ಆ್ಯಪ್ನಗರ

ಗೆಲುವಿನ ಅಂತರ ಹೆಚ್ಚಿಸಿಕೊಳ್ಳುವ ತವಕ

ಫಡ್ನವೀಸ್‌ ನೇತೃತ್ವದ ಬಿಜೆಪಿ ಸರಕಾರ, 2014ರಲ್ಲಿಗಳಿಸಿದ್ದ 122 ಸ್ಥಾನಗಳಿಗೂ ಮಿಗಿಲಾದ ಗೆಲುವಿನ ನಿರೀಕ್ಷೆಯಲ್ಲಿದೆ.

PTI 23 Sep 2019, 5:00 am
ಮುಂಬಯಿ: ಮುಂದಿನ ತಿಂಗಳು ನಡೆಯಲಿರುವ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯು ಆಡಳಿತಾರೂಢ ಬಿಜೆಪಿ-ಶಿವಸೇನೆ ಮೈತ್ರಿ ಸರಕಾರದ ಪಾಲಿಗೆ ಸತ್ವ ಪರೀಕ್ಷೆಯಾದರೆ, ಪ್ರತಿಪಕ್ಷಗಳ ಪಾಲಿಗೆ ಕಠಿಣ ಸವಾಲಾಗಿದೆ. ಅದರಲ್ಲೂಬಿಜೆಪಿಯತ್ತ ವಲಸಿಗರ ಪರ್ವದ ಹಿನ್ನೆಲೆಯಲ್ಲಿಎನ್‌ಸಿಪಿ ಮುಖಂಡ ಶರದ್‌ ಪವಾರ್‌ ಪಾಲಿಗೆ ಅವರ 5 ವರ್ಷಗಳ ರಾಜಕೀಯ ಇತಿಹಸದಲ್ಲೇ ಇದೊಂದು ಅತಿದೊಡ್ಡ ಅಗ್ನಿ ಪರೀಕ್ಷೆಯಾಗಿದೆ.
Vijaya Karnataka Web fadnavis


ಫಡ್ನವೀಸ್‌ ನೇತೃತ್ವದ ಬಿಜೆಪಿ ಸರಕಾರ, 2014ರಲ್ಲಿಗಳಿಸಿದ್ದ 122 ಸ್ಥಾನಗಳಿಗೂ ಮಿಗಿಲಾದ ಗೆಲುವಿನ ನಿರೀಕ್ಷೆಯಲ್ಲಿದೆ. ಪ್ರತಿಪಕ್ಷಗಳು ಮೋದಿ ಅಲೆ ಇಲ್ಲಎಂದು ಹೇಳಿದರೂ, 2014ಕ್ಕೆ ಹೋಲಿಸಿದರೆ 2019ರ ಲೋಕಸಭಾ ಚುನಾವಣೆಯಲ್ಲಿಬಿಜೆಪಿ ನಿರೀಕ್ಷೆಗಿಂತಲೂ ಹೆಚ್ಚು ಗೆಲುವು ಸಾಧಿಸಿರುವುದು ಮೋದಿ ಅಲೆ ಮತ್ತಷ್ಟು ಜೋರಾಗಿರುವುದನ್ನು ಸ್ಪಷ್ಟಪಡಿಸಿದೆ.

ನಾಯಕತ್ವ ಬಿಕ್ಕಟ್ಟು ಎದುರಿಸುತ್ತಿರುವ ಪ್ರತಿಪಕ್ಷ ಕಾಂಗ್ರೆಸ್‌ ತನ್ನ ಭದ್ರಕೋಟೆಗಳಾಗಿದ್ದ ರಾಜ್ಯದ ವಿದರ್ಭ, ಮರಾಠವಾಡ ಮತ್ತು ಮುಂಬಯಿ ಪ್ರಾಂತ್ಯಗಳಲ್ಲಿದುರ್ಬಲಗೊಂಡಿದೆ. ಇತ್ತ ಶರದ್‌ ಪವಾರ್‌ ನೇತೃತ್ವದ ಎನ್‌ಸಿಪಿ ಕೂಡಾ ಪಶ್ಚಿಮ ಮಹಾರಾಷ್ಟ್ರದಲ್ಲಿಹಿಡಿತ ಉಳಿಸಿಕೊಳ್ಳಲು ಹೆಣಗಾಡುತ್ತಿದೆ.

ಬಿಜೆಪಿಯು ಚುನಾವಣಾ ಕಾರ್ಯತ್ರಂತ್ರದ ಭಾಗವಾಗಿ ಕಳೆದ ಹಲವು ತಿಂಗಳಿಂದಲೇ ಎನ್‌ಸಿಪಿ ಮತ್ತು ಕಾಂಗ್ರೆಸ್‌ ನಾಯಕರನ್ನು ಪಕ್ಷಕ್ಕೆ ಸೆಳೆದುಕೊಂಡಿದೆ. ಇದರಿಂದಾಗಿ ಪ್ರಾಬಲ್ಯ ಕಡಿಮೆ ಇದ್ದ ಪ್ರದೇಶಗಳಲ್ಲೂಈಗ ಕಮಲ ಪಕ್ಷ ಬಲಗೊಂಡಿದೆ. ಬಿಜೆಪಿಯ ಮಿತ್ರಪಕ್ಷ ಶಿವಸೇನೆ ಪಾಲಿಗೆ ಕೊಂಕಣ ಭಾಗ ಇಂದಿಗೂ ಭದ್ರಕೋಟೆಯಾಗಿ ಮುಂದುವರಿದಿದೆ.

ಶಿವಸೇನೆಗೂ ಸಂದೇಶ: ಪ್ರತಿಪಕ್ಷಗಳ ಬಲವನ್ನು ಅಡಗಿಸುವ ಮೂಲಕ ಬಿಜೆಪಿಯು ಮೈತ್ರಿಕೂಟದಲ್ಲಿಹೆಚ್ಚಿನ ಪ್ರಾಶಸ್ತ್ಯಕ್ಕಾಗಿ ನಿರೀಕ್ಷೆ ಹೊಂದಿರುವ ಮಿತ್ರಪಕ್ಷ ಶಿವಸೇನೆಗೂ ಪರೋಕ್ಷ ಸಂದೇಶ ರವಾನಿಸಿದೆ. 288 ಸ್ಥಾನಗಳಿಗಾಗಿ ನಡೆಯುವ ಚುನಾವಣೆಯಲ್ಲಿಸೀಟುಗಳ ಹಂಚಿಕೆ ಕುರಿತು ಉಭಯ ಪಕ್ಷಗಳೂ ಇನ್ನು ಹಗ್ಗ ಜಗ್ಗಾಟ ನಡೆಸುತ್ತಿವೆ. ಉಭಯ ಪಕ್ಷಗಳ ನಾಯಕರೂ ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಇತ್ತ ಫಡ್ನವೀಸ್‌ ಅವರು ತಾವೇ ಮತ್ತೊಮ್ಮೆ ಮುಖ್ಯಮಂತ್ರಿ ಎಂದು ಶನಿವಾರವೂ ಘೋಷಿಸಿದ್ದಾರೆ. ಶಿವಸೇನೆಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡುವ ಇಂಗಿತ ವ್ಯಕ್ತಪಡಿಸಿದ್ದಾರೆ. ಇತ್ತ ಶಿವಸೇನೆಯೂ ತಮ್ಮ ಪಕ್ಷದ ನಾಯಕರಿಗೇ ಸಿಎಂ ಪಟ್ಟ ಸಿಗಬೇಕೆಂದು ಪ್ರಚಾರದ ವೇಳೆ ಪರೋಕ್ಷವಾಗಿ ಹೇಳಿರುವುದರಿಂದ ಉಭಪ ಪಕ್ಷಗಳ ಪಾಲಿಗೆ ಈ ವಿಚಾರದಲ್ಲಿಹಗ್ಗಜಗ್ಗಾಟ ಮುಂದುವರಿದಿದೆ.

ಈ ಬಾರಿ ಉದ್ಧವ್‌ ಠಾಕ್ರೆ ಪುತ್ರ ಆದಿತ್ಯ ಠಾಕ್ರೆಯೂ ಚುನಾವಣಾ ಕಣಕ್ಕಿಳಿಯುವುದರೊಂದಿಗೆ ಠಾಕ್ರೆ ಕುಟುಂಬದ ಮತ್ತೊಂದು ತಲೆಮಾರಿನ ರಾಜಕೀಯ ಪ್ರವೇಶವಾದಂತಾಗಿದೆ. ಯುವ ನಾಯಕ ಆದಿತ್ಯ ಠಾಕ್ರೆ ತಮ್ಮ ಪ್ರಚಾರದ ವೇಳೆ ಪ್ರಖರ ಭಾಷಣದ ಮೂಲಕ ಗಮನ ಸೆಳೆದಿದ್ದಾರೆ. ಒಂದು ವೇಳೆ ಬಿಜೆಪಿ-ಶಿವಸೇನೆ ಮೈತ್ರಿ ಗೆದ್ದರೆ, ಆದಿತ್ಯ ಠಾಕ್ರೆಗೆ ಡಿಸಿಎಂ ಪಟ್ಟ ನೀಡುವ ಪ್ರಸ್ತಾಪವನ್ನು ಬಿಜೆಪಿ ಮುಂದಿಡುವ ಸಾಧ್ಯತೆಯಿದೆ.

ಬಿಜೆಪಿ ಅಸ್ತ್ರಗಳು
* ರೈತರ ಸಾಲ ಮನ್ನಾ, ಅಭಿವೃದ್ಧಿ ಯೋಜನೆಗಳು
* 370ನೇ ವಿಧಿ ರದ್ದು ಮತ್ತು ರಾಷ್ಟ್ರೀಯತೆ

ಪ್ರತಿಪಕ್ಷಗಳ ಅಸ್ತ್ರಗಳು
* ರೈತರ ಸಮಸ್ಯೆಗಳ ಕುರಿತಾಗಿ ಸರಕಾರದ ವಿರುದ್ಧ ಪ್ರಹಾರ
* ಆರ್ಥಿಕ ಹಿಂಜರಿತ, ಉದ್ಯೋಗ ನಷ್ಟ ಕುರಿತು ಟೀಕೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ