ಆ್ಯಪ್ನಗರ

Rafale verdict: ಕೇಂದ್ರ ಸುಪ್ರೀಂ ಕೋರ್ಟ್‌ಗೆ ಸುಳ್ಳು ಹೇಳಿದೆ: ಖರ್ಗೆ ಆರೋಪ

ರಫೇಲ್‌ ಯುದ್ಧ ವಿಮಾನ ಖರೀದಿಗೆ ದರ ನಿಗದಿ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ಗೆ ಕೇಂದ್ರ ಸರಕಾರ ಸುಳ್ಳು ಹೇಳಿದೆ. ದರ ನಿಗದಿ ಸಂಬಂಧ ವರದಿಯನ್ನು ಸಿಎಜಿ ಹಾಗೂ ಪಿಎಸಿಗೆ ನೀಡಲಾಗಿದೆ. ಈ ಸಂಬಂಧ ಅಟರ್ನಿ ಜನರಲ್‌(ಎಜಿ) ಹಾಗೂ ಸಿಎಜಿ ಅವರನ್ನು ಕರೆಸಿಕೊಳ್ಳಲಾಗುವುದು ಎಂದು ಹೇಳಿಕೆ ನೀಡಿದ್ದಾರೆ.

Times Now 15 Dec 2018, 3:16 pm
ಹೊಸದಿಲ್ಲಿ: ರಫೇಲ್‌ ಡೀಲ್‌ ವಿಚಾರದಲ್ಲಿ ಕೇಂದ್ರ ಸರಕಾರ ಸುಪ್ರೀಂ ಕೋರ್ಟ್‌ಗೆ ಸುಳ್ಳು ಮಾಹಿತಿ ನೀಡಿದೆ ಎಂದು ಲೋಕಸಭೆ ಪ್ರತಿಪಕ್ಷ ನಾಯಕ ಹಾಗೂ ಸಾರ್ವಜನಿಕ ಲೆಕ್ಕಪತ್ರ ನಿರ್ವಹಣೆ ಸಮಿತಿ(ಪಿಎಸಿ) ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.
Vijaya Karnataka Web Kharge


ರಫೇಲ್‌ ಯುದ್ಧ ವಿಮಾನ ಖರೀದಿಗೆ ದರ ನಿಗದಿ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ಗೆ ಕೇಂದ್ರ ಸರಕಾರ ಸುಳ್ಳು ಹೇಳಿದೆ. ದರ ನಿಗದಿ ಸಂಬಂಧ ವರದಿಯನ್ನು ಸಿಎಜಿ ಹಾಗೂ ಪಿಎಸಿಗೆ ನೀಡಲಾಗಿದೆ. ಈ ಸಂಬಂಧ ಅಟಾರ್ನಿ ಜನರಲ್‌ (ಎಜಿ) ಹಾಗೂ ಸಿಎಜಿ ಅವರನ್ನು ಕರೆಸಿಕೊಳ್ಳಲಾಗುವುದು ಎಂದು ಹೇಳಿಕೆ ನೀಡಿದ್ದಾರೆ.

ಎನ್‌ಡಿಎ ಸರಕಾರ ಸುಪ್ರೀಂ ಕೋರ್ಟ್‌ಗೆ ರಫೇಲ್‌ ವರದಿಯನ್ನು ಸಿಎಜಿ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಪಿಎಸಿ ಸಿಜೆಜಿ ವರದಿಯನ್ನು ತನಿಖೆ ನಡೆಸಿದೆ ಎಂದು ಹೇಳಿದೆ. ಆದರೆ ನನ್ನ ಅವಧಿಯಲ್ಲಿ ರಫೇಲ್‌ ಕುರಿತ ಯಾವುದೇ ವರದಿ ಪಿಎಸಿ ಗಮನಿಸಿಯೇ ಇಲ್ಲ. ಈ ವಿಚಾರವನ್ನು ಪಿಎಸಿಯ ಇನ್ನಿತರ ಸದಸ್ಯರೊಂದಿಗೆ ಚರ್ಚೆ ನಡೆಸಲಾಗುವುದು ಅಲ್ಲದೆ, ಎಜಿ ಹಾಗೂ ಸಿಎಜಿಯನ್ನು ಕರೆಸಿ ಮಾಹಿತಿ ಪಡೆದುಕೊಳ್ಳಲಾಗುವುದು ಎಂದು ಖರ್ಗೆ ಹೇಳಿದರು.


ಸುಪ್ರೀಂ ಕೋರ್ಟ್‌ ತನ್ನ ತೀರ್ಪಿನಲ್ಲಿ, ರಫೇಲ್‌ ವಿಮಾನ ಖರೀದಿ ಸಂಬಂಧದ ದರ ವಿವರಣೆ ವರದಿ, ಸಿಎಜಿಗೆ ನೀಡಲಾಗಿದೆ. ಅಲ್ಲದೆ ಇದೇ ವರದಿ ಪಿಎಸಿಗೂ ನೀಡಲಾಗಿದೆ ಎಂದಿದೆ. ಆದರೆ ಇಂತಹ ವರದಿ ಸಿಎಜಿ ಅಥವಾ ಪಿಎಸಿಗೆ ಬಂದೇ ಇಲ್ಲ ಎಂದು ಖರ್ಗೆ ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ