ಆ್ಯಪ್ನಗರ

ಗುಂಡೇಟಿನ 10 ದಿನದ ಬಳಿಕ ಬುಲೆಟ್ ಜತೆಗೇ ಆಸ್ಪತ್ರೆಗೆ ಬಂದ!

ಇಬ್ಬರು ರೌಡಿ ಶೀಟರ್‌ಗಳ ನಡುವೆ ಜೂನ್ 8ರಂದು ಗಲಾಟೆಯಾಗಿತ್ತು. ಈ ಸಂದರ್ಭದಲ್ಲಿ ಎನ್ನೋರ್‌ನ ಡಿ ಸೆಂಥಿಲ್ ಅಲಿಯಾಸ್ ಸುಡುಸೋರು ಸೆಂಥಿಲ್ ಎಂಬಾತನ ಹೊಟ್ಟೆಗೆ ಗುಂಡು ಹೊಕ್ಕಿತ್ತು. ಘಟನೆ ನಡೆದ 10ದಿನಗಳವರೆಗೆ ದೇಹದಲ್ಲಿ ಗುಂಡಿದ್ದರೂ ಆಸ್ಪತ್ರೆಗೆ ಹೋಗದ ಆತ ಮಂಗಳವಾರ ಆಸ್ಪತ್ರೆಗೆ ದಾಖಲಾಗಿದ್ದಾನೆ.

TIMESOFINDIA.COM 19 Jun 2019, 1:53 pm
ಚೆನ್ನೈ: ದೇಹಕ್ಕೆ ಗುಂಡು ತಗುಲಿದರೆ ಆ ನೋವನ್ನು ಸಹಿಸಿಕೊಳ್ಳಲು ಸಾಧ್ಯವೇ? ಈ ವ್ಯಕ್ತಿಯ ಮಟ್ಟಿಗೆ ಅದು ಸಾಧ್ಯ ಎಂದು ಸಾಬೀತಾಗಿದೆ.ಹೌದು, ರೌಡಿ ಶೀಟರ್‌ನೊಬ್ಬ ಗುಂಡು ತಗುಲಿದ 10 ದಿನಗಳ ಬಳಿಕ ಆಸ್ಪತ್ರೆಗೆ ದಾಖಲಾದ ಘಟನೆ ತಮಿಳುನಾಡಿನಲ್ಲಿ ಬೆಳಕಿಗೆ ಬಂದಿದೆ.
Vijaya Karnataka Web Shoot

ಇಬ್ಬರು ರೌಡಿ ಶೀಟರ್‌ಗಳ ನಡುವೆ ಜೂನ್ 8ರಂದು ಗಲಾಟೆಯಾಗಿತ್ತು. ಈ ಸಂದರ್ಭದಲ್ಲಿ ಎನ್ನೋರ್‌ನ ಡಿ ಸೆಂಥಿಲ್ ಅಲಿಯಾಸ್ ಸುಡುಸೋರು ಸೆಂಥಿಲ್ ಎಂಬಾತನ ಹೊಟ್ಟೆಗೆ ಗುಂಡು ಹೊಕ್ಕಿತ್ತು. ಘಟನೆ ನಡೆದ 10ದಿನಗಳವರೆಗೆ ದೇಹದಲ್ಲಿ ಗುಂಡಿದ್ದರೂ ಆಸ್ಪತ್ರೆಗೆ ಹೋಗದ ಆತ ಮಂಗಳವಾರ ಆಸ್ಪತ್ರೆಗೆ ದಾಖಲಾಗಿದ್ದಾನೆ.

ಸ್ಟೆನ್ಲಿ ಸರಕಾರಿ ಆಸ್ಪತ್ರೆಗೆ ದಾಖಲಾಗಿರುವ ಆತನಿಗೆ ಚಿಕಿತ್ಸೆ ನೀಡಲಾಗಿದ್ದು, ಗುಂಡು ತೆಗೆದ ವೈದ್ಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕವಷ್ಟೇ ಪೊಲೀಸರಿಗೆ ಗಲಾಟೆ ನಡೆದ ಬಗ್ಗೆ ಮಾಹಿತಿ ದೊರಕಿದ್ದು ಆರೋಪಿಗಳಾದ ಜೆ. ಅಲೆಕ್ಸಾಂಡರ್ (32) ಮತ್ತು ಪಿ ಟಿ ರಮೇಶ್ (33) ಅವರನ್ನು ಬಂಧಿಸಲಾಯ್ತು.

ಮಾತಿಗೆ ಮಾತು ಬೆಳೆದು ರಮೇಶ್, ಸೆಂಥಿಲ್ ಮೇಲೆ ಗುಂಡು ಹಾರಿಸಿದ್ದ ಎಂದು ತಿಳಿದುಬಂದಿದೆ. ಆತ ಪೊಲೀಸರಲ್ಲಿ ದೂರು ನೀಡಿದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಬೆದರಿಸಿದ್ದರಿಂದ ಸೆಂಥಿಲ್ ಆಸ್ಪತ್ರೆಗೆ ಸಹ ಹೋಗದೆ ನೋವು ನುಂಗಿಕೊಂಡು ಮನೆಯಲ್ಲಿದ್ದ ಎಂದು ತಿಳಿದುಬಂದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ