ಆ್ಯಪ್ನಗರ

ರಾಜೀನಾಮೆಗೆ ಮುಂದಾದ ಮಮತಾ ಬ್ಯಾನರ್ಜಿ

ಶನಿವಾರ ನಡೆದ ಟಿಎಂಸಿ ಆತ್ಮವಲೋಕನ ಸಭೆಯಲ್ಲಿ ಶಾಸಕರು, ಸಂಸದರು ಹಾಗೂ ಮುಖಂಡರ ಎದುರು ಮಾತನಾಡಿದ ಮಮತಾ ಬ್ಯಾನರ್ಜಿ, ಪಕ್ಷದ ಒತ್ತಾಯತ್ತೆ ಮಣಿದು ರಾಜೀನಾಮೆ ತೀರ್ಮಾನ ಹಿಂಪಡೆದಿದ್ದೇನೆ.

Vijaya Karnataka 26 May 2019, 11:39 am
ಕೋಲ್ಕೊತಾ: ಲೋಕಸಭಾ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್‌ಗೆ ಹಿನ್ನಡೆ ಉಂಟಾದ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ರಾಜೀನಾಮೆ ನೀಡಲು ಮುಂದಾಗಿದ್ದಾರೆ.

ಆದರೆ ಬ್ಯಾನರ್ಜಿ ಪ್ರಸ್ತಾವವನ್ನು ಪಕ್ಷದ ಮುಖಂಡರು ತಳ್ಳಿ ಹಾಕಿದ್ದಾರೆ.

ಶನಿವಾರ ನಡೆದ ಟಿಎಂಸಿ ಆತ್ಮವಲೋಕನ ಸಭೆಯಲ್ಲಿ ಶಾಸಕರು, ಸಂಸದರು ಹಾಗೂ ಮುಖಂಡರ ಎದುರು ಮಾತನಾಡಿದ ಮಮತಾ ಬ್ಯಾನರ್ಜಿ, ಪಕ್ಷದ ಒತ್ತಾಯತ್ತೆ ಮಣಿದು ರಾಜೀನಾಮೆ ತೀರ್ಮಾನ ಹಿಂಪಡೆದಿದ್ದೇನೆ. ರಾಜ್ಯದಲ್ಲಿ ಬಿಜೆಪಿಯ ಭರ್ಜರಿ ಜಯ ಹಲವು ಸಂಶಯಗಳನ್ನು ಮೂಡಿಸುತ್ತಿದೆ. ಪ್ರತಿಪಕ್ಷಗಳು ಹಲವು ರಾಜ್ಯಗಳಲ್ಲಿ ಹೆಸರಿಲ್ಲದಂತೆ ಹೋಗಿರುವುದಕ್ಕೆ ಹೊರಗಿನ ಶಕ್ತಿಗಳ ಕೈವಾಡ ಇರಬಹುದು ಎಂಬ ಶಂಕೆ ಮೂಡಿದೆ. ಚುನಾವಣೆಯಲ್ಲಿ ಗೆಲ್ಲಲು ಬಿಜೆಪಿ ಧಾರ್ಮಿಕತೆ ಆಧಾರದಲ್ಲಿ ರಾಜ್ಯದ ಜನರನ್ನು ಒಡೆದು ಹಾಕಿತು. ತುರ್ತು ಪರಿಸ್ಥಿತಿಯಂತಹ ಸಂದರ್ಭ ಸೃಷ್ಟಿಸಿತು ಎಂದು ದೂರಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ