ಆ್ಯಪ್ನಗರ

ಪರಸಂಗದ ವೇಳೆ ಪ್ರತ್ಯಕ್ಷನಾದ ಪತಿ, ರೇಪ್‌ ಎಂದ ಮಹಿಳೆ

ಗಂಡನಿಲ್ಲದ ವೇಳೆ ಮತ್ತೊಬ್ಬನೊಂದಿಗೆ ಚಕ್ಕಂದವಾಡುತ್ತಿದ್ದ ಮಹಿಳೆ, ಬಳಿಕ ತನ್ನ ಮೇಲೆ ಅತ್ಯಾಚಾರ ಯತ್ನ ನಡೆದಿದೆ ಎಂದು ದೂರು ನೀಡಿದ ಘಟನೆ ವರದಿಯಾಗಿದೆ.

ಟೈಮ್ಸ್ ಆಫ್ ಇಂಡಿಯಾ 12 Jul 2017, 12:52 pm
ಮುಂಬಯಿ: ಪರ ಪುರುಷನೊಂದಿಗೆ ಸರಸವಾಡುತ್ತಿದ್ದ ಮಹಿಳೆ, ಗಂಡನನ್ನು ಕಂಡ ಕೂಡಲೇ ತನ್ನ ಮೇಲೆ ಅತ್ಯಾಚಾರ ಯತ್ನ ನಡೆಯುತ್ತಿದೆ ಎಂದು ಬೊಬ್ಬೆ ಇಟ್ಟು ದೂರು ನೀಡಿದ ಘಟನೆ ವರದಿಯಾಗಿದೆ.
Vijaya Karnataka Web man finds wifes friend in bed she alleges rape
ಪರಸಂಗದ ವೇಳೆ ಪ್ರತ್ಯಕ್ಷನಾದ ಪತಿ, ರೇಪ್‌ ಎಂದ ಮಹಿಳೆ


ಇಲ್ಲಿನ ಮಲಾಡ್‌ ಪ್ರದೇಶದಲ್ಲಿನ ನಿವಾಸಿ ಗಂಡ, ಮಕ್ಕಳು, ಮಾವ ಮತ್ತು ಅತ್ತಿಗೆಯೊಂದಿಗೆ ವಾಸವಾಗಿದ್ದಳು. ರಾತ್ರಿ ಮನೆಯಿಂದ ಹೊರ ಹೋಗಿದ್ದ ಪತಿ ಏನೋ ಮರೆತಿದೆ ಎಂದು ಮತ್ತೆ ಮನೆಗೆ ಮರಳಿದ್ದಾರೆ. ಆಗ ಪತ್ನಿ ಜತೆ ಮತ್ತೊಬ್ಬ ವ್ಯಕ್ತಿ ಇರುವುದನ್ನು ಕಂಡು ಬೆಚ್ಚಿಬಿದ್ದಿದ್ದಾರೆ.

ಗಂಡನನ್ನು ಕಂಡ ಕೂಡಲೇ ಚೀರಾಟ ಆರಂಭಿಸಿದ ಮಹಿಳೆ ತನ್ನ ಮೇಲೆ ಅತ್ಯಾಚಾರ ಯತ್ನವಾಗುತ್ತಿದೆ ಎಂದು ಬೊಬ್ಬೆಯಿಟ್ಟಿದ್ದಳು. ಈ ವೇಳೆ ವ್ಯಕ್ತಿಯನ್ನು ಹಿಡಿಯಲು ಗಂಡ ಮುಂದಾಗಿದ್ದರೂ ಆತ ತಪ್ಪಿಸಿಕೊಂದು ಪರಾರಿಯಾಗಿದ್ದ.

ಈ ಬಗ್ಗೆ ತನಿಖೆ ಆರಂಭಿಸಿದ ಪೊಲೀಸರು ಸ್ಥಳೀಯ ನಿವಾಸಿಗಳ ಹೇಳಿಕೆಯನ್ನೂ ದಾಖಲಿಸಿಕೊಂಡ ಸಂದರ್ಭದಲ್ಲಿ ಮಹಿಳೆಗೂ ಆ ವ್ಯಕ್ತಿಗೂ ಪರಿಚಯವಿತ್ತು ಎಂಬ ಅಂಶ ಬಯಲಾಯಿತು. ಅಲ್ಲದೇ ಆತ ಹಲವು ಬಾರಿ ಮನೆಗೆ ಬಂದು ಹೋಗಿದ್ದ ಎಂದು ತಿಳಿದುಬಂತು.

ಸದ್ಯ ಪೊಲೀಸರು ಮಹಿಳೆ ನೀಡಿದ ದೂರಿನ ಮೇಲೆ ಆ ವ್ಯಕ್ತಿ ವಿರುದ್ಧ ಸೆಕ್ಷನ್‌ 377ರಡಿ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ