ಆ್ಯಪ್ನಗರ

ವನ್ಯ ಮೃಗಗಳ ವಧೆ: ಪರಿಸರ ಸಚಿವಾಲಯದ ವಿರುದ್ಧ ಮನೇಕಾ ತರಾಟೆ

ಕೆಲವು ವನ್ಯ ಮೃಗಗಳನ್ನು ಕೊಲ್ಲುತ್ತಿದ್ದು, ಇದಕ್ಕೆ ಅನುಮತಿ ನೀಡಿದ ಪರಿಸರ ಸಚಿವಾಲಯದ ಕ್ರಮದ ವಿರುದ್ಧ ಮನೇಕಾ ತರಾಟೆ ತೆಗೆದುಕೊಂಡಿದ್ದಾರೆ.

ಏಜೆನ್ಸೀಸ್ 9 Jun 2016, 3:09 pm
ಹೊಸದಿಲ್ಲಿ: ದೇಶದ ಕೆಲವು ರಾಜ್ಯಗಳನ್ನು 'ತೊಂದರೆ ನೀಡುತ್ತಿವೆ,' ಎಂಬ ನೆಪವೊಡ್ಡಿ ಕೆಲವು ಪ್ರಾಣಿಗಳನ್ನು ಕೊಲ್ಲುತ್ತಿದ್ದು, ಇದಕ್ಕೆ ಅನುಮತಿ ನೀಡಿದ ಪರಿಸರ ಸಚಿವಾಲಯದ ಕ್ರಮದ ವಿರುದ್ಧ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಮನೇಕಾ ಗಾಂಧಿ ತರಾಟೆ ತೆಗೆದುಕೊಂಡಿದ್ದಾರೆ.
Vijaya Karnataka Web maneka slams environment ministry for allowing states to kill elephants boars
ವನ್ಯ ಮೃಗಗಳ ವಧೆ: ಪರಿಸರ ಸಚಿವಾಲಯದ ವಿರುದ್ಧ ಮನೇಕಾ ತರಾಟೆ


'ಬರ ಪೀಡಿತ ಮಹಾರಾಷ್ಟ್ರದ ಚಂದ್ರಾಪುರದಲ್ಲಿ 50ಕ್ಕೂ ಹೆಚ್ಚು ಸೂಕರ (ಬೀಜದ ಹಂದಿ)ಗಳನ್ನು ಕೊಲ್ಲಲಾಗಿದೆ. ಇದಕ್ಕೆ ರಾಜ್ಯ ಪರಿಸರ ಇಲಾಖೆಯ ವಿರೋಧವಿದ್ದು, ಕೇಂದ್ರ ಸಚಿವಾಲಯ ಅನುಮತಿ ನೀಡಿದೆ. ಪ್ರಾಣಿಗಳನ್ನು ಕೊಲ್ಲುವ ದುರಾಸೆ ಮನುಷ್ಯನಿಗೇಕೆ ಎಂಬುವುದೇ ಅರ್ಥವಾಗುವುದಿಲ್ಲ,' ಎಂದಿದ್ದಾರೆ.

'ಪಶ್ಚಿಮ ಬಂಗಾಳ ಸರಕಾರ ಆನೆಗಳನ್ನು ಕೊಲ್ಲಲು, ಹಿಮಾಚಲ ಪ್ರದೇಶ ಮಂಗ ಜತೆಗೆ ಗೋವಾ ಸರಕಾರ ನವಿಲುಗಳನ್ನು ಸಾಯಿಸಲು ಅನುಮತಿ ಯಾಚಿಸುತ್ತಿದೆ,' ಎಂದರು.

'ಕೇಂದ್ರ ಪರಿಸರ ಸಚಿವಾಲಯ ಎಲ್ಲ ರಾಜ್ಯಗಳಿಗೂ 'ತೊಂದರೆ ನೀಡುವ' ಪ್ರಾಣಿಗಳ ಪಟ್ಟಿ ನೀಡಲು ಕೋರಿದ್ದು, ನಂತರ ಅವುಗಳನ್ನು ಕೊಲ್ಲಲು ಅನುಮತಿ ಕೋರಲಾಗುತ್ತದೆ. ಇಂಥದ್ದೊಂದು ವಿಕೃತ ಇದೇ ಮೊದಲ ಬಾರಿಗೆ ನಡೆಯುತ್ತಿರುವುದು,' ಎಂದು ಆರೋಪಿಸಿದ್ದಾರೆ.

ಮಾನವ-ವನ್ಯ ಮೃಗಗಳ ಸಂಘರ್ಷದ ಹಿನ್ನೆಲೆಯಲ್ಲಿ ಕಳೆದ ವರ್ಷ ಪರಿಸರ ಹಾಗೂ ಅರಣ್ಯ ಸಚಿವಾಲಯಗಳು ತೊಂದರೆ ನೀಡುವ ಪ್ರಾಣಿಗಳನ್ನು ಕೊಲ್ಲಲು ಒಪ್ಪಿಕೊಂಡಿದ್ದವು.

'ರೈತರ ಬೆಳೆಗಳನ್ನು ನಾಶ ಪಡಿಸುವಂಥ ಪ್ರಾಣಿಗಳನ್ನು ಕೊಲ್ಲಲು ಅವಕಾಶವಿದ್ದು, ಆ ಪ್ರದೇಶಗಳಲ್ಲಿ ಸೂಕರ ಮತ್ತು ನೀಲಿ ಹೋರಿಯಂಥ ಪ್ರಾಣಿಗಳನ್ನು ಕೊಲ್ಲಲು ಅನುಮತಿ ನೀಡಲಾಗುತ್ತಿದೆ,' ಎಂದು ಪರಿಸರ ಸಚಿವ ಪ್ರಕಾಶ್ ಜಾವೇಡ್ಕರ್, ಮನೇಕಾ ಗಾಂಧಿ ಅವರ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ