ಆ್ಯಪ್ನಗರ

ಬಿಜೆಪಿ ಕಚೇರಿಯ ಬಾಗಿಲು ಒಡೆದು ಟಿಎಂಸಿ ಚಿಹ್ನೆ ಬಳಿದ ಮಮತಾ!

ಮೇ 30ರಂದು ಇದು ನಡೆದಿದ್ದು, ಲೋಕಸಭೆ ಚುನಾವಣೆ ಮುಗಿದರೂ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಹಾಗೂ ತೃಣಮೂಲ ಕಾಂಗ್ರೆಸ್‌ ನಡುವೆ ಜಿದ್ದಾಜಿದ್ದಿ ಸದ್ಯಕ್ಕೆ ನಿಲ್ಲುವುದಿಲ್ಲ ಎನ್ನುವುದನ್ನು ತೋರಿಸಿಕೊಟ್ಟಿದೆ.

PTI 4 Jun 2019, 5:00 am
ಕೋಲ್ಕೊತಾ: ಸಿಎಂ ಮಮತಾ ಬ್ಯಾನರ್ಜಿ ಮತ್ತವರ ಬೆಂಬಲಿಗರು ಉತ್ತರ 24 ಪರಗಣ ಜಿಲ್ಲೆಯ ನೈಹಾತಿ ಪ್ರದೇಶದಲ್ಲಿರುವ ಬಿಜೆಪಿ ಕಚೇರಿ ಬಾಗಿಲು ಒಡೆದು ಒಳಪ್ರವೇಶಿಸಿ, ಅಲ್ಲಿಯ ಗೋಡೆಗಳ ಮೇಲೆ ಟಿಎಂಸಿಯ ಚಿಹ್ನೆಯ ಬಣ್ಣ ಬಳಿದಿದ್ದಾರೆ.
Vijaya Karnataka Web mamata banerjee breaks open bjp office paints party symbol on wall
ಬಿಜೆಪಿ ಕಚೇರಿಯ ಬಾಗಿಲು ಒಡೆದು ಟಿಎಂಸಿ ಚಿಹ್ನೆ ಬಳಿದ ಮಮತಾ!


ಮೇ 30ರಂದು ಇದು ನಡೆದಿದ್ದು, ಲೋಕಸಭೆ ಚುನಾವಣೆ ಮುಗಿದರೂ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಹಾಗೂ ತೃಣಮೂಲ ಕಾಂಗ್ರೆಸ್‌ ನಡುವೆ ಜಿದ್ದಾಜಿದ್ದಿ ಸದ್ಯಕ್ಕೆ ನಿಲ್ಲುವುದಿಲ್ಲ ಎನ್ನುವುದನ್ನು ತೋರಿಸಿಕೊಟ್ಟಿದೆ. ಪ್ರಧಾನಿ ಮೋದಿ ಅವರು ಪ್ರಮಾಣ ವಚನ ಸ್ವೀಕರಿಸಿದ ದಿನವೇ ಬಿಜೆಪಿ ಕಾಯಕರ್ತರು ದೌರ್ಜನ್ಯ ಎಸಗುತ್ತಿದ್ದಾರೆ ಎಂದು ಆರೋಪಿಸಿ ನೈಹಾತಿಯಲ್ಲಿ ಮಮತಾ ಬ್ಯಾನರ್ಜಿ ಪ್ರತಿಭಟನೆ ನಡೆಸಿದ್ದರು. ಪ್ರತಿಭಟನೆ ಬಳಿಕ ಬಿಜೆಪಿ ಕಚೇರಿಯ ಬಾಗಿಲು ಒಡೆದು ಅಲ್ಲಿ ತಮ್ಮ ಪಕ್ಷದ ಚಿಹ್ನೆಯ ಬಣ್ಣ ಬಳಿದಿದ್ದಾರೆ.

''ಇದು ನಮ್ಮ ಪಕ್ಷದ ಕಚೇರಿ. ಆದರೆ ಬಿಜೆಪಿ ಸಂಸದ ಅರ್ಜುನ್‌ ಸಿಂಗ್‌ ಮತ್ತವರ ಬೆಂಬಲಿಗರು ಬಲವಂತದಿಂದ ವಶಪಡಿಸಿಕೊಂಡಿದ್ದಾರೆ,'' ಎಂದು ಟಿಎಂಸಿ ದೂರಿದೆ. ಬಿಜೆಪಿಯು ಇದು ತನ್ನ ಪಕ್ಷದ ಕಚೇರಿ ಎಂದು ಹೇಳಿಕೊಂಡಿದೆ. ಈ ನಡುವೆ, ರಾಜ್ಯದಲ್ಲಿನ ತಮ್ಮ ಪಕ್ಷದ ಕಚೇರಿಗಳನ್ನು ಬಲವಂತದಿಂದ ವಶಪಡಿಸಿಕೊಳ್ಳಲಾಗುತ್ತಿದೆ ಎಂದು ಉಭಯ ಪಕ್ಷಗಳೂ ಪರಸ್ಪರ ಆರೋಪ-ಪ್ರತ್ಯಾರೋಪದಲ್ಲಿ ತೊಡಗಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ