ಆ್ಯಪ್ನಗರ

ಹೃದಯದ ಕಸಿ ನಡೆದರೂ ಮ್ಯಾರಥಾನ್ ಓಡಲಿದ್ದಾರೆ ರಾಯ್

2016ರ ಜುಲೈನಲ್ಲಿ ಹೃದಯದ ಸಮಸ್ಯೆಗೊಳಗಾಗಿದ್ದ ರಾಯ್, ಆಂಧ್ರಪ್ರದೇಶದಲ್ಲಿ ಅಪಘಾತಕ್ಕೀಡಾಗಿದ್ದ ವ್ಯಕ್ತಿಯೋರ್ವರ ಹೃದಯ ದಾನ ಪಡೆದು ಕಸಿ ಮಾಡಿಸಿಕೊಂಡಿದ್ದರು.

Vijaya Karnataka Web 10 Jan 2019, 3:44 pm
ಮುಂಬಯಿ: ಮೂರು ವರ್ಷದ ಹಿಂದೆ ಹೃದಯದ ಸಮಸ್ಯೆಗೊಳಗಾಗಿದ್ದ ಮುಂಬಯಿಯ ರುಪಾಯನ್ ರಾಯ್‌ ಅವರಿಗೆ ಹೃದಯ ಮರುಜೋಡಣೆ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು.
Vijaya Karnataka Web Marathon


ಅದಾದ ಬಳಿಕ ಅವರು ಇದೀಗ ಮುಂಬಯಿ ಮ್ಯಾರಥಾನ್ ಓಡಲು ನಿರ್ಧರಿಸಿದ್ದಾರೆ. 2016ರ ಜುಲೈನಲ್ಲಿ ಹೃದಯದ ಸಮಸ್ಯೆಗೊಳಗಾಗಿದ್ದ ರಾಯ್, ಆಂಧ್ರಪ್ರದೇಶದಲ್ಲಿ ಅಪಘಾತಕ್ಕೀಡಾಗಿದ್ದ ವ್ಯಕ್ತಿಯೋರ್ವರ ಹೃದಯ ದಾನ ಪಡೆದು ಕಸಿ ಮಾಡಿಸಿಕೊಂಡಿದ್ದರು.

ಅದಾದ ಬಳಿಕ ಅವರಿಗೆ ವೈದ್ಯರು ವಿಶ್ರಾಂತಿ ಸೂಚಿಸಿದ್ದರು. ನಾಲ್ಕು ತಿಂಗಳ ವಿಶ್ರಾಂತಿ ಬಳಿಕ ರಾಯ್ ನಿಧಾನವಾಗಿ ಎಲ್ಲ ಕೆಲಸ ಮಾಡಲರಂಭಿಸಿದರು. ನಂತರ ಓಡಾಡಲು ಆರಂಭಿಸಿದ ರಾಯ್, ಬಿಎಸ್‌ಎಫ್ ಆಯೋಜಿಸಿದ್ದ 5 ಕಿ.ಮೀ. ಓಟದಲ್ಲಿ ಪಾಲ್ಗೊಂಡರು.

ಎಲ್‌ಐಸಿಯಲ್ಲಿ ಎಚ್‌ಆರ್ ಮ್ಯಾನೇಜರ್ ಆಗಿರುವ ರಾಯ್ ನಿರ್ಧಾರಕ್ಕೆ ಎಲ್ಲರೂ ಅಚ್ಚರಿ ವ್ಯಕ್ತಪಡಿಸಿದರೂ, ರಾಯ್ ಮಾತ್ರ ಎದೆಗುಂದದೇ ಮ್ಯಾರಥಾನ್ ಓಡಿದರು. ಅದಾದ ಬಳಿಕ ಈಗ ಮುಂಬಯಿ ಮ್ಯಾರಥಾನ್‌ಗೆ ಹೆಸರು ನೋಂದಾಯಿಸಿದ್ದು, 21 ಕಿ.ಮೀ. ಮ್ಯಾರಥಾನ್ ಓಡಲು ರಾಯ್ ಸಜ್ಜಾಗಿದ್ದಾರೆ.

ಜತೆಗೆ ದಾನಿಯ ಕುಟುಂಬಕ್ಕೂ ರಾಯ್ ಮತ್ತೊಮ್ಮೆ ಧನ್ಯವಾದ ಹೇಳಲು ಬಯಸಿದ್ದು, ಉಳಿದಂತೆ ತಮ್ಮ ಆಪ್ತರಲ್ಲಿ ಅಂಗಾಂಗ ದಾನದ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ