ಆ್ಯಪ್ನಗರ

ಅತ್ಯಾಚಾರ ಎಸಗಿ, ಹಣೆಗೆ ಸಿಂಧೂರ ಇಟ್ಟು ಪರಾರಿ

ಮನೆಗೆ ನುಗ್ಗಿದ ಕಳ್ಳ ಬಾಲಕಿ ಮೇಲೆ ಅತ್ಯಾಚಾರ ಎಸಗಿ, ಹಣೆಗೆ ಸಿಂಧೂರ ಇಟ್ಟು ಪರಾರಿಯಾಗಿದ್ದಾನೆ!

ಟೈಮ್ಸ್ ಆಫ್ ಇಂಡಿಯಾ 25 Jun 2016, 3:40 pm
ಕಾನ್ಪುರ: ಮನೆಯಲ್ಲಿ ಒಬ್ಬಳೇ ಹುಡುಗಿ ಇದ್ದ ಸಂದರ್ಭದಲ್ಲಿ ನುಗ್ಗಿದ ಕಳ್ಳ ಆಕೆಯ ಮೇಲೆ ಅತ್ಯಾಚಾರ ಎಸಗಿ, ಹಣೆಗೆ ಸಿಂಧೂರ ಇಟ್ಟು ಪರಾರಿಯಾದ ವಿಚಿತ್ರ ಘಟನೆ ಫರುಕ್ಕಾಬಾದ್‌ ಜಿಲ್ಲೆಯಲ್ಲಿ ನಡೆದಿದೆ.
Vijaya Karnataka Web man rapes girl puts sindoor on her forehead and flees
ಅತ್ಯಾಚಾರ ಎಸಗಿ, ಹಣೆಗೆ ಸಿಂಧೂರ ಇಟ್ಟು ಪರಾರಿ


ವಿಚಿತ್ರ ಕಳ್ಳತನ ಪ್ರಕರಣ ಬಾಲಕಿಗೆ ಸಿಂಹ ಸ್ವಪ್ನವಾಗಿದೆ. ಅತ್ಯಾಚಾರ ಎಸಗಿದ ಕಳ್ಳ ಆಕೆಯ ಹಣೆಯ ಮೇಲೆ ಸಿಂಧೂರ ಇಟ್ಟು, ಹಣ ಹಾಗೂ ಬೆಲೆಬಾಳುವ ವಸ್ತುಗಳನ್ನು ದೋಚಿ ಪರಾರಿಯಾಗಿದ್ದಾನೆ.

ಘಟನೆ ಸಂಬಂಧ ಎಫ್‌ಐಆರ್ ದಾಖಲಾಗಿದೆ. ಅತ್ಯಾಚಾರಿ ಸೆರೆಗೆ ಪೊಲೀಸರು ಜಾಲ ಬೀಸಿದ್ದಾರೆ. ಘಟನೆ ನಡೆದಾಗ ಪೋಷಕರು ಬಾಲಕಿಯ ಅಕ್ಕನ ಮನೆಗೆ ತೆರಳಿದ್ದರು ಎನ್ನಲಾಗಿದೆ.

ಮಲಗಿದ್ದ ಬಾಲಕಿಯನ್ನು ಎಬ್ಬಿಸಿದ ಕಳ್ಳ ಮತ್ತು ಆತನ ಸಹಚರ ದುಡ್ಡು ಹಾಗೂ ಬೆಲೆಬಾಳುವ ವಸ್ತುಗಳನ್ನು ನೀಡುವಂತೆ ಬೆದರಿಕೆ ಒಡ್ಡಿದ್ದರು. ಕಿರುಚಿ, ಕೊಠಡಿಯಿಂದ ಹೊರಗೋಡಲು ಯತ್ನಿಸಿದ ಬಾಲಕಿಯನ್ನು ಒಳಗೆ ಎಳೆದುಕೊಂಡ ಬಂದ ಕಳ್ಳ, ಆಕೆಯ ಮೇಲೆ ಅತ್ಯಾಚಾರ ಎಸಗಿದ್ದ. ನಂತರ ಬೆದರಿಕೆ ಒಡ್ಡಿ 35,000 ರೂ. ನಗದು ಹಾಗೂ ಇತರ ಬೆಲೆ ಬಾಳುವ ವಸ್ತುಗಳನ್ನು ದೋಚಿದ್ದಾನೆ.

ಮನೆಯಿಂದ ಪರಾರಿಯಾಗುವ ಮೊದಲು ಕಳ್ಳ ಆಕೆಯ ಹಣೆಗೆ ಸಿಂಧೂರ ಇಟ್ಟಿದ್ದಾನೆ. ಅತ್ಯಾಚಾರಿಯ ಸುಳಿವಿಗೆ ಫರುಕ್ಕಾಬಾದ್‌ ಪೊಲೀಸರು ನಗದು ಬಹುಮಾನ ಘೋಷಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ