ಆ್ಯಪ್ನಗರ

ಮಧ್ಯಪ್ರದೇಶ: 13 ತಿಂಗಳಲ್ಲಿ 33 ಹುಲಿಗಳ ಸಾವು

ಮಧ್ಯಪ್ರದೇಶದ ಶೆಹದೋಲ್‌ ಜಿಲ್ಲೆಯಲ್ಲಿ ಇನ್ನೊಂದು ಹುಲಿ ಸಾವನ್ನಪ್ಪಿದೆ. ಕಳೆದ 13 ತಿಂಗಳುಗಳಲ್ಲಿ ರಾಜ್ಯದಲ್ಲಿ ಹುಲಿಗಳ ಸಾವಿನ ಸಂಖ್ಯೆ 33ಕ್ಕೇರಿದೆ.

Vijaya Karnataka Web 27 Jan 2018, 4:25 pm
ಭೋಪಾಲ್‌: ಮಧ್ಯಪ್ರದೇಶದ ಶೆಹದೋಲ್‌ ಜಿಲ್ಲೆಯಲ್ಲಿ ಇನ್ನೊಂದು ಹುಲಿ ಸಾವನ್ನಪ್ಪಿದೆ. ಕಳೆದ 13 ತಿಂಗಳುಗಳಲ್ಲಿ ರಾಜ್ಯದಲ್ಲಿ ಸಾವಿಗೀಡಾದ ಹುಲಿಗಳ ಸಂಖ್ಯೆ 33ಕ್ಕೇರಿದೆ. ಇದರಿಂದಾಗಿ ಈ ಬಾರಿಯ ಹುಲಿ ಗಣತಿಯಲ್ಲಿ 'ಹುಲಿ ರಾಜ್ಯ' ಎಂಬ ಖ್ಯಾತಿಯನ್ನು ಉಳಿಸಿಕೊಳ್ಳಬೇಕೆಂಬ ಮಧ್ಯಪ್ರದೇಶದ ಮಹತ್ವಾಕಾಂಕ್ಷೆಗೆ ಭಾರೀ ಹಿನ್ನಡೆಯಾಗಿದೆ.
Vijaya Karnataka Web madhya pradesh tiger found dead in shahdol toll touches 33 in 13 months
ಮಧ್ಯಪ್ರದೇಶ: 13 ತಿಂಗಳಲ್ಲಿ 33 ಹುಲಿಗಳ ಸಾವು


ರಾಜ್ಯದಲ್ಲಿ ಹುಲಿಗಳ ರಕ್ಷಿತಾರಣ್ಯದಲ್ಲಿ ವಿದ್ಯುತ್‌ ಆಘಾತಕ್ಕೆ ಬಲಿಯಾಗಿರುವ ಹುಲಿಗಳ ಸಂಖ್ಯೆಯೇ ಅಧಿಕ ಎಂದು ತಜ್ಞರು ಬಲವಾಗಿ ನಂಬಿದ್ದಾರೆ.

ಜಗತ್ತಿನಲ್ಲೇ ಅತಿ ಹೆಚ್ಚು ವಿಸ್ತಾರವಾದ ಹುಲಿ ಸಂರಕ್ಷಣಾ ಕೇಂದ್ರ ಹೊಂದಿದ ಖ್ಯಾತಿ ಮಧ್ಯಪ್ರದೇಶದ್ದಾಗಿದೆ. ಜೈಸಿಂಗ್‌ನಗರ ಪ್ರಾಂತ್ಯದ ದೇವಹರ ಗ್ರಾಮದ ಕೃಷಿಭೂಮಿಯಲ್ಲಿ ಮೃತಪಟ್ಟ ಹುಲಿ ಪತ್ತೆಯಾಗಿದೆ. ಘಟನೆಯ ತನಿಖೆಗಾಗಿ ಹಲವು ತಂಡಗಳನ್ನು ಸ್ಥಳಕ್ಕೆ ಕಳುಹಿಸಲಾಗಿದೆ.

'ಮೇಲ್ನೋಟಕ್ಕೆ ಹುಲಿ ವಿದ್ಯುತ್‌ ಹರಿಯುತ್ತಿದ್ದ ಬೇಲಿಯ ಸಂಪರ್ಕಕ್ಕೆ ಬಂದು ಸ್ಥಳದಲ್ಲೇ ಸಾವನ್ನಪ್ಪಿದೆ. ತನಿಖಾ ತಂಡಗಳನ್ನು ಸ್ಥಳಕ್ಕೆ ಕಳುಹಿಸಲಾಗಿದೆ. ಹುಲಿಯ ದೇಹದ ಭಾಗಗಳು ಇಡಿಯಾಗಿವೆ' ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ನೀಲಗಾಯ್‌ (ಕಾಡು ದನ) ಮತ್ತು ಕಾಡು ಹಂದಿಗಳು ತೋಟ-ಗದ್ದೆಗಳಿಗೆ ನುಗ್ಗಿ ಬೆಳೆ ನಾಶ ಮಾಡುವುದನ್ನು ತಡೆಯಲು ರೈತರು ಅಕ್ರಮವಾಗಿ ಹೈ ವೋಲ್ಟೇಜ್‌ ವಿದ್ಯುತ್‌ ಬೇಲಿಗಳನ್ನು ಹಾಕಿಕೊಳ್ಳುತ್ತಾರೆ. ಇಂತಹ ಬೇಲಿಗೆಳಿಗೆ ಸಿಲುಕಿ ಹುಲಿಗಳು ಸಾಯುತ್ತಿವೆ ಎನ್ನುತ್ತಾರೆ ಹೆಸರು ಬಹಿರಂಗ ಪಡಿಸಲಿಚ್ಚಿಸದ ಅಧಿಕಾರಿ.

'ಸಂರಕ್ಷಿತಾರಣ್ಯದಲ್ಲಿ ಹುಲಿಗಳ ಸಂಖ್ಯೆ ಮಿತಿ ಮೀರಿದ್ದು, ಹುಲಿಗಳು ಹೊಸ ಹೊಸ ಪ್ರದೇಶಗಳನ್ನು ಅರಸಿ ಗದ್ದೆ-ತೋಟಗಳು ಸೇರಿದಂತೆ ಮಾನವ ವಸತಿ ಪ್ರದೇಶಗಳತ್ತ ಬರುತ್ತಿವೆ. ಇಂಥವುಗಳು ವಿದ್ಯುತ್‌ ಬೇಲಿಗೆ ಬಲಿಯಾಗುತ್ತಿವೆ' ಎಂದು ಅರಣ್ಯಾಧಿಕಾರಿ ತಿಳಿಸಿದರು.

'ಮಧ್ಯಪ್ರದೇಶದಲ್ಲಿ ಚರ್ಮಕ್ಕಾಗಿ ಹುಲಿಗಳ ಬೇಟೆ ಈಗ ನಿಂತಿದೆ. ಆದರೆ ಸತ್ತ ಹುಲಿಗಳ ಪಂಜಗಳನ್ನು ಗ್ರಾಮಸ್ಥರು ಮಾಟ-ಮಂತ್ರಗಳಿಗಾಗಿ ಸಂಗ್ರಹಿಸುವುದೇ ಆತಂಕದ ವಿಷಯವಾಗಿದೆ' ಎಂದು ಅವರು ನುಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ