ಆ್ಯಪ್ನಗರ

3300 ಕೋಟಿ ರೂ.ನಲ್ಲಿ 300 ಸ್ಮಾರ್ಟ್‌ ಗೋಶಾಲೆ ನಿರ್ಮಾಣ

ವಿಧಾನಸಭಾ ಚುನಾವಣೆ ಪ್ರಣಾಳಿಕೆಯಲ್ಲಿನ ಭರವಸೆಯಂತೆ ರಾಜ್ಯಾದ್ಯಂತ 300 ಗೋಶಾಲೆಗಳನ್ನು ತೆರೆಯಲು ಮಧ್ಯಪ್ರದೇಶ ಸರಕಾರ ಖಾಸಗಿ ಕಂಪನಿ ಜತೆಗೆ ಒಪ್ಪಂದ ಮಾಡಿಕೊಳ್ಳುವ ಸಿದ್ಧತೆಯಲ್ಲಿದೆ.

Agencies 16 Jun 2019, 5:00 am
ಭೋಪಾಲ್‌: ವಿಧಾನಸಭಾ ಚುನಾವಣೆ ಪ್ರಣಾಳಿಕೆಯಲ್ಲಿನ ಭರವಸೆಯಂತೆ ರಾಜ್ಯಾದ್ಯಂತ 300 ಗೋಶಾಲೆಗಳನ್ನು ತೆರೆಯಲು ಮಧ್ಯಪ್ರದೇಶ ಸಿಎಂ ಕಮಲ್‌ನಾಥ್‌ ಖಾಸಗಿ ಕಂಪನಿಯೊಂದರ ಜತೆಗೆ ಒಪ್ಪಂದ ಮಾಡಿಕೊಳ್ಳುವ ಅಂತಿಮ ಸಿದ್ಧತೆಯಲ್ಲಿದ್ದಾರೆ.
Vijaya Karnataka Web smart goshala


ಬಿಡಾಡಿ ಹಸುಗಳನ್ನು ಪೋಷಿಸುವ ಸುಮಾರು 300 ಸ್ಮಾರ್ಟ್‌ ಗೋಶಾಲೆಗಳನ್ನು ಮುಂದಿನ ಐದು ವರ್ಷಗಳಲ್ಲಿ ಪಶುಸಂಗೋಪನಾ ಇಲಾಖೆ ನಿರ್ಮಿಸಲಿದೆ.

ಪ್ರತಿ ಗೋಶಾಲೆಗೆ 50 ಎಕರೆ ಭೂಮಿ ನೀಡುವಂತೆ ಖಾಸಗಿ ಕಂಪನಿ ಬೇಡಿಕೆ ಇಟ್ಟಿದೆ. ಹೈಟೆಕ್‌ ಗೋಶಾಲೆ ನಿರ್ಮಾಣಕ್ಕೆ ಪ್ರತಿ ಗೋಶಾಲೆಗೆ ಕಂಪನಿ 11 ಕೋಟಿ ರೂ. ವೆಚ್ಚ ಮಾಡುವುದಾಗಿ ಹೇಳಿದೆ. ಒಟ್ಟು 3300 ಕೋಟಿ ರೂ. ಮೊತ್ತದ ಯೋಜನೆ ಇದಾಗಿದೆ ಎಂದು ಪಶುಸಂಗೋಪನಾ ಸಚಿವ ಲಖನ್‌ ಸಿಂಗ್‌ ಯಾದವ್‌ ತಿಳಿಸಿದ್ದಾರೆ.

ಗೋಶಾಲೆಯಲ್ಲಿನ ಹಸುಗಳ ಹಾಲು,ಗೋಮೂತ್ರ, ಸಗಣಿ, ಬಾಲದಲ್ಲಿನ ಕೂದಲನ್ನು ರಫ್ತು ಮಾಡುವ ಮೂಲಕ ಸರಕಾರ ಆದಾಯ ಗಳಿಸಲಿದೆ. ಒಂದು ವೇಳೆ ಕಂಪನಿಯಿಂದ ಗೋಶಾಲೆ ನಡೆಸಲು ಸಾಧ್ಯವಿಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾದರೆ, ಸರಕಾರವೇ ತನ್ನ ಸುಪರ್ದಿಗೆ ಪಡೆದು ನಿರ್ವಹಿಸಲಿದೆ ಎಂದು ಅವರು ಹೇಳಿದ್ದಾರೆ.

ಸರಕಾರ ರಚನೆ ಮಾಡಿದ ಕೂಡಲೇ ಸಿಎಂ ಕಮಲ್‌ನಾಥ್‌ ಜಾನುವಾರಗಳ ಆಹಾರಕ್ಕೆ ನೀಡಲಾಗುತ್ತಿದ್ದ ಸಬ್ಸಿಡಿಯನ್ನು 10 ರೂ. ನಿಂದ 20 ರೂ.ಗೆ (ಪ್ರತಿದಿನ) ಹೆಚ್ಚಿಸಿದ್ದರು. ಜತೆಗೆ ರಾಜ್ಯಾದ್ಯಂತ 955 ಗೋಶಾಲೆಗಳನ್ನು ನಿರ್ಮಿಸುವ ಟೆಂಡರ್‌ಗೆ ಸಹಿ ಹಾಕಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ