ಆ್ಯಪ್ನಗರ

WhatsApp DPಗಾಗಿ ವಿಚ್ಛೇದಿತ ಪತ್ನಿಗೆ ಥಳಿತ

ಅಸೋದಿಯಾ ನಿವಾಸಿಯಾಗಿರುವ ಅದಿತಿ ಮಧು ಎಂಬ 29 ವರ್ಷದ ಮಹಿಳೆ 3 ವರ್ಷದ ಹಿಂದೆ ಕಲ್ಪೇನ್ ವಲೇರಾ ಎಂಬಾತನ ಜತೆ ವಿವಾಹವಾಗಿದ್ದಳು. ಕಳೆದ 8 ತಿಂಗಳ ಹಿಂದೆ ಆಕೆ ಆತನಿಂದ ದೂರವಾಗಿದ್ದು, ವಿಚ್ಛೇದನದ ಬಳಿಕ ಪತಿ ಧಾರಾ ಎಂಬಾಕೆಯನ್ನು ವಿವಾಹವಾಗಿದ್ದ.

TIMESOFINDIA.COM 17 Dec 2018, 3:33 pm
ಅಹಮದಾಬಾದ್: ತಮ್ಮ ಮದುವೆಯ ಸಂದರ್ಭದಲ್ಲಿ ಕ್ಲಿಕ್ಕಿಸಲಾದ ಗಣೇಶ ದೇವರ ಚಿತ್ರವನ್ನು ವಾಟ್ಸ್ಆ್ಯಪ್ ಡಿಪಿ ಮಾಡಿದ್ದಕ್ಕೆ ವ್ಯಕ್ತಿಯೊಬ್ಬ ತನ್ನ ಹಾಲಿ ಪತ್ನಿ ಜತೆ ಸೇರಿ ಮಾಜಿ ಪತ್ನಿಯನ್ನು ಮನಬಂದಂತೆ ಥಳಿಸಿದ ಘಟನೆ ಗುಜರಾತಿನಲ್ಲಿ ನಡೆದಿದೆ.
Vijaya Karnataka Web Whatsapp


ಅಷ್ಟಕ್ಕೂ ಆಗಿದ್ದೇನು?

ಅಸೋದಿಯಾ ನಿವಾಸಿಯಾಗಿರುವ ಅದಿತಿ ಮಧು ಎಂಬ 29 ವರ್ಷದ ಮಹಿಳೆ 3 ವರ್ಷದ ಹಿಂದೆ ಕಲ್ಪೇನ್ ವಲೇರಾ ಎಂಬಾತನ ಜತೆ ವಿವಾಹವಾಗಿದ್ದಳು. ಕಳೆದ 8 ತಿಂಗಳ ಹಿಂದೆ ಆಕೆ ಆತನಿಂದ ದೂರವಾಗಿದ್ದು, ವಿಚ್ಛೇದನದ ಬಳಿಕ ಪತಿ ಧಾರಾ ಎಂಬಾಕೆಯನ್ನು ವಿವಾಹವಾಗಿದ್ದ.

ಇತ್ತೀಚಿಗೆ ಅದಿತಿ ತನ್ನ ಮತ್ತು ಕಲ್ಪೇನ್ ವಿವಾಹದ ಸಂದರ್ಭದಲ್ಲಿ ಕ್ಲಿಕ್ಕಿಸಲಾದ ಗಣಪತಿ ಚಿತ್ರವನ್ನು ತನ್ನ ವಾಟ್ಸ್ಆ್ಯಪ್ ಡಿಪಿ ಮಾಡಿಕೊಂಡಿದ್ದಳು. ಅದನ್ನು ನೋಡಿದ ಕಲ್ಪೇನ್ ಮತ್ತು ಆತನ ಹಾಲಿ ಪತ್ನಿ ಅದಿತಿ ಮನೆಗೆ ಬಂದು ಥಳಿಸಿದ್ದಾರೆ. ಅದಿತಿ ಸಹೋದರ ಸಹಾಯಕ್ಕೆ ಬಂದಾಗ ಆತನಿಗೂ ಕಪಾಳಮೋಕ್ಷ ಮಾಡಿದ್ದಾರೆ.

ಬಳಿಕ ನಮ್ಮ ಮದುವೆಯ ಸಂದರ್ಭದಲ್ಲಿ ಕ್ಲಿಕ್ಕಿಸಲಾದ ಯಾವುದೇ ಫೋಟೋವನ್ನು ಡಿಪಿಯಾಗಿ ಬಳಸಿದರೆ ಪರಿಣಾಮ ನೆಟ್ಟಗಿರುವುದಿಲ್ಲ, ಕೊಂದೇ ಹಾಕುತ್ತೇನೆ ಎಂದು ಬೆದರಿಕೆ ಹಾಕಿ ಹೋಗಿದ್ದಾನೆ ಎಂದು ತಿಳಿದು ಬಂದಿದೆ.

ನಿರಾಕಾರಣವಾಗಿ ತನ್ನ ಮೇಲೆ ಹಲ್ಲೆ ಮಾಡಿ ಜೀವ ಬೆದರಿಕೆ ಒಡ್ಡಲಾಗಿದೆ ಎಂದು ಅದಿತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.

ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆಯನ್ನು ಆರಂಭಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ