ಆ್ಯಪ್ನಗರ

ಉತ್ತರ ಪ್ರದೇಶ: ಭಾರಿ ಮಳೆಗೆ 49ಕ್ಕೂ ಹೆಚ್ಚು ಬಲಿ

ಉತ್ತರ ಪ್ರದೇಶ ರಾಜ್ಯಾದ್ಯಂತ ಗುರುವಾರದಿಂದ ಸುರಿಯುತ್ತಿರುವ ಭಾರಿ ಮಳೆಗೆ ಇಲ್ಲಿಯವರೆಗೆ 49 ಕ್ಕೂ ಹೆಚ್ಚು ಜನ ಬಲಿಯಾಗಿದ್ದಾರೆ.

THE ECONOMIC TIMES 28 Jul 2018, 3:28 pm
ಲಖನೌ: ಉತ್ತರ ಪ್ರದೇಶ ರಾಜ್ಯಾದ್ಯಂತ ಗುರುವಾರದಿಂದ ಸುರಿಯುತ್ತಿರುವ ಭಾರಿ ಮಳೆಗೆ ಇಲ್ಲಿಯವರೆಗೆ 49 ಕ್ಕೂ ಹೆಚ್ಚು ಜನ ಬಲಿಯಾಗಿದ್ದಾರೆ.
Vijaya Karnataka Web Heavy Rain  UP


ಸಹರಾನ್ಪುರದಲ್ಲಿ ಸಾವಿನ ಸಂಖ್ಯೆ ಹೆಚ್ಚಿದ್ದು ಇಲ್ಲಿಯವರೆಗೆ 11 ಜನರು ಮಳೆಗೆ ಜೀವ ತೆತ್ತಿದ್ದಾರೆ. ಆಗ್ರಾ ಮತ್ತು ಮೀರತ್‌ನಲ್ಲಿ ತಲಾ6 ಜನ ಸಾವನ್ನಪ್ಪಿದ್ದರೆ ಮೈನ್ಪುರಿಯಲ್ಲಿ ನಾಲ್ಕು, ಕಾಸ್ಗಂಜ್‌ನಲ್ಲಿ ಮೂವರು, ಬರೇಲಿ, ಬುಲಂದ್‌ಶಹರ್ , ಬಾಗ್ಪತ್‌ನಲ್ಲಿ ತಲಾ ಇಬ್ಬರು, ಕಾನ್ಪುರ್ ದೇಹಾತ್, ಮಥುರಾ, ಘಾಜಿಯಾಬಾದ್, ಹಾಪುರ್, ರಾಯ್ ಬರೇಲಿ, ದಲೌನ್, ಜೌನ್ಪುರ್ಸ ಪ್ರತಾಪ್‌ಗಢ, ಬಾಂದಾ, ಫಿರೋಜಾಬಾದ್, ಅಮೇಠಿ, ಕಾನ್ಪುರ ಮತ್ತು ಮುಜಾಪ್ಫರ್‌ನಗರಗಳಲ್ಲಿ ತಲಾ ಒಬ್ಬರು ಸಾವನ್ನಪ್ಪಿದ್ದಾರೆ.

ಹೈ ಅಲರ್ಟ್ ಘೋಷಿಸಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಎಲ್ಲ ಜಿಲ್ಲೆಗಳ ಜನರನ್ನು ಎಚ್ಚರಿಕೆಯಿಂದಿರುವಂತೆ ಸೂಚಿಸಲು ಮತ್ತು ಅಪಾಯದಲ್ಲಿರುವವರನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸುವಂತೆ ಹಿರಿಯ ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ.

ಮಳೆಯಿಂದ ಬಾಧಿತರಾಗಿರುವವರಿಗೆ ಅತ್ಯವಶ್ಯಕ ಸಹಾಯ ಮತ್ತು ವೈದ್ಯಕೀಯ ನೆರವು ನೀಡುವಂತೆ ಸಹ ಮುಖ್ಯಮಂತ್ರಿ ಆದೇಶ ಸೂಚಿಸಿದ್ದಾರೆ, ಎಂದು ಪರಿಹಾರ ಆಯುಕ್ತರ ಕಚೇರಿಯ ವಕ್ತಾರರು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ