ಆ್ಯಪ್ನಗರ

ಇಂದು ಖಟ್ಟರ್‌ ಪ್ರಮಾಣ ವಚನ ಸ್ವೀಕಾರ: ಡಿಸಿಎಂ ಆಗಿ ದುಷ್ಯಂತ

ಶನಿವಾರ ಬೆಳಗ್ಗೆ ನಡೆದ ಬಿಜೆಪಿ ಶಾಸಕಾಂಗ ಸಭೆಯಲ್ಲಿಮನೋಹರ­ಲಾಲ್‌ ಖಟ್ಟರ್‌ ಅವರನ್ನು ಶಾಸಕಾಂಗ ನಾಯಕನಾಗಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು.

Vijaya Karnataka 27 Oct 2019, 11:18 am
ಚಂಡೀಗಢ: ಹರಿಯಾಣದ ವಿಧಾನಸಭೆ ಚುನಾ­ವಣೆಯಲ್ಲಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿ­ರುವ ಬಿಜೆಪಿಗೆ ಜನನಾಯಕ ಜನತಾ ಪಕ್ಷ (ಜೆಜೆಪಿ) ಬೆಂಬಲ ಘೋಷಿಸಿದ ಹಿನ್ನೆಲೆಯಲ್ಲಿ ರಾಜ್ಯಪಾಲ ಸತ್ಯದೇವ್‌ ನಾರಾಯಣ್‌ ಆರ್ಯ ಅವರು ಸರಕಾರ ರಚನೆಗಾಗಿ ಮನೋಹರ್‌ ಲಾಲ್‌ ಖಟ್ಟರ್‌ ಅವರಿಗೆ ಶನಿವಾರ ಅಧಿಕೃತ ಆಹ್ವಾನ ನೀಡಿದ್ದಾರೆ. ನರಕ ಚತುರ್ದಶಿಯ ಶುಭದಿನದಂದು ಮಧ್ಯಾಹ್ನ 2.15ಕ್ಕೆ ಎರಡನೇ ಅವಧಿಗೆ ಹರಿಯಾಣ ಮುಖ್ಯಮಂತ್ರಿಯಾಗಿ ಖಟ್ಟರ್‌ ಅಧಿಕಾರ ಸ್ವೀಕರಿಸಲಿದ್ದಾರೆ.
Vijaya Karnataka Web Khattar


ಮಹಾದಲ್ಲಿ ಮುಂದುವರಿದ ಅಧಿಕಾರದ ಬಿಕ್ಕಟ್ಟು: ಲಿಖಿತ ಕರಾರಿಗೆ ಶಿವಸೇನೆ ಪಟ್ಟು

''ನಮ್ಮ ಪಕ್ಷದ 40 ಶಾಸಕರು, 10 ಮಂದಿ ಜೆಜೆಪಿ ಶಾಸಕರು ಹಾಗೂ 7 ಪಕ್ಷೇತರ ಶಾಸಕರ ಬೆಂಬಲವಿರುವ ಪತ್ರವನ್ನು ರಾಜ್ಯಪಾಲರಿಗೆ ಸಲ್ಲಿ­ಸಿದ್ದೆ. ಅದರಂತೆ ರಾಜ್ಯಪಾಲರು ಸರಕಾರ ರಚ­ನೆಗೆ ಆಹ್ವಾನ ನೀಡಿದ್ದಾರೆ. ಭಾನುವಾರ ಮಧ್ಯಾಹ್ನ ಪ್ರಮಾಣವಚನ ಸ್ವೀಕಾರ ಸಮಾರಂಭ ಜರುಗಲಿದೆ. ಉಪಮುಖ್ಯಮಂತ್ರಿಯಾಗಿ ಜೆಜೆಪಿ ಮುಖ್ಯಸ್ಥ ದುಷ್ಯಂತ್‌ ಚೌತಾಲಾ ಹಾಗೂ ಕೆಲವು ಸಚಿವರು ಕೂಡ ನನ್ನೊಂದಿಗೆ ಪ್ರಮಾಣ ಸ್ವೀಕರಿಸಲಿದ್ದಾರೆ,'' ಎಂದು ಖಟ್ಟರ್‌ ತಿಳಿಸಿದ್ದಾರೆ.

ಇದಕ್ಕೂ ಮುನ್ನ ಶನಿವಾರ ಬೆಳಗ್ಗೆ ನಡೆದ ಬಿಜೆಪಿ ಶಾಸಕಾಂಗ ಸಭೆಯಲ್ಲಿಮನೋಹರ­ಲಾಲ್‌ ಖಟ್ಟರ್‌ ಅವರನ್ನು ಶಾಸಕಾಂಗ ನಾಯಕನಾಗಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಕೇಂದ್ರ ಸಚಿವ ರವಿಶಂಕರ್‌ ಪ್ರಸಾದ್‌, ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರುಣ್‌ ಸಿಂಗ್‌ ವೀಕ್ಷಕರಾಗಿ ಭಾಗವಹಿಸಿದ್ದರು. ಈ ಔಪಚಾರಿಕ ಪ್ರಕ್ರಿಯೆ ಪೂರ್ಣಗೊಳ್ಳುತ್ತಿದ್ದಂತೆ ಖಟ್ಟರ್‌ ಅವರು ದುಷ್ಯಂತ್‌ ಚೌತಾಲಾ ಮತ್ತು ಉಭಯ ಪಕ್ಷಗಳ ನಾಯಕರ ಜತೆ ರಾಜಭವನಕ್ಕೆ ತೆರಳಿ ಸರಕಾರ ರಚನೆ ಹಕ್ಕು ಮಂಡಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ