ಆ್ಯಪ್ನಗರ

ಹೊಗೆ ಸೇವಿಸಿದ್ರೆ ಜೀವನವೇ ಹೊಗೆ!: ಹೃದಯ ಬಡಿತವನ್ನೇ ನಿಲ್ಲಿಸುತ್ತೆ ವಾಯು ಮಾಲಿನ್ಯ

ಹೆಚ್ಚು ಹೆಚ್ಚು ಹಣ ಮಾಡುವ ಭರದಲ್ಲಿ ನಿಸರ್ಗವನ್ನು ಹಾಳುಗೆಡವುತ್ತಿರುವ ಮಾನವ, ತನ್ನ ಬುಡಕ್ಕೆ ತಾನೇ ಕೊಡಲಿ ಪೆಟ್ಟು ಹಾಕುತ್ತಿದ್ದಾನೆ. ವಾಯು ಮಾಲಿನ್ಯದಂಥಾ ವಿಪತ್ತು ಹೃದಯ ಬಡಿತವನ್ನೇ ನಿಲ್ಲಿಸುವ ಮಟ್ಟಕ್ಕೆ ಬಂದು ನಿಂತಿದೆ. ಇದೀಗ ಹೊರಬಿದ್ದಿರುವ ಸಂಶೋಧನಾತ್ಮಕ ವರದಿ, ಆತಂಕಕಾರಿ ವಿಚಾರಗಳನ್ನು ಬಯಲಿಗೆಳೆದಿದೆ.

TIMESOFINDIA.COM 3 Sep 2019, 5:58 pm
ಚೆನ್ನೈ: ಹೃದಯ ಬಡಿತವನ್ನೇ ನಿಲ್ಲಿಸುವ ಮಟ್ಟಕ್ಕೆ ಬೆಳೆದು ನಿಂತಿದೆ ವಾಯು ಮಾಲಿನ್ಯ. ಅದರಲ್ಲೂ ಮಧ್ಯಮ ವರ್ಗ ಹಾಗೂ ಕಡಿಮೆ ಆದಾಯ ಹೊಂದಿರುವ ಜನರು, ಹೆಚ್ಚಾಗಿ ಹೃದ್ರೋಗಕ್ಕೆ ತುತ್ತಾಗುತ್ತಿದ್ದಾರೆ. ಅತಿ ಹೆಚ್ಚು ಜನಸಂಖ್ಯೆ ಇರುವ ದೇಶಗಳಾದ ಭಾರತ ಹಾಗೂ ಚೀನಾದಲ್ಲೇ ಈ ಆತಂಕ ಹೆಚ್ಚು. ಲ್ಯಾನ್ಸೆಟ್ ಎಂಬ ವೈದ್ಯಕೀಯ ನಿಯತಕಾಲಿಕೆಯ ಸಂಶೋಧನಾತ್ಮಕ ವರದಿ, ಈ ವಿಚಾರವನ್ನು ಬಯಲಿಗೆಳೆದಿದೆ.
Vijaya Karnataka Web air pollution


ಕಡಿಮೆ ಆದಾಯವಿರುವ ಮಧ್ಯಮ ವರ್ಗದ ಜನರು ವಾಯು ಮಾಲಿನ್ಯ, ಅಧಿಕ ರಕ್ತದೊತ್ತಡ, ಕೊಬ್ಬು, ಮಧುಮೇಹ ಹಾಗೂ ಅಪೌಷ್ಠಿಕ ಆಹಾರ ಸೇವನೆಯಿಂದಾಗಿ ಹೃದ್ರೋಗಕ್ಕೆ ತುತ್ತಾಗುತ್ತಿದ್ದಾರೆ. ಇನ್ನು, ಸಿರಿವಂತರು ತಂಬಾಕು ಸೇವನೆ, ಕೊಬ್ಬು, ಬಿಪಿ, ಶುಗರ್ ನಿಂದಾಗಿ ಹೃದ್ರೋಗಕ್ಕೆ ತುತ್ತಾಗುತ್ತಿದ್ದಾರೆ.

ವಾಯು ಮಾಲಿನ್ಯದಿಂದಾಗಿ ಹಲವು ಸಮಸ್ಯೆಗಳು ಎದುರಾಗ್ತಿವೆ. ಹೃದ್ರೋಗದಂಥಾ ಆರೋಗ್ಯ ಸಮಸ್ಯೆಗಳು ಎದುರಾದಾಗ ಬಡವರು ಚಿಕಿತ್ಸೆಗೆ ಹಣ ಹೊಂದಿಸೋದೇ ಕಷ್ಟ. ಹೀಗಾಗಿ, ಮಾಲಿನ್ಯಕ್ಕೆ ಕಡಿವಾಣ ಹಾಕದಿದ್ದರೆ ತುಂಬಾ ಕಷ್ಟ ಅಂತಾರೆ ತಜ್ಞ ವೈದ್ಯರು.

ವಾಯು ಮಾಲಿನ್ಯದಿಂದ ಕ್ಯಾನ್ಸರ್ ಕಟ್ಟಿಟ್ಟ ಬುತ್ತಿ!

ಭಾರತ, ಚೀನಾದಂಥಾ ರಾಷ್ಟ್ರಗಳ ಜನರು ವಾಯು ಮಾಲಿನ್ಯದಿಂದ ಹೃದಯಾಘಾತಕ್ಕೆ ತುತ್ತಾಗುತ್ತಿದ್ದರೆ, ಸಿರಿವಂತ ರಾಷ್ಟ್ರಗಳಲ್ಲಿ ಇದೇ ವಾಯು ಮಾಲಿನ್ಯ ಕ್ಯಾನ್ಸರ್ ಗೆ ಕಾರಣವಾಗುತ್ತಿದೆ. ಅದೂ ಕೂಡಾ ಭಾರತದಲ್ಲಿ ಹೃದಯಾಘಾತಕ್ಕೆ ತುತ್ತಾಗುವ ಜನಕ್ಕಿಂತಾ ಎರಡು ಪಟ್ಟು ಜನ ಶ್ರೀಮಂತ ರಾಷ್ಟ್ರಗಳಲ್ಲಿ ಕ್ಯಾನ್ಸರ್ ಗೆ ತುತ್ತಾಗುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ