ಆ್ಯಪ್ನಗರ

ಸಿಸಿಟಿವಿಯಲ್ಲಿ ಬಯಲಾಯ್ತು ಬೆಚ್ಚಿ ಬೀಳಿಸುವ ಕೃತ್ಯ: ಮನೆಯಲ್ಲೇ ಬಾಲಕಿಯರಿಗೆ ಲೈಂಗಿಕ ಕಿರುಕುಳ

ರಕ್ಷಣೆಗೆ ಒಳಪಟ್ಟ ಬಾಲಕಿಯರು ಮಾನವ ಕಳ್ಳ ಸಾಗಣೆಗೆ ಬಲಿಯಾದ ಸಂತ್ರಸ್ತರಂತೆ ಕಾಣಿಸುತ್ತಿದ್ದಾರೆ. ಬಾಲಕಿಯರನ್ನು ಬಲವಂತವಾಗಿ ವೇಶ್ಯಾವಾಟಿಕೆಗೆ ದೂಡಲಾಗುತ್ತಿತ್ತು ಎನ್ನಲಾಗಿದೆ.

TOI.in 4 May 2019, 12:31 pm
ಮೀರತ್‌: ಮನೆಯಲ್ಲಿ ಬಾಲಕಿಯರನ್ನು ಕೂಡಿಹಾಕಿಕೊಂಡು ಲೈಂಗಿಕ ಕಿರುಕುಳ ನೀಡುತ್ತಿದ್ದ 63 ವರ್ಷದ ನಿವೃತ್ತ ವಿಮೆ ಕಾರ್ಯನಿರ್ವಾಹಕನನ್ನು ಮೀರತ್‌ ಪೊಲೀಸರು ಬಂಧಿಸಿದ್ದಾರೆ. ಬೃಹತ್‌ ಬಂಗಲೆಯಲ್ಲಿ ಒಂಟಿಯಾಗಿದ್ದ ವ್ಯಕ್ತಿ ಕಳೆದೆರಡು ವರ್ಷಗಳಿಂದ ಹೀಗೆ ಹಲವು ಬಾಲಕಿಯರ ಮೇಲೆ ದೌರ್ಜನ್ಯ ನಡೆಸಿರುವುದು ಬೆಳಕಿಗೆ ಬಂದಿದೆ.
Vijaya Karnataka Web Meerut man


ಮೀರತ್‌ನ ಜಾಗೃತಿ ವಿಹಾರ ಪ್ರದೇಶದ ನಿವಾಸಿಯಾಗಿರುವ ವಿಮಲ್‌ ಚಂದ್‌ ಕಳೆದ 2 ವರ್ಷಗಳಿಂದ ಇಂತಹ ಕೃತ್ಯ ನಡೆಸುತ್ತಿದ್ದ. ಹಲವು ಬಾಲಕಿಯರ ಮೇಲೆ ದೌರ್ಜನ್ಯ ನಡೆಸಿದ್ದಾನೆ ಎಂಬುದು ಬೆಳಕಿಗೆ ಬಂದಿದೆ.

ಸಿಸಿಟಿವಿ ಟೆಕ್ನಿಷಿಯನ್‌ ವಿಮಲ್‌ ಚಂದ್‌ ಮನೆಯಲ್ಲಿದ್ದ ಕ್ಯಾಮೆರಾಗಳನ್ನು ರಿಪೇರಿ ಮಾಡುತ್ತಿದ್ದ ವೇಳೆ ಈ ಕೃತ್ಯ ಬೆಳಕಿಗೆ ಬಂದಿದೆ. 63 ವರ್ಷದ ವ್ಯಕ್ತಿಯ ಈ ಕುಕೃತ್ಯ ಬೆಳಕಿಗೆ ಬರುತ್ತಿದ್ದಂತೆ ಸ್ಥಳೀಯ ನಿವಾಸಿಗಳು ಬೆಚ್ಚಿ ಬಿದ್ದಿದ್ದಾರೆ. ಗುರುವಾರ ರಾತ್ರಿ, ಮೀರತ್‌ ಪೊಲೀಸರು ಮೂವರು ಬಾಲಕಿಯರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇವರ ಪೈಕಿ ಓರ್ವಳ ವಯಸ್ಸು 10 ವರ್ಷ.

2016ರಲ್ಲಿ ವಿಮಲ್‌ ಚಂದ್‌ ವೃತ್ತಿಯಿಂದ ನಿವೃತ್ತನಾಗಿದ್ದಾನೆ. ಅದೇ ವರ್ಷ ಆತನ ಪತ್ನಿ ಮೃತರಾಗಿದ್ದಾರೆ. ಮಗಳು ವಿದೇಶದಲ್ಲಿ ನೆಲೆಸಿದ್ದಾರೆ. ಮನೆಯಲ್ಲಿ ಓರ್ವನೆ ನೆಲೆಸಿದ್ದು, ಇಂತಹ ಕುಕೃತ್ಯಗಳನ್ನು ನಡೆಸಿ ಪೊಲೀಸರ ಅತಿಥಿಯಾಗಿದ್ದಾನೆ.

ಸಿಸಿಟಿವಿ ಫೂಟೇಜ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಮುಖ ಆರೋಪಿ ವಿಮಲ್‌ ಚಂದ್‌ನನ್ನು ಬಂಧಿಸಲಾಗಿದೆ. ರಕ್ಷಣೆಗೆ ಒಳಪಟ್ಟ ಬಾಲಕಿಯರು ಮಾನವ ಕಳ್ಳ ಸಾಗಣೆಗೆ ಬಲಿಯಾದ ಸಂತ್ರಸ್ತರಂತೆ ಕಾಣಿಸುತ್ತಿದ್ದಾರೆ. ಬಾಲಕಿಯರನ್ನು ಬಲವಂತವಾಗಿ ವೇಶ್ಯಾವಾಟಿಕೆಗೆ ದೂಡಲಾಗುತ್ತಿತ್ತು. ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ