ಆ್ಯಪ್ನಗರ

17ನೇ ಲೋಕಸಭಾ ಚುನಾವಣೆಯಲ್ಲಿ ಆಯ್ಕೆಯಾದ ಅತಿ ಕಿರಿಯ ಸಂಸದರು

ಒಡಿಶಾದ ಕಿಯೋಂಝರ್‌ ಲೋಕಸಭಾ ಕ್ಷೇತ್ರದಿಂದ ಬಿಜೆಡಿ ಅಭ್ಯರ್ಥಿಯಾಗಿ ಆಯ್ಕೆ. ಬಿ.ಟೆಕ್‌ ಪದವೀಧರೆಯಾದ ಇವರು ಕೆಲವೇ ತಿಂಗಳ ಹಿಂದೆ ಸರಕಾರಿ ಉದ್ಯೋಗಕ್ಕಾಗಿ ಹುಡುಕಾಟ ನಡೆಸಿದ್ದರು. ಇದೇ ಕ್ಷೇತ್ರದ ಮಾಜಿ ಸಂಸದರ ಮೊಮ್ಮಗಳಾದ ಚಂದ್ರಾಣಿ ಪಾಲಿಗೆ ಇದೆಲ್ಲವೂ ಅನಿರೀಕ್ಷಿತ ಬೆಳವಣಿಗೆ.

Agencies 29 May 2019, 10:36 am
17ನೇ ಲೋಕಸಭೆಯಲ್ಲಿ ಯುವ ನಾಯಕರ ದೊಡ್ಡ ದಂಡೇ ಇದೆ. ಈ ಬಾರಿ ಆಯ್ಕೆಯಾದ 542 ಹೊಸ ಸಂಸದರಲ್ಲಿ ಶೇ.12ರಷ್ಟು ಮಂದಿ 40ಕ್ಕಿಂತಲೂ ಕಡಿಮೆ ವಯಸ್ಸಿನವರು. 16ನೇ ಲೋಕಸಭೆಯಲ್ಲಿ 40ಕ್ಕೂ ಕಡಿಮೆ ವಯಸ್ಸಿನ ಸಂಸದರ ಸಂಖ್ಯೆ ಶೇ. 8ರಷ್ಟಿತ್ತು. ಈ ಬಾರಿಯ ಕಿರಿಯ ಸಂಸದರ ಪೈಕಿ ಪ್ರಮುಖರ ವಿವರ ಹೀಗಿದೆ:
Vijaya Karnataka Web Murmu.


* ಚಂದ್ರಾಣಿ ಮುರ್ಮು (25): ಒಡಿಶಾದ ಕಿಯೋಂಝರ್‌ ಲೋಕಸಭಾ ಕ್ಷೇತ್ರದಿಂದ ಬಿಜೆಡಿ ಅಭ್ಯರ್ಥಿಯಾಗಿ ಆಯ್ಕೆ. ಬಿ.ಟೆಕ್‌ ಪದವೀಧರೆಯಾದ ಇವರು ಕೆಲವೇ ತಿಂಗಳ ಹಿಂದೆ ಸರಕಾರಿ ಉದ್ಯೋಗಕ್ಕಾಗಿ ಹುಡುಕಾಟ ನಡೆಸಿದ್ದರು. ಇದೇ ಕ್ಷೇತ್ರದ ಮಾಜಿ ಸಂಸದರ ಮೊಮ್ಮಗಳಾದ ಚಂದ್ರಾಣಿ ಪಾಲಿಗೆ ಇದೆಲ್ಲವೂ ಅನಿರೀಕ್ಷಿತ ಬೆಳವಣಿಗೆ.

* ತೇಜಸ್ವಿ ಸೂರ್ಯ (28): ಬೆಂಗಳೂರು ದಕ್ಷಿಣ ಕ್ಷೇತ್ರದ ಅಭ್ಯರ್ಥಿಯಾಗಿ ಆಯ್ಕೆ. ಭಾರಿ ಅಂತರದ ಗೆಲುವು ಸಾಧಿಸಿದ ತೇಜಸ್ವಿ , ಈ ಬಾರಿ ಬಿಜೆಪಿಯ ಅತ್ಯಂತ ಕಿರಿಯ ಸಂಸದರಾಗಿ ಹೊರಹೊಮ್ಮಿದ್ದಾರೆ. ವೃತ್ತಿಯಲ್ಲಿ ವಕೀಲರಾದ ಇವರು ಆರೆಸ್ಸೆಸ್‌, ಎಬಿವಿಪಿ ಮೂಲಕ ಬಿಜೆಪಿ ಜತೆ ನಂಟು ಬೆಳೆಸಿಕೊಂಡಿದ್ದರು.

*ನುಸ್ರಾತ್‌ ಜಹಾನ್‌ (29): ಬಂಗಾಳಿ ಚಿತ್ರನಟಿ ನುಸ್ರಾತ್‌ ಜಹಾನ್‌ ಅವರು ತೃಣಮೂಲ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಇದೇ ಮೊದಲ ಬಾರಿಗೆ ಚುನಾವಣಾ ಕಣಕ್ಕಿಳಿದಿದ್ದರು. ಬಸೀರ್‌ಹತ್‌ ಕ್ಷೇತ್ರದಿಂದ ಸ್ಪರ್ಧಿಸಿದ್ದ ಇವರು ಟಿಎಂಸಿಯ ಅತಿ ಕಿರಿಯ ಅಭ್ಯರ್ಥಿಯಾಗಿದ್ದರು. ಬರೋಬ್ಬರಿ 3.5 ಲಕ್ಷ ವೋಟುಗಳ ಅಂತರದಿಂದ ಪ್ರತಿಸ್ಪರ್ಧಿಗಳನ್ನು ಮಣಿಸಿ, ಸಂಸತ್ತಿಗೆ ಅಡಿಯಿರಿಸಿದ್ದಾರೆ.

*ಮಿಮಿ ಚಕ್ರವರ್ತಿ (30): ಪಶ್ಚಿಮ ಬಂಗಾಳದ ಚುನಾವಣಾ ಪ್ರಚಾರ ಕಣದಲ್ಲಿ ಈ ಬಾರಿ ಗಮನ ಸೆಳೆದವರಲ್ಲಿ ಬಂಗಾಳಿ ನಟಿ ಹಾಗೂ ರಾಜಕಾರಣಿ ಮಿಮಿ ಚಕ್ರವರ್ತಿ ಸಹ ಒಬ್ಬರು. ಪ್ರಧಾನಿ ಮೋದಿ ಅವರ ಪ್ರಚಾರಸಭೆಗೆ ಅನುಮತಿ ನಿರಾಕರಣೆಯಿಂದಾಗಿ ವಿವಾದಕ್ಕೆ ಗುರಿಯಾಗಿದ್ದ ಜಾಧವ್‌ಪುರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಇವರು, 3 ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಗೆದ್ದು, ಮೊದಲ ಬಾರಿಗೆ ಸಂಸತ್‌ ಸದಸ್ಯೆಯಾಗಿ ಆಯ್ಕೆಯಾಗಿದ್ದಾರೆ.

*ರಮ್ಯಾ ಹರಿದಾಸ್‌ (32): ಕೇರಳದ ಅಲತೂರ್‌ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್‌ ಅಭ್ಯರ್ಥಿಯಾಗಿ 1 ಲಕ್ಷಕ್ಕೂ ಹೆಚ್ಚು ಮತಗಳ ಅಂತರದ ಗೆಲುವು. ಕೊಯಿಕ್ಕೋಡ್‌ನ ಬ್ಲಾಕ್‌ ಪಂಚಾಯ್ತಿ ಸದಸ್ಯೆಯಾಗಿ ರಮ್ಯಾ ಹೆಸರು ಮಾಡಿದ್ದರು. ಸಿಪಿಎಂನ ಪಿ.ಕೆ.ಬಿಜು ಅವರನ್ನು ಮಣಿಸಿ ಲೋಕಸಭೆ ಪ್ರವೇಶಿಸಿದ್ದಾರೆ.

* ಗೌತಮ್‌ ಗಂಭೀರ್‌ (37): ಪೂರ್ವ ದಿಲ್ಲಿಯ ಬಿಜೆಪಿ ಅಭ್ಯರ್ಥಿಯಾಗಿ ಜಯಭೇರಿ. ಮಾಜಿ ಕ್ರಿಕೆಟಿಗ ಗಂಭೀರ್‌ಗೆ ಇದು ರಾಜಕೀಯದ ಮೊದಲು ಇನಿಂಗ್ಸ್‌. ಬಿಜೆಪಿಯ ಎರಡನೇ ಅತಿ ಕಿರಿಯ ಸಂಸದ. ಪ್ರಚಾರದ ವೇಳೆ ಹಲವು ವಿವಾದಗಳ ನಡುವೆಯೂ ಜಯ ಗಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ