ಆ್ಯಪ್ನಗರ

ಅನಾರೋಗ್ಯ ಪೀಡಿತ ಇಬ್ಬರು ಸಚಿವರನ್ನು ಕೈ ಬಿಟ್ಟ ಪರಿಕ್ಕರ್‌

ಗೋವಾ ಮುಖ್ಯಮಂತ್ರಿ ಮನೋಹರ್‌ ಪರಿಕ್ಕರ್‌ ಸಂಪುಟದಿಂದ ಇಬ್ಬರು ಸಚಿವರಿಗೆ ಕೊಕ್‌ ನೀಡಲಾಗಿದ್ದು, ಮಂದಗೊಂಡಿದ್ದ ಆಡಳಿತವನ್ನು ಚುರುಕುಗೊಳಿಸುವ ಕಸರತ್ತು ನಡೆಸಲಾಗಿದೆ.

Vijaya Karnataka 25 Sep 2018, 10:23 am
ಪಣಜಿ: ಗೋವಾ ಮುಖ್ಯಮಂತ್ರಿ ಮನೋಹರ್‌ ಪರಿಕ್ಕರ್‌ ಸಂಪುಟದಿಂದ ಇಬ್ಬರು ಸಚಿವರಿಗೆ ಕೊಕ್‌ ನೀಡಲಾಗಿದ್ದು, ಮಂದಗೊಂಡಿದ್ದ ಆಡಳಿತವನ್ನು ಚುರುಕುಗೊಳಿಸುವ ಕಸರತ್ತು ನಡೆಸಲಾಗಿದೆ.
Vijaya Karnataka Web Manohar PArikkar


ಕಳೆದ ಕೆಲವು ದಿನಗಳಿಂದ ಅನಾರೋಗ್ಯಕ್ಕೀಡಾಗಿರುವ ಬಿಜೆಪಿಯ ಫ್ರಾನ್ಸಿಸ್‌ ಡಿಸೋಜ ಮತ್ತು ಪಾಂಡುರಂಗ ಮಡ್‌ಕೈಕರ್‌ ಅವರನ್ನು ಸಂಪುಟದಿಂದ ಕೈಬಿಡಲಾಗಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ. ಮುಖ್ಯಮಂತ್ರಿ ಪರಿಕ್ಕರ್‌ ದಿಲ್ಲಿಯ ಏಮ್ಸ್ ಆಸ್ಪತ್ರೆಯಲ್ಲಿಚಿಕಿತ್ಸೆ ಪಡೆಯುತ್ತಿರುವ ಸಂದರ್ಭದಲ್ಲಿಯೇ ಈ ವಿದ್ಯಮಾನ ನಡೆದಿದೆ.

ನಗರಾಭಿವೃದ್ಧಿ ಸಚಿವರಾಗಿದ್ದ ಡಿಸೋಜ ಅಮೆರಿಕದಲ್ಲಿಚಿಕಿತ್ಸೆ ಪಡೆಯುತ್ತಿದ್ದಾರೆ. ಇಂಧನ ಸಚಿವರಾಗಿದ್ದ ಮಡ್‌ಕೈಕರ್‌ ಕೆಲ ತಿಂಗಳ ಹಿಂದೆ ಹೃದಯಾಘಾತಕ್ಕೀಡಾಗಿದ್ದು ಮುಂಬಯಿ ಆಸ್ಪತ್ರೆಯಲ್ಲಿಚಿಕಿತ್ಸೆ ಪಡೆಯುತ್ತಿದ್ದಾರೆ. ಇವರ ಬದಲಿಗೆ ನೀಲೇಶ್‌ ಕ್ಯಾಬ್ರಲ್‌ ಮತ್ತು ಮಿಲಿಂದ್‌ ನಾಯಕ್‌ ಸಚಿವರಾಗಿ ಸೋಮವಾರ ಸಂಜೆಯೇ ಪ್ರಮಾಣ ಸ್ವೀಕರಿಸಿದ್ದಾರೆ.

ಪರಿಕ್ಕರ್‌ ಅವರು ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದು ಶೀಘ್ರದಲ್ಲಿಯೇ ಸಚಿವ ಸಂಪುಟದ ಪುನಾರಚನೆ ನಡೆಯಲಿದೆ. ಪರಿಕ್ಕರ್‌ ನಾಯಕತ್ವದಲ್ಲಿಮಿತ್ರಪಕ್ಷಗಳು ನಂಬಿಕೆ ಇರಿಸಿವೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ಗೋವಾದಲ್ಲಿ ಬಿಜೆಪಿ 14 ಸ್ಥಾನ ಗಳಿಸಿದೆ. ತಲಾ ಮೂವರು ಸದಸ್ಯರನ್ನು ಹೊಂದಿರುವ ಗೋವಾ ಫಾರ್ವಡ್‌ರ್‍ ಪಾರ್ಟಿ ಮತ್ತು ಮಹಾರಾಷ್ಟ್ರವಾದಿ ಗೋಮಾಂತಕ ಪಾರ್ಟಿ, ಎನ್‌ಸಿಪಿಯ ಒಬ್ಬ ಸದಸ್ಯ ಬಿಜೆಪಿಗೆ ಬೆಂಬಲ ನೀಡಿದ್ದಾರೆ. ಅಲ್ಲದೇ ಮೂವರು ಪಕ್ಷೇತರರು ಸಹ ಬಿಜೆಪಿಯನ್ನು ಬೆಂಬಲಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ