ಆ್ಯಪ್ನಗರ

ಔರಂಗಜೇಬ್‌ ಸೋದರನಿಗೆ ಸೇನೆ ಸೇರುವ ಬಯಕೆ

ಉಗ್ರರು ಅಪಹರಿಸಿ ಹತ್ಯೆಗೈದ ಯೋಧ ಔರಂಗಜೇಬ್‌ ಅವರ ಕಿರಿಯ ಸಹೋದರ ಸಹ ಸೇನೆ ಇರುವ ಬಯಕೆ ವ್ಯಕ್ತಪಡಿಸಿದ್ದಾರೆ.

TIMESOFINDIA.COM 18 Jun 2018, 8:17 am
ಸಲಾನಿ: ಉಗ್ರರು ಅಪಹರಿಸಿ ಹತ್ಯೆಗೈದ ಯೋಧ ಔರಂಗಜೇಬ್‌ ಅವರ ಕಿರಿಯ ಸಹೋದರ ಸಹ ಸೇನೆ ಇರುವ ಬಯಕೆ ವ್ಯಕ್ತಪಡಿಸಿದ್ದಾರೆ.
Vijaya Karnataka Web aurangajeb


‘‘ಔರಂಗಜೇಬ್‌ ವೀರ ಯೋಧ. ಆತನ ಬಲಿದಾನವನ್ನು ದೇಶ ಸದಾ ಸ್ಮರಿಸುತ್ತದೆ. ನನ್ನ ಇತರ ಮಕ್ಕಳು ಕೂಡ ಸೇನೆ ಸೇರಿ ದೇಶವನ್ನು ಬಲಪಡಿಸಲು ಶ್ರಮಿಸುತ್ತಾರೆ,’’ ಎಂದು ಔರಂಗಜೇಬ್‌ ಅವರ ತಂದೆ ಮೊಹಮದ್‌ ಹನೀಫ್‌ ಅವರು ಪುತ್ರಶೋಕದ ನಡುವೆಯೂ ಹೇಳಿದ್ದಾರೆ.

ಔರಂಗಜೇಬ್‌ ಅವರ ನಾಲ್ವರು ಸಹೋದರರಲ್ಲಿ ಅತ್ಯಂತ ಕಿರಿಯನಾಗಿರುವ 15 ವರ್ಷದ ಆಸೀಮ್‌ ಸೇನೆ ಸೇರುವ ಬಯಕೆ ವ್ಯಕ್ತಪಡಿಸಿದ್ದಾನೆ. ಈದ್‌ ಹಬ್ಬಕ್ಕೆ ಮರಳುವ ಉಮೇದಿಯಲ್ಲಿದ್ದ ಔರಂಗಜೇಬ್‌, ಕೊನೆಯದಾಗಿ ಕರೆ ಮಾಡಿದ್ದೇ ಆಸೀಮ್‌ಗೆ. ಈತನಿಗೆ ಉಡುಗೊರೆಯಾಗಿ ಕ್ರಿಕೆಟ್‌ ಬ್ಯಾಟ್‌ ತರುತ್ತಿರುವುದಾಗಿ ಆ ಸಂದರ್ಭದಲ್ಲಿ ತಿಳಿಸಿದ್ದ. ಅಣ್ಣನ್ನು ಕಳೆದುಕೊಂಡ ದುಃಖದಲ್ಲಿರುವ ಈತನಿಗೆ, ಸೇನೆ ಸೇರಿ ಉಗ್ರರ ವಿರುದ್ಧ ಸೇಡು ತೀರಿಸಿಕೊಳ್ಳುವ ಛಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ