ಆ್ಯಪ್ನಗರ

ಮಹಾ ಸಿಎಂ ಜತೆ ಮಾತುಕತೆ; ಅಣ್ಣಾ ಹಜಾರೆ ನಿರಶನ ಅಂತ್ಯ

ಏಳು ದಿನಗಳಿಂದ ಉಪವಾಸ ಸತ್ಯಾಗ್ರಹ

Vijaya Karnataka Web 29 Mar 2018, 8:10 pm
ಹೊಸದಿಲ್ಲಿ: ರೈತರ ಬೆಳೆಗಳಿಗೆ ಉತ್ತಮ ಬೆಲೆ, ಎಲ್ಲ ರಾಜ್ಯಗಳಲ್ಲಿ ಲೋಕಾಯುಕ್ತ ನ್ಯಾಯಮೂರ್ತಿ ನೇಮಕ, ಕೇಂದ್ರದಲ್ಲಿ ಲೋಕಪಾಲ್‌ ರಚನೆ ಸೇರಿದಂತೆ ಹಲವು ಬೇಡಿಕೆ ಮುಂದಿಟ್ಟುಕೊಂಡು ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ನಡೆಸುತ್ತಿದ್ದ ನಿರಶನ ಅಂತ್ಯಗೊಂಡಿದೆ.
Vijaya Karnataka Web maharashtra cm devendra fadnavis meets anna hazare ends fast
ಮಹಾ ಸಿಎಂ ಜತೆ ಮಾತುಕತೆ; ಅಣ್ಣಾ ಹಜಾರೆ ನಿರಶನ ಅಂತ್ಯ


ಕಳೆದ ಏಳು ದಿನಗಳಿಂದ ಅಣ್ಣಾ ಹಜಾರೆ ರಾಷ್ಟ್ರ ರಾಜಧಾನಿಯಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದರು.

ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್‌ ಹೊಸದಿಲ್ಲಿಗೆ ಭೇಟಿ ನೀಡಿ ಅಣ್ಣಾ ಹಜಾರೆ ಜತೆ ಮಾತುಕತೆ ನಡೆಸಿದರು.

ಕೇಂದ್ರ ಸರಕಾರದ ರಾಯಭಾರಿಯಾಗಿದ್ದ ಮಹಾರಾಷ್ಟ್ರ ಸಚಿವ ಗಿರೀಶ್‌ ಮಹಾಜನ ಕೂಡ ದೇವೇಂದ್ರ ಫಡ್ನವಿಸ್‌ ಜತೆಗಿದ್ದರು.

ಬಹುತೇಕ ಎಲ್ಲ ಬೇಡಿಕೆಗಳನ್ನು ಈಡೇರಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ ಬಳಿಕ ಅಣ್ಣಾ ಹಜಾರೆ ನಿರಶನ ಅಂತ್ಯಗೊಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ