ಆ್ಯಪ್ನಗರ

ಕಾಸ್‌ಗಂಜ್‌ ಹಿಂಸಾಚಾರ: ಪ್ರಧಾನ ಆರೋಪಿ ಬಂಧನ

ಕಾಸ್‌ಗಂಜ್‌ನಲ್ಲಿ ಚಂದನ್‌ ಗುಪ್ತಾ ಹತ್ಯೆ ಪ್ರಕರಣದ ಪ್ರಧಾನ ಆರೋಪಿಯನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ. ಇದೇ ವೇಳೆ ಗಲಭೆಪೀಡಿತ ಪ್ರದೇಶಕ್ಕೆ ಭೇಟಿ ನೀಡುವ ಕಾಂಗ್ರೆಸ್‌ ನಿಯೋಗದ ಯತ್ನವನ್ನು ತಡೆಯಲಾಯಿತು.

Vijaya Karnataka Web 31 Jan 2018, 3:00 pm
ಲಖನೌ: ಕಾಸ್‌ಗಂಜ್‌ನಲ್ಲಿ ಚಂದನ್‌ ಗುಪ್ತಾ ಹತ್ಯೆ ಪ್ರಕರಣದ ಪ್ರಧಾನ ಆರೋಪಿಯನ್ನು ಪೊಲೀಸರು ಬುಧವಾರ ಬಂಧಿಸಿದ್ದಾರೆ. ಇದೇ ವೇಳೆ ಗಲಭೆಪೀಡಿತ ಪ್ರದೇಶಕ್ಕೆ ಭೇಟಿ ನೀಡುವ ಕಾಂಗ್ರೆಸ್‌ ನಿಯೋಗದ ಯತ್ನವನ್ನು ತಡೆಯಲಾಯಿತು.
Vijaya Karnataka Web main accused in kasganj violence held
ಕಾಸ್‌ಗಂಜ್‌ ಹಿಂಸಾಚಾರ: ಪ್ರಧಾನ ಆರೋಪಿ ಬಂಧನ


'ಪ್ರಧಾನ ಆರೋಪಿ ಸಲೀಂನನ್ನು ಬಂಧಿಸಲಾಗಿದೆ' ಎಂದು ಆಲೀಗಢ ವಲಯದ ಐಜಿ ಸಂಜೀವ್‌ ಗುಪ್ತಾ ತಿಳಿಸಿದರು.

ಆರೋಪಿಗಳ ಸೊತ್ತುಗಳನ್ನು ಜಪ್ತಿ ಮಾಡಿಕೊಳ್ಳುವ ಸಂಬಂಧ ಅವರ ಮನೆಗಳಿಗೆ ನೋಟೀಸುಗಳನ್ನು ಹಚ್ಚಲಾಗಿದೆ ಎಂದು ಕಾಸ್‌ಗಂಜ್‌ ಎಸ್‌ಪಿ ಪೀಯೂಷ್ ಶ್ರೀವಾಸ್ತವ ತಿಳಿಸಿದರು.

ಕಾಸ್‌ಗಂಜ್‌ ಜಿಲ್ಲೆಯ ಗಡಿಪ್ರದೇಶ ಇಟಾದಲ್ಲಿ ಮಿರ್ಹಾಚಿ ಪ್ರದೇಶಕ್ಕೆ ತೆರಳುತ್ತಿದ್ದ ಕಾಂಗ್ರೆಸ್‌ ನಿಯೋಗವನ್ನು ತಡೆಯಲಾಯಿತು. ಕಾನೂನು ಮತ್ತು ಸುವ್ಯವಸ್ಥೆ ಕಾರಣಕ್ಕಾಗಿ ಕಾಂಗ್ರೆಸ್‌ ನಿಯೋಗ ಗಲಭೆ ಪೀಡಿತ ಪ್ರದೇಶಕ್ಕೆ ತೆರಳುವುದನ್ನು ತಡೆಯಲಾಗಿದೆ ಎಂದು ಅಧಿಕಾರಿಗಳು ವಿವರಿಸಿದರು.

ಕಾಂಗ್ರೆಸ್‌ ನಿಯೋಗದ ಭೇಟಿಯಿಂದ ಪರಿಸ್ಥಿತಿ ಮತ್ತಷ್ಟು ಹದಗೆಡಬಹುದು ಎಂಬ ಆತಂಕದಿಂದ ಕಾಸ್‌ಗಂಜ್ ಜಿಲ್ಲಾಧಿಕಾರಿ ಆರ್‌.ಪಿ ಸಿಂಗ್‌ ಅನುಮತಿ ನಿರಾಕರಿಸಿದ್ದಾರೆ.

ಕಳೆದ ವಾರ ಗಣರಾಜ್ಯೋತ್ಸವ ಆಚರಣೆ ವೇಳೆ ಯುವಕನೊಬ್ಬನ ಹತ್ಯೆ ನಡೆದ ಬಳಿಕ ಭಾರೀ ಗಲಭೆಗಳು ನಡೆದವು. ಗುಂಪೊಂದು ಕಲ್ಲು ತೂರಾಟ ನಡೆಸುತ್ತ ಮೂರು ಅಂಗಡಿಗಳು, ಎರಡು ಬಸ್‌ಗಳು ಮತ್ತು ಒಂದು ಕಾರ್‌ಗೆ ಬೆಂಕಿ ಹಚ್ಚಿತ್ತು.

ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಇದುವರೆಗೆ ಕನಿಷ್ಠ 118 ಆರೋಪಿಗಳನ್ನು ಬಂಧಿಸಲಾಗಿದೆ.

ಬಿಗಿ ಭದ್ರತೆ ಕೈಗೊಂಡಿದ್ದರೂ ಕೆಲವೆಡೆ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ಮಂಗಳವಾರವೂ ಕೆಲವೆಡೆ ಹಿಂಸಾಚಾರದ ಘಟನೆಗಳು ನಡೆದಿದ್ದವು. ಆದರೆ ಇಂದು ಬಹುತೇಕ ಪರಿಸ್ಥಿತಿ ಶಾಂತವಾಗಿದೆ.

ಕಾಸ್‌ಗಂಜ್‌ ಹಿಂಸಾಚಾರದ ಕುರಿತಂತೆ ಕೇಂದ್ರ ಸರಕಾರ ರಾಜ್ಯದಿಂದ ವರದಿ ಕೇಳಿದೆ.

'ರಾಜ್ಯದಲ್ಲಿ ಅರಾಜಕತೆಗೆ ಜಾಗವಿಲ್ಲ. ಪ್ರತಿಯೊಬ್ಬ ಪ್ರಜೆಗೂ ರಕ್ಷಣೆ ನೀಡಲು ಸರಕಾರ ಬದ್ಧವಾಗಿದೆ' ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಹೇಳಿದ್ದು, ದುಷ್ಕರ್ಮಿಗಳನ್ನು ಸುಮ್ಮನೆ ಬಿಡುವುದಿಲ್ಲ ಎಂದು ಕಠಿಣ ಎಚ್ಚರಿಕೆ ನೀಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ