ಆ್ಯಪ್ನಗರ

Miss International 2018: ಭಾರತದ ಮೀನಾಕ್ಷಿ ಚೌಧರಿ ವಿಶ್ವ ಸುಂದರಿ ರನ್ನರ್‌ ಅಪ್‌

ಮ್ಯಾನ್ಮಾರ್‌ನಲ್ಲಿ ನಡೆದ ಅಂತಿಮ ಸುತ್ತಿನ ಸ್ಪರ್ಧೆಯಲ್ಲಿ ಪರುಗ್ವೆಯ ಕ್ಲಾರಾ ಸೊಸಾ ಗ್ರಾಂಡ್‌ ವಿಶ್ವ ಸುಂದರಿ ಕಿರೀಟ ಧರಿಸಿದರು.

Vijaya Karnataka 26 Oct 2018, 10:33 am
ಹೊಸದಿಲ್ಲಿ: ಭಾರತದ ಸುಂದರಿ ಮೀನಾಕ್ಷಿ ಚೌಧರಿ ಪ್ರತಿಷ್ಠಿತ ಮಿಸ್‌ ಗ್ರಾಂಡ್‌ ಇಂಟರ್‌ನ್ಯಾಷನಲ್‌ ಸೌಂದರ್ಯ ಸ್ಪರ್ಧೆಯ ಮೊದಲ ರನ್ನರ್‌ ಅಪ್‌ ಆಗಿ ಹೊರ ಹೊಮ್ಮಿದ್ದಾರೆ.
Vijaya Karnataka Web Meenakshi C


ಮ್ಯಾನ್ಮಾರ್‌ನಲ್ಲಿ ನಡೆದ ಅಂತಿಮ ಸುತ್ತಿನ ಸ್ಪರ್ಧೆಯಲ್ಲಿ ಪರುಗ್ವೆಯ ಕ್ಲಾರಾ ಸೊಸಾ ಗ್ರಾಂಡ್‌ ವಿಶ್ವ ಸುಂದರಿ ಕಿರೀಟ ಧರಿಸಿದರು.

ಎಫ್‌ಬಿಬಿ ಕಲರ್ಸ್‌ ಫೆಮಿನಾ ಮಿಸ್‌ ಗ್ರಾಂಡ್‌ ಇಂಡಿಯಾ ವಿಭಾಗದಲ್ಲಿ ಮೀನಾಕ್ಷಿ ಮೊದಲ ರನ್ನರ್‌ ಅಪ್‌ ಎನಿಸಿದರೆ, ನಾಡಿಯಾ ಪುರ್ವೊಕೊ ಮಿಸ್‌ ಗ್ರಾಂಡ್‌ ಇಂಡೊನೇಷ್ಯಾ ವಿಭಾಗದ ಎರಡನೇ ಸ್ಥಾನ ತುಂಬಿದರು. ಮೂರನೇ ಸ್ಥಾನ ಪೊರ್ಟೊರಿಕಾದ ನಿಕೋಲ್‌ ಕೊಲನ್‌ ಅವರಿಗೆ ದಕ್ಕಿತು.

ಕಳೆದ ಜೂನ್ ತಿಂಗಳಲ್ಲಿ ನಡೆದ ಫೆಮಿನಾ ಮಿಸ್ ಇಂಡಿಯಾ 2018ರಲ್ಲಿ ಸಹ ಮೊದಲ ರನ್ನರ್ ಅಪ್ ಆಗಿದ್ದ ಹರಿಯಾಣ ಮೂಲದ ಚೆಲುವೆ, ಮಿಸ್‌ ಗ್ರಾಂಡ್‌ ಇಂಟರ್‌ನ್ಯಾಷನಲ್‌ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಅವಕಾಶ ತಮ್ಮದಾಗಿಸಿಕೊಂಡಿದ್ದರು.

ಅವರು ಪ್ರಸ್ತುತ ಡೆಂಟಲ್ ಸರ್ಜರಿ ವಿದ್ಯಾರ್ಥಿನಿಯಾಗಿದ್ದಾರೆ.

ಕ್ರೀಡೆಯಲ್ಲಿ ಅತೀವ ಆಸಕ್ತಿ ಹೊಂದಿರುವ ಅವರು ರಾಜ್ಯಮಟ್ಟದ ಈಜು ಮತ್ತು ಬ್ಯಾಡ್ಮಿಂಟನ್ ಸ್ಪರ್ಧೆಗಳಲ್ಲಿ ಪಾಲ್ಗೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ