ಆ್ಯಪ್ನಗರ

ಮಹಿಳೆ ಗುಪ್ತಾಂಗದಿಂದ ಕೊರೊನಾ ಟೆಸ್ಟ್‌ಗೆ ಸ್ಯಾಂಪಲ್‌ ಪಡೆದ ಟೆಕ್ನಿಷಿಯನ್‌!

ಮಹಿಳೆ ಬಳಿ ಜನನಾಂಗದಿಂದಲೂ ದ್ರಾವಣ ಪಡೆಯಬೇಕಾಗಿದೆ ಎಂದು ನಂಬಿಸಿ ಕೃತ್ಯ ಎಸಗಿದ್ದ. ಮನೆಗೆ ಮರಳಿದ ಮಹಿಳೆಗೆ ತಾನು ಮೋಸ ಹೋಗಿರುವುದು ಗೊತ್ತಾಗಿದ್ದು, ಪೊಲೀಸರಿಗೆ ದೂರು ನೀಡಿದ್ದಾರೆ. ಅದರಂತೆ ಬದ್ನೇರಾ ಠಾಣೆಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

Vijaya Karnataka Web 30 Jul 2020, 11:39 pm
ಮುಂಬಯಿ: ಕೋವಿಡ್‌-19 ಪರೀಕ್ಷೆಗೆ ಸ್ಯಾಂಪಲ್‌ ಸಂಗ್ರಹ ಮಾಡುವುದಾಗಿ ಹೇಳಿ ಮಹಿಳೆಯೊಬ್ಬರ ಗುಪ್ತಾಂಗದಿಂದ ದ್ರಾವಣ ಸಂಗ್ರಹ ಮಾಡಿದ ಲ್ಯಾಬ್‌ ತಂತ್ರಜ್ಞನನ್ನು ಮಹಾರಾಷ್ಟ್ರ ಪೊಲೀಸರು ಅತ್ಯಾಚಾರ ಪ್ರಕರಣದ ಆರೋಪದಡಿ ಬಂಧಿಸಿದ್ದಾರೆ.
Vijaya Karnataka Web ಬಂಧನ
ಬಂಧನ


ಗಂಟಲಿನ ದ್ರಾವಣ ಪಡೆದ ಬಳಿಕ ಜನಾನಾಂಗದಿಂದಲೂ ಪಡೆಯಬೇಕಾಗಿದೆ ಎಂದು ಆರೋಪಿ ಟೆಕ್ನಿಷಿಯನ್‌ ಮಹಿಳೆಗೆ ಯಾಮಾರಿಸಿದ್ದ.

ಘಟನೆ ಬಗ್ಗೆ ಮಹಾರಾಷ್ಟ್ರದ ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಸಚಿವೆ ಯಶೋಮತಿ ಠಾಕೂರ್‌ ಆಘಾತ ವ್ಯಕ್ತಪಡಿಸಿದ್ದಾರೆ.

ದೂರುದಾರ ಮಹಿಳೆ ಅಮರಾವತಿಯ ಮಾಲ್‌ ಒಂದರಲ್ಲಿಕೆಲಸ ಮಾಡುತ್ತಿದ್ದು, ಅವರ ಸಹೋದ್ಯೋಗಿಯೊಬ್ಬರಿಗೆ ಕೋವಿಡ್‌-19 ದೃಢಪಟ್ಟಿತ್ತು. ಹೀಗಾಗಿ ಉಳಿದ 20ರಿಂದ 25 ಸಿಬ್ಬಂದಿ ಕೊರೊನಾ ಪರೀಕ್ಷೆಗೆ ಒಳಪಡಲು ಪ್ರಯೋಗಾಲಯಕ್ಕೆ ತೆರಳಿದ್ದರು.

ಈ ವೇಳೆ ಎಲ್ಲರಿಂದಲೂ ಮೂಗಿನ ದ್ರಾವಣ ಪಡೆದ ಆರೋಪಿ ಟೆಕ್ನಿಷಿಯನ್‌, ಮಹಿಳೆ ಬಳಿ ಜನನಾಂಗದಿಂದಲೂ ದ್ರಾವಣ ಪಡೆಯಬೇಕಾಗಿದೆ ಎಂದು ನಂಬಿಸಿ ಕೃತ್ಯ ಎಸಗಿದ್ದ.

ಮನೆಗೆ ಮರಳಿದ ಮಹಿಳೆಗೆ ತಾನು ಮೋಸ ಹೋಗಿರುವುದು ಗೊತ್ತಾಗಿದ್ದು, ಪೊಲೀಸರಿಗೆ ದೂರು ನೀಡಿದ್ದಾರೆ. ಅದರಂತೆ ಬದ್ನೇರಾ ಠಾಣೆಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ