ಆ್ಯಪ್ನಗರ

ಅಡ್ಡ ಮತದಾನ ಮಾಡುವಂತೆ ಕಾಂಗ್ರೆಸ್‌ನಿಂದ ಹಣ, ಹುದ್ದೆಯ ಆಮಿಷ: ಆದಿವಾಸಿ ಶಾಸಕ

ಅಡ್ಡ ಮತದಾನ ಮಾಡುವಂತೆ ಕಾಂಗ್ರೆಸ್ ಹಣ ಮತ್ತು ಹುದ್ದೆಯ ಆಮಿಷ ಒಡ್ಡಿತ್ತು. ಆದರೆ ನಾನು ನಿರಾಕರಿಸಿದೆ ಎಂದು ಮಧ್ಯ ಪ್ರದೇಶದ ಬಿಜೆಪಿ ಶಾಸಕ ಸೀತಾರಾಮ್ ಆದಿವಾಸಿ ಆರೋಪಿಸಿದ್ದಾರೆ.

TIMESOFINDIA.COM 1 Aug 2019, 12:07 pm
ಭೋಪಾಲ: ಸದನದಲ್ಲಿ ಅಡ್ಡ ಮತದಾನ ಮಾಡುವಂತೆ ಕಾಂಗ್ರೆಸ್ ಹಣ ಮತ್ತು ಹುದ್ದೆಯ ಆಮಿಷ ಒಡ್ಡಿತ್ತು. ಆದರೆ ನಾನು ನಿರಾಕರಿಸಿದೆ ಎಂದು ಮಧ್ಯ ಪ್ರದೇಶದ ವಿಜಯಪುರ ವಿಧಾನಸಭೆ ಕ್ಷೇತ್ರದ ಬಿಜೆಪಿ ಶಾಸಕ ಸೀತಾರಾಮ್ ಆದಿವಾಸಿ ಆರೋಪಿಸಿದ್ದಾರೆ.
Vijaya Karnataka Web bjp


ಸದನದಲ್ಲಿ ಬಿಜೆಪಿ ವಿರುದ್ಧ ಮತದಾನ ಮಾಡುವಂತೆ ಕಾಂಗ್ರೆಸ್ ಮುಖಂಡರು ಬಿಜೆಪಿ ಶಾಸಕರಿಗೆ ದೊಡ್ಡ ಮಟ್ಟದ ಆಮಿಷ ಒಡ್ಡುತ್ತಿದ್ದಾರೆ. ಹಾಗೆಯೇ ನನಗೂ ಹಣ ಹಾಗೂ ಹುದ್ದೆಯ ಆಫರ್ ನೀಡಿದ್ದರು. ಆದರೆ, ನಾನು ನಿರಾಕರಿಸಿದೆ. ನಿಷ್ಠಾವಂತ ಬಿಜೆಪಿ ಕಾರ್ಯಕರ್ತನಾಗಿರು ನಾನು, ಪಕ್ಷ ಬಿಡುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಆದಿವಾಸಿಗಳು ತತ್ವ ಸಿದ್ಧಾಂತ ಹಾಗೂ ಸ್ವಾಭಿಮಾನದ ವಿಷಯದಲ್ಲಿ ಯಾವುದೇ ಕಾರಣಕ್ಕೂ ರಾಜಿಮಾಡಿಕೊಳ್ಳದವರು ಎಂದು ತಿಳಿಯದ ಕಾಂಗ್ರೆಸ್, ಪ್ರಾಮಾಣಿಕತೆ ಮತ್ತು ನಿಷ್ಠೆಯನ್ನು ಹಣದಿಂದ ಖರೀದಿಸಲು ಯತ್ನಿಸುತ್ತಿದೆ. ಇದು ನಾಚಿಗೇಡಿನ ಸಂಗತಿಯಾಗಿದ್ದು, ಕಾಂಗ್ರೆಸ್ ಪ್ರಯತ್ನ ವಿಫಲವಾಗಲಿದೆ ಎಂದು ಮಧ್ಯಪ್ರದೇಶ ಬಿಜೆಪಿ ವಕ್ತಾರ ರಜನೀಶ್ ಅಗರ್‌ವಾಲ್ ತಿಳಿಸಿದ್ದಾರೆ.

ಸೀತಾರಾಮ್ ಆದಿವಾಸಿ ಮಾಡಿರುವ ಆರೋಪವನ್ನು ತಳ್ಳಿಹಾಕಿರುವ ಕಾಂಗ್ರೆಸ್ ವಕ್ತಾರ ಭೂಪೇಂದ್ರ ಗುಪ್ತಾ, ಆಮಿಷ ಒಡ್ಡಿರುವ ಬಗ್ಗೆ ಸೂಕ್ತ ಪುರಾವೆಗಳಿದ್ದರೆ ಬಹಿರಂಗಪಡಿಸಲಿ ಎಂದು ಒತ್ತಾಯಿಸಿದ್ದಾರೆ. ಅಷ್ಟೆ ಅಲ್ಲದೆ, ಇದೊಂದು ಆಧಾರ ರಹಿತ ಆರೋಪ ಎಂದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ