ಆ್ಯಪ್ನಗರ

ಸುಲಭ ಸಾಗಣೆಯ ಕ್ಷಿಪಣಿ ಪರೀಕ್ಷೆ ಯಶಸ್ವಿ

ಒಂದಷ್ಟು ಪರೀಕ್ಷೆಗಳ ಬಳಿಕ 2021ರಿಂದ ದೊಡ್ಡ ಮಟ್ಟದಲ್ಲಿ ಕ್ಷಿಪಣಿ ಉತ್ಪಾದನೆ ಆರಂಭಗೊಳ್ಳಲಿದೆ ಎಂದು ರಕ್ಷಣಾ ಇಲಾಖೆಯ ಮೂಲಗಳು ಹೇಳಿವೆ.

Vijaya Karnataka 15 Mar 2019, 5:00 am
ಹೊಸದಿಲ್ಲಿ: ಯುದ್ಧ ಟ್ಯಾಂಕ್‌ಗಳನ್ನು ಹೊಡೆದುರುಳಿಸಬಲ್ಲ ಸ್ವದೇಶಿ ನಿರ್ಮಿತ ಪೊರ್ಟೆಬಲ್‌ ಆ್ಯಂಟಿ-ಟ್ಯಾಂಕ್‌ ಗೈಡೆಡ್‌ ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗವನ್ನು ರಾಜಸ್ಥಾನದ ಪೋಖ್ರಣ್‌ನಲ್ಲಿ ಗುರುವಾರ ಯಶಸ್ವಿಯಾಗಿ ನಡೆಸಲಾಗಿದೆ. ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಅಭಿವೃದ್ಧಿಪಡಿಸಿದ ಈ ಕ್ಷಿಪಣಿಯನ್ನು ಯೋಧರು ಬೇಕಾದ ಕಡೆ ಒಯ್ದು, ತಮ್ಮ ಭುಜದ ಮೇಲೆ ಇರಿಸಿಕೊಂಡು ಫೈರ್‌ ಮಾಡುವ ಮೂಲಕ ಯುದ್ಧ ಟ್ಯಾಂಕ್‌ಗಳನ್ನು ಹೊಡೆದುರುಳಿಸಬಹುದಾಗಿದೆ. 2.5 ಕಿಲೋಮೀಟರ್‌ನಷ್ಟು ದೂರದ ಗುರಿಯನ್ನು ಹೊಡೆದುರುಳಿಸಬಲ್ಲದು. ಇಂಟಿಗ್ರೇಟೆಡ್‌ ಎವಿಯೋನಿಕ್ಸ್‌ ವ್ಯವಸ್ಥೆ ಹಾಗೂ ಅಲ್ಟ್ರಾ ಮಾರ್ಡನ್‌ ಇಮೇಜಿಂಗ್‌ ಇನ್ಫ್ರಾರೆಡ್‌ ರೇಡಾರ್‌ಗಳನ್ನು ಹೊಂದಿದೆ. ಇನ್ನೂ ಒಂದಷ್ಟು ಪರೀಕ್ಷೆಗಳ ಬಳಿಕ 2021ರಿಂದ ದೊಡ್ಡ ಮಟ್ಟದಲ್ಲಿ ಉತ್ಪಾದನೆ ಆರಂಭಗೊಳ್ಳಲಿದೆ ಎಂದು ರಕ್ಷಣಾ ಇಲಾಖೆಯ ಮೂಲಗಳು ಹೇಳಿವೆ.
Vijaya Karnataka Web drdo




ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ