ಆ್ಯಪ್ನಗರ

ಅಪಾಯದ ಅಂಚಲ್ಲಿ ಸಿಎಂ ಫಡ್ನವಿಸ್‌ ಪತ್ನಿಯ ಸೆಲ್ಫಿ ಕ್ರೇಜ್‌!

ಅಮೃತಾ ಅವರ ಸೆಲ್ಫಿ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಸ್ವತಃ ಸಿಎಂ ಪತ್ನಿಯೇ ಹೀಗೆ ವರ್ತಿಸಿರುವ ಬಗ್ಗೆ ತೀವ್ರ ಟೀಕೆ ವ್ಯಕ್ತವಾಗಿದೆ.

Vijaya Karnataka 22 Oct 2018, 10:56 am
ಹೊಸದಿಲ್ಲಿ: ಸೆಲ್ಫಿ ಗೀಳಿಗೆ ಬಲಿಯಾಗುವುದನ್ನು ತಡೆಯಲು ಪೊಲೀಸರು ಒಂದೆಡೆ ಜಾಗೃತಿ ಅಭಿಯಾನಗಳನ್ನು ಮೂಡಿಸುತ್ತಿದ್ದರೆ, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಪತ್ನಿ ಅಮೃತಾ ಫಡ್ನವೀಸ್‌ ಅಪಾಯಕಾರಿ ಸ್ಥಳದಲ್ಲಿ ಕುಳಿತು ಸೆಲ್ಪಿ ಕ್ಲಿಕ್ಕಿಸುವ ಮೂಲಕ ಟೀಕೆಗೆ ಗುರಿಯಾಗಿದ್ದಾರೆ.
Vijaya Karnataka Web Amrutha Selfi



ಶನಿವಾರ ಮುಂಬಯಿ-ಗೋವಾ ಐಷಾರಾಮಿ ಹಡಗು ಸೇವೆಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅಮೃತಾ, ಹಡಗಿನ ತುದಿಯಲ್ಲಿ ಕುಳಿತು ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ. ಈ ವೇಳೆ ಸ್ಥಳದಲ್ಲಿದ್ದ ಪೊಲೀಸರು ಹಾಗೂ ರಕ್ಷಣಾ ಸಿಬ್ಬಂದಿ ಅಪಾಯದ ಬಗ್ಗೆ ಎಚ್ಚರಿಸಿದರೂ, ಅದಕ್ಕೆ ಕಿವಿಗೊಡದೆ ಸೆಲ್ಫಿ ಅಲ್ಲೇ ಕುಳಿತುಕೊಂಡಿದ್ದಾರೆ. ಅಮೃತಾ ಅವರ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಸ್ವತಃ ಸಿಎಂ ಪತ್ನಿಯೇ ಹೀಗೆ ವರ್ತಿಸಿರುವ ಬಗ್ಗೆ ತೀವ್ರ ಟೀಕೆ ವ್ಯಕ್ತವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ