್ಯಾಪಾರದಲ್ಲಿ ವೈಯಕ್ತಿಕವಾಗಿ ನಷ್ಟವಾದರೂ ಚಿಂತೆಯಿಲ್ಲ, ನಮ್ಮ ರಾಷ್ಟ್ರದ ಯೋಧರ ಮೇಲೆ ದಾಳಿ ನಡೆಸಿದವರಿಗೆ ತಕ್ಕ ಶಾಸ್ತಿ ಮಾಡಬೇಕು ಎಂಬ ನಿರ್ಧಾರಕ್ಕೆ ಬಂದಿದ್ದಾರೆ.

Indiatimes 20 Feb 2019, 11:52 am
ಇಂಧೋರ್‌: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಉಗ್ರರು ನಡೆಸಿದ ಭಯಾನಕ ದಾಳಿ ವಿರುದ್ಧ ಭಾರತದಾದ್ಯಂತ ಆಕ್ರೋಶ ವ್ಯಕ್ತವಾಗಿದ್ದು, ಜನಸಾಮಾನ್ಯರು ಪಾಕಿಸ್ತಾನ ಜತೆಗಿನ ಎಲ್ಲಾ ಬಗೆಯ ಸಂಬಂಧಗಳನ್ನು ಕಡಿದುಕೊಳ್ಳಲು ಮುಂದಾಗಿದ್ದಾರೆ.
Vijaya Karnataka Web tomatoes


ನಮ್ಮ ಆಹಾರ ತಿಂದು, ನಮ್ಮ ಸೈನಿಕರ ಮೇಲೆ ದಾಳಿ ನಡೆಸುವ ಪಾಕಿಸ್ತಾನಕ್ಕೆ ನಾವು ಬೆಳೆದ ಟೊಮ್ಯಾಟೋಗಳನ್ನು ಪೂರೈಕೆ ಮಾಡುವುದಿಲ್ಲ ಎಂದು ಮಧ್ಯಪ್ರದೇಶದ ಜಭುವಾ ಜಿಲ್ಲೆಯ ರೈತರ ಒಕ್ಕೂಟ ಕಠಿಣ ನಿರ್ಧಾರ ಕೈಗೊಂಡಿದ್ದಾರೆ. ಜಭುವಾ ಜಿಲ್ಲೆಯಲ್ಲಿ ಸುಮಾರು 5,000 ರೈತರಿದ್ದು, ಟೊಮ್ಯಾಟೋಗಳನ್ನು ಬೆಳೆಯುತ್ತಿದ್ದಾರೆ. ವಿದೇಶಗಳಿಗೆ ರಾಷ್ಟ್ರದಿಂದ ಟೊಮ್ಯಾಟೋ ಪೂರೈಕೆ ಮಾಡುವ ಪ್ರದೇಶಗಳಲ್ಲಿ ಜಭುವಾ ಪ್ರಮುಖವಾಗಿದೆ. ಪಾಕಿಸ್ತಾನಕ್ಕೆ ಅತಿಹೆಚ್ಚು ಟೊಮ್ಯಾಟೋಗಳನ್ನು ಜಭುವಾ ಜಿಲ್ಲೆಯಿಂದ ಪೂರೈಕೆ ಮಾಡಲಾಗುತ್ತಿತ್ತು.

'ನಾವು ರೈತರು. ಟೊಮ್ಯಾಟೋಗಳನ್ನು ಬೆಳೆಯುತ್ತೇವೆ. ಪಾಕಿಸ್ತಾನಕ್ಕೆ ಟೊಮ್ಯಾಟೋಗಳನ್ನು ಪೂರೈಕೆ ಮಾಡುತ್ತೇವೆ. ನಮ್ಮ ಆಹಾರವನ್ನು ತಿಂದು ನಮ್ಮ ಸೈನಿಕರ ಮೇಲೆ ದಾಳಿ ಮಾಡುತ್ತಾರೆ. ಪಾಕಿಸ್ತಾನವನ್ನು ನಾಶ ಮಾಡಬೇಕು. ಪಾಕಿಸ್ತಾನಕ್ಕೆ ಬೇರೆ ಯಾವುದೇ ರಾಷ್ಟ್ರ ಟೊಮ್ಯಾಟೋಗಳನ್ನು ಪೂರೈಕೆ ಮಾಡುವುದನ್ನು ತಡೆಯುತ್ತೇವೆ' ಎಂದು ಟೊಮ್ಯಾಟೋ ಬೆಳೆಗಾರ ರವೀಂದ್ರ ಪಾಟಿದಾರ್‌ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ನಾವಿನ್ನು ಟೊಮ್ಯಾಟೋ ಪೂರೈಕೆ ಸ್ಥಗಿತಗೊಳಿಸುವುದರಿಂದ ನಮಗಾಗುವ ನಷ್ಟದ ಬಗ್ಗೆ ಚಿಂತಿಸುವುದಿಲ್ಲ. ಸೈನಿಕರೇ ಇಲ್ಲದಿದ್ದರೆ ಹೇಗೆ ರಾಷ್ಟ್ರ ಸಂರಕ್ಷಣೆ ಸಾಧ್ಯ? ಎಂದು ಟೊಮ್ಯಾಟೋ ಬೆಳೆಗಾರ ಬಸಂತಿ ಲಾಲ್‌ ಪಾಟಿದಾರ್‌ ಆಕ್ರೋಶದಿಂದ ಗುಡುಗಿದ್ದಾರೆ.

ಮಧ್ಯಪ್ರದೇಶದ ಮುಖ್ಯಮಂತ್ರಿ ಕಮಲ್‌ನಾಥ್‌ ರೈತರ ನಿರ್ಧಾರವನ್ನು ಶ್ಲಾಘಿಸಿದ್ದಾರೆ. ಜಭುವಾ ಜಿಲ್ಲೆಯ ಸಹೋದರರು ತೆಗೆದುಕೊಂಡ ನಿರ್ಧಾರವನ್ನು ಅಭಿನಂದಿಸುತ್ತೇನೆ. ಅವರ ರಾಷ್ಟ್ರಭಕ್ತಿಯನ್ನು ಬಹಳ ಮೆಚ್ಚಿಕೊಂಡಿದ್ದೇನೆ ಎಂದಿದ್ದಾರೆ.

ಇತ್ತೀಚೆಗೆ ಚಹಾ ಪೂರೈಕೆದಾರರ ಒಕ್ಕೂಟ ನಷ್ಟವಾದರೂ ಪರವಾಗಿಲ್ಲ, ಪಾಕಿಸ್ತಾನಕ್ಕೆ ಚಹಾ ಪೂರೈಕೆ ಮಾಡುವುದಿಲ್ಲ ಎಂದಿತ್ತು. ಇದೀಗ ಟೊಮ್ಯಾಟೋ ಬೆಳೆಗಾರರ ಒಕ್ಕೂಟವೂ ಪಾಕಿಸ್ತಾನಕ್ಕೆ ಟೊಮ್ಯಾಟೋಗಳನ್ನು ಪೂರೈಕೆ ಮಾಡುವುದನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ.

ನಷ್ಟವಾದರೂ ಚಿಂತೆಯಿಲ್ಲ, ಪಾಕಿಸ್ತಾನಕ್ಕೆ ಚಹಾ ಪೂರೈಕೆ ಮಾಡುವುದಿಲ್ಲ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ