ಆ್ಯಪ್ನಗರ

FBಯಲ್ಲಿ ಬ್ರಾಹ್ಮಣರ ಅವಹೇಳನ, ದಲಿತ ನಾಯಕನ ಉಚ್ಚಾಟಿಸಿದ ಮಾಯಾ

ಫೇಸ್‌ಬುಕ್‌ನಲ್ಲಿ ಬ್ರಾಹ್ಮಣರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ಪೋಸ್ಟ್‌ ಮಾಡಿದ್ದ ದಲಿತ ನಾಯಕನನ್ನು ಮಾಯಾವತಿ ಉಚ್ಚಾಟಿಸಿದ್ದಾರೆ.

ಏಜೆನ್ಸೀಸ್ 15 Jun 2016, 2:20 pm
ಲಖನೌ: ಉತ್ತರ ಪ್ರದೇಶದ ರಾಜಕೀಯ ಪ್ರಹಸನದಲ್ಲಿ ಪಕ್ಷಗಳು ದಲಿತರು, ಮುಸ್ಲಿಮರು ಹಾಗೂ ಹಿಂದುಳಿದ ವರ್ಗದವರ ಓಲೈಕೆಗೆ ಮುಂದಾಗಿದ್ದರೆ, ಬಿಎಸ್ಪಿ ವರಿಷ್ಠೆ ಮಾಯಾವತಿ ಬ್ರಾಹ್ಮಣರ ಪರವಹಿಸಿ ಅಚ್ಚರಿ ಮೂಡಿಸಿದ್ದಾರೆ.
Vijaya Karnataka Web mayawati expels dalit for anti brahmin facebook post
FBಯಲ್ಲಿ ಬ್ರಾಹ್ಮಣರ ಅವಹೇಳನ, ದಲಿತ ನಾಯಕನ ಉಚ್ಚಾಟಿಸಿದ ಮಾಯಾ


ಫೇಸ್‌ಬುಕ್‌ನಲ್ಲಿ ಬ್ರಾಹ್ಮಣರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ಪೋಸ್ಟ್‌ ಮಾಡಿದ್ದ ಪಕ್ಷದ ದಲಿತ ನಾಯಕನನ್ನು ಮಾಯಾವತಿ ಉಚ್ಚಾಟಿಸಿದ್ದಾರೆ.

ಮೇಲ್ವರ್ಗದ ವಿರುದ್ಧ ಬಂಡಾಯವೆದ್ದು ಸ್ಥಾಪಿತವಾದ ಪಕ್ಷದ ಅಧ್ಯಕ್ಷೆ ಮಾಯಾವತಿ, ಈಗ ಮೇಲ್ಜಾತಿಯವರ ಬಗೆಗಿನ ಧೋರಣೆ ಬದಲಿಸಿಕೊಂಡಿದ್ದಾರೆ.

ಬಿಎಸ್ಪಿಯ ದಲಿತ ನಾಯಕ ಸಂಜಯ್‌ ಭಾರ್ತಿ, ಅವರ ಫೇಸ್‌ಬುಕ್‌ ಖಾತೆಯಲ್ಲಿ ಬ್ರಾಹ್ಮಣರ ವಿರುದ್ಧ ಅವಹೇಳನಕಾರಿ ಪೋಸ್ಟ್‌ ಮಾಡಿದ್ದು ಬಿಎಸ್ಪಿಯ ಅಗ್ರ ನಾಯಕರ ಗಮನಕ್ಕೆ ಬಂದ ನಂತರ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿದೆ. ಉತ್ತರ ಪ್ರದೇಶದಲ್ಲಿ ಶೇ.10ರಷ್ಟಿರುವ ಬ್ರಾಹ್ಮಣ ಮತದಾರರು ಮತ ಕಳೆದುಕೊಳ್ಳುವುದು ಮಯಾವತಿಗೆ ಇಷ್ಟವಿದ್ದಂತೆ ಇಲ್ಲ.

'ಪಕ್ಷದಿಂದ ಉಚ್ಚಾಟಿಸುವ ಮೊದಲು ನನಗೆ ಮಾಹಿತಿಯನ್ನೂ ನೀಡಿರಲಿಲ್ಲ. ಪತ್ರಿಕೆಗಳ ಮೂಲಕ ಈ ವಿಷಯ ತಿಳಿಯಿತು. ಬ್ರಾಹ್ಮಣ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಅವಹೇಳನಕಾರಿ ಪೋಸ್ಟ್‌ ದಾಖಲಿಸಿಲ್ಲ. ನನ್ನ ಫೇಸ್‌ಬುಕ್‌ ಹ್ಯಾಕ್‌ ಆಗಿದೆ. ನನ್ನ ಹೆಸರಿಗೆ ಮಸಿ ಬಳಿಯಲು ಬಿಎಸ್ಪಿ ನಾಯಕರೇ ರೂಪಿಸಿರುವ ಸಂಚಿದು,'ಎಂದು ಭಾರ್ತಿ ದೂರಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ