ಆ್ಯಪ್ನಗರ

ಮಹಾ ಖಾತೆ ಕಗ್ಗಂಟು ಇತ್ಯರ್ಥ: ಸೇನೆಗೆ ಗೃಹ, ಎನ್‌ಸಿಪಿಗೆ ಹಣಕಾಸು, 'ಕೈ'ಗೆ ಕಂದಾಯ

ಹಲವು ಸುತ್ತಿನ ಸಂಧಾನಗಳ ಬಳಿಕ ಮಹತ್ವದ ಗೃಹ ಖಾತೆಯನ್ನು ಶಿವಸೇನೆ ತನ್ನ ತೆಕ್ಕೆಗೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಎನ್‌ಸಿಪಿಗೆ ಹಣಕಾಸು ಮತ್ತು ಕಾಂಗ್ರೆಸ್‌ಗೆ ಕಂದಾಯ ಮತ್ತು ಲೋಕೋಪಯೋಗಿ ಖಾತೆ ನೀಡಲಾಗಿದೆ.

Agencies 13 Dec 2019, 11:30 am

ಮುಂಬಯಿ: ಮಹಾರಾಷ್ಟ್ರದಲ್ಲಿ ಉದ್ಧವ್‌ ಠಾಕ್ರೆ ನೇತೃತ್ವದ ಮೈತ್ರಿ ಸರಕಾರ ಅಸ್ತಿತ್ವಕ್ಕೆ ಬಂದು ಹದಿನೈದು ದಿನಗಳ ಬಳಿಕ ಗುರುವಾರ ಸಚಿವರಿಗೆ ಖಾತೆಗಳ ಹಂಚಿಕೆ ಆಖೈರುಗೊಂಡಿದೆ. ಹಲವು ಸುತ್ತಿನ ಸಂಧಾನಗಳ ಬಳಿಕ ಮಹತ್ವದ ಗೃಹ ಖಾತೆಯನ್ನು ಶಿವಸೇನೆ ತನ್ನ ತೆಕ್ಕೆಗೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಎನ್‌ಸಿಪಿಗೆ ಹಣಕಾಸು ಮತ್ತು ಕಾಂಗ್ರೆಸ್‌ಗೆ ಕಂದಾಯ ಮತ್ತು ಲೋಕೋಪಯೋಗಿ ಖಾತೆ ನೀಡಲಾಗಿದೆ. ನಿರೀಕ್ಷಿತ ಉಪ ಮುಖ್ಯಮಂತ್ರಿ ಪಟ್ಟ ಸೃಷ್ಟಿಯಾಗದೇ ಕುತೂಹಲ ಮುಂದುವರಿದಿದೆ.
Vijaya Karnataka Web Maharashtra Portfolia allocation


ಮೊದಲ ಹಂತದಲ್ಲಿ ಪ್ರಮುಖ ಆರು ಸಚಿವ ಸ್ಥಾನಗಳು ಮೂರು ಮಿತ್ರ ಪಕ್ಷಗಳ ನಡುವೆ ಸಮನಾಗಿ ಹಂಚಿಕೆಯಾಗಿದ್ದವು. ಶಿವಸೇನೆ 2, ಎನ್‌ಸಿಪಿ 2 ಮತ್ತು ಕಾಂಗ್ರೆಸ್‌ 2 ಸ್ಥಾನ ಪಡೆದಿದ್ದವು. ನವೆಂಬರ್‌ 28ರಂದು ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಜತೆ ಆರು ಸಚಿವರು ಪ್ರಮಾಣ ವಚನ ಸ್ವೀಕರಿಸಿದ್ದರು. ಆ ಬಳಿಕ ಖಾತೆ ಹಂಚಿಕೆ ವಿಷಯದಲ್ಲಿ ಹಗ್ಗಜಗ್ಗಾಟ ಶುರುವಾಗಿತ್ತು. ಡಿಸೆಂಬರ್‌ 16ರಿಂದ ಆರು ದಿನಗಳ ವಿಧಾನಸಭೆ ಅಧಿವೇಶನ ಆರಂಭಗೊಳ್ಳಲಿದ್ದು, ಅದಕ್ಕೆ ಮೊದಲು ತರಾತುರಿಯಲ್ಲಿ ಖಾತೆ ಹಂಚಿಕೆ ಕಸರತ್ತು ಕೊನೆಗೊಳಿಸಲಾಗಿದೆ. ಅಧಿವೇಶನ ಮುಗಿದ ಬಳಿಕ ಸಚಿವ ಸಂಪುಟ ವಿಸ್ತರಣೆ ನಡೆಯುವ ಸಾಧ್ಯತೆ ಇದೆ.

ಯಾರಿಗೆ ಯಾವ ಖಾತೆ?


ಶಿವಸೇನೆ: ಏಕನಾಥ್‌ ಶಿಂಧೆ - ಗೃಹ, ಅರಣ್ಯ ಮತ್ತು ಪರಿಸರ, ನಗರಾಭಿವೃದ್ಧಿ, ನೀರು ಸರಬರಾಜು, ಜಲ ಸಂರಕ್ಷಣೆ, ಪ್ರವಾಸೋದ್ಯಮ, ಸಾರ್ವಜನಿಕ ಉದ್ದಿಮೆ, ಸಂಸದೀಯ ವ್ಯವಹಾರ.

ಮಹಾರಾಷ್ಟ್ರ ಅಧಿಕಾರ ಹಂಚಿಕೆ: ಕಾಂಗ್ರೆಸ್‌ಗಿಲ್ಲ ಡಿಸಿಎಂ ಸ್ಥಾನ, ಎನ್‌ಸಿಪಿಗೆ ಅತೀ ಹೆಚ್ಚಿನ ಮಂತ್ರಿ ಗಿರಿ

ಸುಭಾಷ್‌ ದೇಸಾಯಿ - ಕೈಗಾರಿಕೆ, ಉನ್ನತ ಮತ್ತು ತಾಂತ್ರಿಕ ಶಿಕ್ಷಣ, ಕ್ರೀಡೆ ಮತ್ತು ಯುವಜನ ಸೇವೆ, ತೋಟಗಾರಿಕೆ, ಸಾರಿಗೆ, ಬಂದರು, ಮರಾಠಿ ಭಾಷೆ ಮತ್ತು ಸಂಸ್ಕೃತಿ ವ್ಯವಹಾರ.

ಎನ್‌ಸಿಪಿ: ಜಯಂತ್‌ ಪಾಟೀಲ್‌ - ಹಣಕಾಸು, ಸಹಕಾರ, ಆಹಾರ ಮತ್ತು ನಾಗರಿಕ ಪೂರೈಕೆ, ಕಾರ್ಮಿಕ, ಅಲ್ಪಸಂಖ್ಯಾತ ವ್ಯವಹಾರ.

ಛಗನ್‌ ಭುಜಬಲ್‌ - ಗ್ರಾಮೀಣಾಭಿವೃದ್ಧಿ, ನೀರಾವರಿ, ಸಾಮಾಜಿಕ ನ್ಯಾಯ, ಅಬಕಾರಿ, ಕೌಶಲಾಭಿವೃದ್ಧಿ,

ಕಾಂಗ್ರೆಸ್‌: ಬಾಳಾಸಾಹೇಬ್‌ ಥೋರಟ್‌ - ಕಂದಾಯ, ಇಂಧನ, ವೈದ್ಯ ಶಿಕ್ಷಣ, ಪ್ರಾಥಮಿಕ ಶಿಕ್ಷಣ, ಪಶು ಸಂಗೋಪನೆ ಮತ್ತು ಮೀನುಗಾರಿಕೆ.

ನಿತಿನ್‌ ರಾವತ್‌ - ಲೋಕೋಪಯೋಗಿ, ಬುಡಕಟ್ಟು ವ್ಯವಹಾರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಜವಳಿ, ಪರಿಹಾರ ಮತ್ತು ಪುನರ್ವಸತಿ, ವಿಶೇಷ ಹಿಂದುಳಿದ ವರ್ಗದ ಅಭಿವೃದ್ಧಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ