ಆ್ಯಪ್ನಗರ

ಪಾಕ್‌ ಪರ ಗೂಢಚಾರಿಕೆ: ಓರ್ವನ ಬಂಧನ

ನಕಲಿ ಗುರುತಿನ ಚೀಟಿ ಹಾಗೂ ಫೇಸ್‌ಬುಕ್‌ ಖಾತೆ ಮೂಲಕ ಯೋಧರನ್ನು ಹಾನಿಟ್ರ್ಯಾಪ್‌ ಬಲೆಗೆ ಬೀಳಿಸಿ ಸೇನೆಯ ಚಲನವಲನಗಳ ಬಗ್ಗೆ ಮಾಹಿತಿ ಕಲೆಹಾಕಿ ಅದನ್ನು ಐಎಸ್‌ಐಗೆ ರವಾನಿಸುತ್ತಿದ್ದ.

Vijaya Karnataka 26 Mar 2019, 3:44 pm
ಜೈಪುರ: ಪಾಕಿಸ್ತಾನ ಸೇನೆಯ ಗುಪ್ತಚರ ಸಂಸ್ಥೆ ಐಎಸ್‌ಐ ಪರವಾಗಿ ಗೂಢಚಾರ ನಡೆಸುತ್ತಿದ್ದ ದಿಲ್ಲಿ ಮೂಲದ 42 ವರ್ಷದ ಮೊಹಮ್ಮದ್‌ ಪರ್ವೇಜ್‌ನನ್ನು ರಾಜಸ್ಥಾನ ಪೊಲೀಸರು ಜೈಪುರದಲ್ಲಿ ಸೋಮವಾರ ಬಂಧಿಸಿದ್ದಾರೆ.
Vijaya Karnataka Web Pak spy


ರಾಷ್ಟ್ರ ವಿರೋಧಿ ಚಟುವಟಿಕೆ ನಡೆಸಿದ ಹಿನ್ನೆಲೆಯಲ್ಲಿ ಉಗ್ರ ನಿಗ್ರಹ ದಳ 2017ರಲ್ಲಿಯೇ ಈತನನ್ನು ಬಂಧಿಸಿದೆ. ನ್ಯಾಯಾಂಗ ಬಂಧನದಲ್ಲಿರುವ ಪರ್ವೇಜ್‌ನನ್ನು ಹೆಚ್ಚಿನ ವಿಚಾರಣೆಗೆ ಜೈಪುರಕ್ಕೆ ಕರೆತಂದಾಗ ಆತನನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ರಾಜಸ್ಥಾನ ಗುಪ್ತಚರ ಎಡಿಜಿ ಉಮೇಶ್‌ ಮಿಶ್ರಾ ತಿಳಿಸಿದ್ದಾರೆ.

ನಕಲಿ ಗುರುತಿನ ಚೀಟಿ ಹಾಗೂ ಫೇಸ್‌ಬುಕ್‌ ಖಾತೆ ಮೂಲಕ ಯೋಧರನ್ನು ಹಾನಿಟ್ರ್ಯಾಪ್‌ ಬಲೆಗೆ ಬೀಳಿಸಿ ಸೇನೆಯ ಚಲನವಲನಗಳ ಬಗ್ಗೆ ಮಾಹಿತಿ ಕಲೆಹಾಕಿ ಅದನ್ನು ಐಎಸ್‌ಐಗೆ ರವಾನಿಸುತ್ತಿದ್ದ. ಇದಕ್ಕೆ ಪ್ರತಿಯಾಗಿ ಹಣ ಪಡೆಯುತ್ತಿದ್ದ ಎಂದು ಮಿಶ್ರಾ ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ