ಆ್ಯಪ್ನಗರ

ಉಗ್ರ ಹುಲಿಗಳನ್ನು ಕೊಂದು ಹಾಕಬೇಕು: ಶೂಟರ್ ನವಾಬ್ ಶಫತ್ ಅಲಿ ಖಾನ್

ಸಂರಕ್ಷಣೆಯ ಭಾಗವಾಗಿ ಭಯೋತ್ಪಾದಕ ಹುಲಿಗಳನ್ನು ಅರಿವಳಿಕೆ ನೀಡಿ ಸೆರೆ ಹಿಡಿಯಬೇಕು ಇಲ್ಲವೇ ಅವುಗಳನ್ನು ಕೊಂದು ಹಾಕಬೇಕು ಎಂದು ನವಾಬ್ ಶಫತ್ ಅಲಿ ಖಾನ್ ಹೇಳಿದ್ದಾರೆ.

TIMESOFINDIA.COM 8 Feb 2019, 12:19 pm
ಹೈದರಾಬಾದ್: ನರ ಭಕ್ಷಕ ಹುಲಿಗಳು ಭಯೋತ್ಪಾದಕರಂತೆ, ಅವುಗಳನ್ನು ನಿರ್ಮೂಲನೆ ಮಾಡಬೇಕು ಎಂದು ಶೂಟರ್ ನವಾಬ್ ಶಫತ್ ಅಲಿ ಖಾನ್ ಹೇಳಿರುವುದು ಚರ್ಚೆಗೆ ಗ್ರಾಸವಾಗಿದೆ.
Vijaya Karnataka Web shoot


ನಂಪಾಲಿಯಲ್ಲಿರುವ ಹೈದರಾಬಾದ್ ಮೆಟ್ರೋಪಾಲಿಟನ್ ಕ್ರಿಮಿನಲ್ ಕೋರ್ಟ್‌ನ ಬಾರ್ ಅಸೋಸಿಯೇಶನ್ ಅಹ್ವಾನದ ಮೇರೆಗೆ ಗುರುವಾರ ಮಧ್ಯಾಹ್ನ ವಕೀಲರ ಜತೆ ನಡೆದ ಸಂವಹನ ನಡೆಸಿದ ನವಾಬ್, ಸಂರಕ್ಷಣೆಯ ಭಾಗವಾಗಿ ಭಯೋತ್ಪಾದಕ ಹುಲಿಗಳನ್ನು ಅರವಳಿಕೆ ನೀಡಿ ಸೆರೆ ಹಿಡಿಯಬೇಕು ಇಲ್ಲವೇ ಅವುಗಳನ್ನು ಕೊಂದು ಹಾಕಬೇಕು ಎಂದು ಹೇಳಿದ್ದಾರೆ.

'ಇದುವರೆಗೂ ನಾನು 7 ನರ ಭಕ್ಷಕ ಹುಲಿ ಹಾಗೂ ಚಿರತೆಗಳನ್ನು ಶೂಟ್ ಮಾಡಿದ್ದೇನೆ. ಗ್ವಾಲಿಯರ್‌ನಲ್ಲಿ ನಡೆದ ಬೃಹತ್ ಕಾರ್ಯಚರಣೆಯಲ್ಲಿ 17,400 ಮತ್ತು ಬಿಹಾರದಲ್ಲಿ 7000 ಕಾಡು ಹಂದಿಗಳನ್ನು ಹೊಡೆದು ಹಾಕಿರುವುದಕ್ಕೆ ನನಗೆ ಹೆಮ್ಮೆ ಇದೆ' ಎಂದಿದ್ದಾರೆ ಖಾನ್.

ಹುಲಿಗಳ ಒಟ್ಟು ಜನಸಂಖ್ಯೆಯಲ್ಲಿ ಕೇವಲ 0.1ರಷ್ಟು ಮಾತ್ರ ನರಭಕ್ಷಕ ಹುಲಿಗಳಿವೆ. ಇದು ದೊಡ್ಡ ಸಮಸ್ಯೆಯೇ ಅಲ್ಲ. ನರಭಕ್ಷಕ ಹುಲಿ ಮತ್ತು ಚಿರತೆಗಳ ಸಮಸ್ಯೆಗೆ ಮುಕ್ತಿ ಕೊಡಲು ಅರವಳಿಕೆ ಪ್ರಯೋಗಿಸುವುದರಲ್ಲಿ ಮತ್ತು ಶೂಟ್ ಮಾಡುವುದರಲ್ಲಿ ಪರಿಣಿತರಾಗಿರುವ ವೃತ್ತಿಪರರ ಅಗತ್ಯವಿದೆ. ಸದ್ಯ ದೇಶದಲ್ಲಿರುವ ಪರಿಣಿತ ಶೂಟರ್ ಎಂದರೆ ನಾನೊಬ್ಬ ಮಾತ್ರ ಎಂದು ಅವರು ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ