ಆ್ಯಪ್ನಗರ

ಅಪ್ರಾಪ್ತೆ ಬಳಿ 'ನನ್ನ ಪ್ರೀತಿಸು' ಎಂದವನಿಗೆ 3 ವರ್ಷ ಜೈಲು

15 ವರ್ಷದ ಅಪ್ರಾಪ್ತೆಯ ಕೈ ಹಿಡಿದು ಎಳೆದು ನನ್ನನ್ನು ಪ್ರೀತಿಸು ಎಂದು ಒತ್ತಾಯಿಸಿದ 23 ವರ್ಷದ ಯುವಕನಿಗೆ 3 ವರ್ಷ ಜೈಲು ಶಿಕ್ಷೆ ಲಭಿಸಿದೆ.

TNN 22 Aug 2017, 12:14 pm
ಮುಂಬಯಿ: 15 ವರ್ಷದ ಅಪ್ರಾಪ್ತೆಯ ಕೈ ಹಿಡಿದು ಎಳೆದು 'ನನ್ನನ್ನು ಪ್ರೀತಿಸು' ಎಂದು ಒತ್ತಾಯಿಸಿದ 23 ವರ್ಷದ ಯುವಕನಿಗೆ 3 ವರ್ಷ ಜೈಲು ಶಿಕ್ಷೆ ಲಭಿಸಿದೆ. 'ಲೈಂಗಿಕ ಕಿರುಕುಳದಿಂದ ಮಕ್ಕಳ ರಕ್ಷಣೆ 'ಯ ವಿಶೇಷ ಕಾಯ್ದೆ (POCSO) ಅನ್ವಯ ಶಿಕ್ಷೆಗೆ ಒಳಗಾಗಿದ್ದಾನೆ.
Vijaya Karnataka Web man says teens love me gets 3 year jail
ಅಪ್ರಾಪ್ತೆ ಬಳಿ 'ನನ್ನ ಪ್ರೀತಿಸು' ಎಂದವನಿಗೆ 3 ವರ್ಷ ಜೈಲು


2015 ಆಗಸ್ಟ್‌ 10ರಂದು ನಡೆದ ಘಟನೆಯ ಕುರಿತು ಬಾಲಕಿ ಮನೆಯವರು ಪೊಲೀಸ್‌ ದೂರು ನೀಡಿದ್ದರು.

ಹುಡುಗಿ ಮನೆಯಿಂದ ಕೆಲವೇ ಅಂತರ ದೂರವಿರುವ ಹುಡುಗನ ಮನೆ ಮುಂದೆ ಹಾದು ಹೋಗುವಾಗ ಹುಡುಗ ಆಕೆಯನ್ನು ಕೈ ಹಿಡಿದು ಎಳೆದು 'ನನ್ನನ್ನು ಪ್ರೀತಿಸು' ಎಂದು ಒತ್ತಾಯಿಸಿದ್ದಾನೆ. ಹುಡುಗಿ ಕೈ ಬಿಡಿಸಿಕೊಳ್ಳಲು ಪ್ರಯತ್ನಿಸಿದಾಗ ಆಕೆಯ ಬೆನ್ನಿಗೆ ಒಂದೇಟು ಹಾಕಿ, ಕೆಟ್ಟದಾಗಿ ಬೈಯ್ದು, ಪ್ರೀತಿಸದಿದ್ದರೆ ಕೊಲ್ಲುವುದಾಗಿಯೂ ಬೆದರಿಸಿದ್ದ ಎಂದು ಹುಡುಗಿ ದೂರಿನಲ್ಲಿ ಹೇಳಿದ್ದಳು.

ಈಕೆಯ ಮನೆಯ ಸಮೀಪವೇ ಆತನ ಮನೆಯಿದ್ದರೂ ಈ ಘಟನೆಗೆ ಮುಂಚೆ ಆತನನ್ನು ನೋಡಿರಲಿಲ್ಲ ಎಂದು ಹುಡುಗಿ ತಿಳಿಸಿದ್ದಳು. ಘಟನೆಯ ಕುರಿತು ಆತನ ತಂದೆಗೆ ಈಕೆಯ ಮನೆಯವರು ತಿಳಿಸಿದಾಗ ಆತನೂ ನಿರ್ಲಕ್ಷ್ಯ ವರ್ತನೆ ತೋರಿದ್ದ.

ಆಗ ಅಪ್ರಾಪ್ತೆಯ ಮನೆಯವರು ಠಾಣೆಯ ಮೆಟ್ಟಿಲು ಹತ್ತಿದರು. ಈ ಪ್ರಕರಣ ಕೋರ್ಟ್‌ ಮೆಟ್ಟಲೇರಿ ಇದೀಗ ಕೋರ್ಟ್‌ನಿಂದ ಅಂತಿಮ ತೀರ್ಪು ಹೊರಬಂದಿದ್ದು, ಆರೋಪಿಗೆ 3 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.

A 23-year-old man was sentenced to three years' imprisonment by a special Protection of Children from Sexual Offences (POCSO) Act court for sexually harassing a 15-year-old.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ