ಆ್ಯಪ್ನಗರ

ಮದ್ಯ ನೀಡಿದರೆ ಮತ ಇಲ್ಲ: ಮಹಾರಾಷ್ಟ್ರ ಮಹಿಳೆಯರ ಮಾದರಿ ನಡೆ

ಮಹಾರಾಷ್ಟ್ರದ ಗಢ್‌ಚಿರೊಲಿ ಮತ್ತು ಚಂದ್ರಾಪುರ್ ಜಿಲ್ಲೆಯಲ್ಲಿ ಮಹಿಳೆಯರು ಅಕ್ರಮ ಮತದಾನ ಮತ್ತು ಹೆಂಡ ಹಂಚಿಕೆ ವಿರುದ್ಧ ಒಂದಾಗಿದ್ದು, ಮದ್ಯ ನೀಡಿದರೆ ಮತವಿಲ್ಲ ಎಂದು ಸಾರಿದ್ದಾರೆ.

Maharashtra Times 28 Feb 2019, 6:17 pm
ಗಢ್‌ಚಿರೋಲಿ: ಚುನಾವಣಾ ಕಾಲ ಬರುತ್ತಿದ್ದು, ಪಕ್ಷದ ಅಭ್ಯರ್ಥಿ ಪರ ಪ್ರಚಾರ ಕಾರ್ಯದಲ್ಲಿ ವಿವಿಧ ಪಕ್ಷಗಳು ತೊಡಗಿಸಿಕೊಳ್ಳಲಿವೆ. ಜತೆಗೆ ಹೆಚ್ಚಿನ ಮತಗಳಿಕೆಯ ಇಚ್ಛೆಯಿಂದ ಮತದಾರರಿಗೆ ಆಮಿಷ ಒಡ್ಡುವುದು ಮಾಮೂಲು. ಅದರಲ್ಲೂ ಹಣ ಹಂಚುವುದು ಒಂದಾದರೆ, ಮದ್ಯ ಹಂಚಿ ಮತ ಗಳಿಸುವುದು ಮತ್ತೊಂದು ರೀತಿಯದ್ದು.
Vijaya Karnataka Web Whisky


ಆದರೆ ಮಹಾರಾಷ್ಟ್ರದ ಗಢ್‌ಚಿರೊಲಿ ಮತ್ತು ಚಂದ್ರಾಪುರ್ ಜಿಲ್ಲೆಯಲ್ಲಿ ಮಹಿಳೆಯರು ಅಕ್ರಮ ಮತದಾನ ಮತ್ತು ಹೆಂಡ ಹಂಚಿಕೆ ವಿರುದ್ಧ ಒಂದಾಗಿದ್ದು, ಮದ್ಯ ನೀಡಿದರೆ ಮತವಿಲ್ಲ ಎಂದು ಸಾರಿದ್ದಾರೆ.

ಗಢ್‌ಚಿರೊಲಿಯ ಮರ್ಮಗಾಂವ್ ಪ್ರದೇಶದಲ್ಲಿ ಮುಕ್ತಿ ಪಥ ಎಂಬ ಸಂಘಟನೆಯ ನೆರವಿನೊಂದಿಗೆ ಸ್ಥಳೀಯ ಮಹಿಳೆಯರು ಮತಕ್ಕಾಗಿ ಮದ್ಯದ ಆಮಿಷ ವಿರುದ್ಧ ಹೋರಾಡಲಿದ್ದಾರೆ.

ಮದ್ಯ ನೀಡಿ ಮತಬೇಡುವ ಯಾವುದೇ ಪಕ್ಷಕ್ಕೆ ಮತ ನೀಡುವುದಿಲ್ಲ ಎಂದು ಈಗಾಗಲೇ ಸಾರಿರುವ ಮಹಿಳೆಯರು, ಸ್ಥಳೀಯ ಪೊಲೀಸ್, ಅಬಕಾರಿ ಇಲಾಖೆ ಮತ್ತು ಚುನಾವಣಾ ವಿಚಕ್ಷಣ ಧಳದ ಸಹಕಾರದೊಂದಿಗೆ ಮದ್ಯರಹಿತ ಮತದಾನಕ್ಕೆ ಮುನ್ನುಡಿ ಬರೆದಿದ್ದಾರೆ. ಅಕ್ರಮವಾಗಿ ಅಭ್ಯರ್ಥಿಗಳು ಮದ್ಯ ಹಂಚುವುದು, ಇತರ ಅಮಿಷ ಒಡ್ಡುವುದು ಕಂಡುಬಂದಲ್ಲಿ ಪೊಲೀಸರಿಗೆ ಮಾಹಿತಿ ನೀಡಲಿದ್ದಾರೆ.

ಚುನಾವಣಾ ಆಯೋಗಕ್ಕೆ ಮಹಿಳೆಯರು ಸಾಥ್ ನೀಡಲಿದ್ದು, ಅಕ್ರಮ ಮತಗಳಿಕೆಯ ಪ್ರಯತ್ನ ವಿಫಲಗೊಳಿಸುವುದು ನಮ್ಮ ಉದ್ದೇಶ ಎಂದಿರುವ ಮಹಿಳೆಯರು ಈಗಾಗಲೇ ಕಾರ್ಯಾರಂಭ ಮಾಡಿ, ಜಾಗೃತಿ ಮೂಡಿಸುತ್ತಿದ್ದಾರೆ.

ಮೂಲ ವರದಿ: ಮಹಾರಾಷ್ಟ್ರ ಟೈಮ್ಸ್

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ