ಆ್ಯಪ್ನಗರ

ಸುನಂದಾ ಕೇಸ್‌: 3 ತಾಸು ತರಾರ್‌ ವಿಚಾರಣೆ

ಸುನಂದಾ ಪುಷ್ಕರ್‌ ಕೊಲೆ ಪ್ರಕಣರಣ ಸಂಬಂಧ ಪೊಲೀಸರು ಪಾಕ್‌ ಪತ್ರಕರ್ತೆ ತರಾರ್‌ ಅವರ ವಿಚಾರಣೆ ನಡೆಸಿದ್ದರು.

ಟೈಮ್ಸ್ ಆಫ್ ಇಂಡಿಯಾ 18 Jul 2016, 12:51 pm
ಹೊಸದಿಲ್ಲಿ: ಸುನಂದಾ ಪುಷ್ಕರ್‌ ಕೊಲೆ ಪ್ರಕರಣದ ವಿವಾದಾತ್ಮಕ ಅಂಶದ ಬೆನ್ನು ಹತ್ತಿರುವ ದಿಲ್ಲಿ ಪೊಲೀಸರು, ಪಾಕಿಸ್ತಾನದ ಪತ್ರಕರ್ತೆ ಮೆಹ್ರ್‌ ತರಾರ್‌ ಅವರ ವಿಚಾರಣೆ ನಡೆಸಿದ್ದರು ಎಂದು ಉನ್ನತ ಮೂಲಗಳಿಂದ ತಿಳಿದುಬಂದಿದೆ.
Vijaya Karnataka Web mehr tarar quizzed for 3 hours in sunanda case
ಸುನಂದಾ ಕೇಸ್‌: 3 ತಾಸು ತರಾರ್‌ ವಿಚಾರಣೆ


ಮೂರು ತಿಂಗಳ ಹಿಂದೆ ವಿಚಾರಣೆಗಾಗಿ ತರಾರ್‌ ಭಾರತಕ್ಕೆ ಬಂದಿದ್ದರು. ದಿಲ್ಲಿಯ ಪಂಚತಾರಾ ಹೋಟೆಲ್‌ನಲ್ಲಿ ವಿಚಾರಣೆ ನಡೆಸಲಾಗಿತ್ತು. ತನಿಖೆಗೆ ಸಹಕರಿಸುವಂತೆ ಕೋರಿ ಪೊಲೀಸರು ಕಳೆದ ಡಿಸೆಂಬರ್‌ನಲ್ಲಿ ಪತ್ರ ಬರೆದಿದ್ದರು. ಅದಕ್ಕೆ ಸ್ಪಂದಿಸಿ ಅವರು ವಿಚಾರಣೆಗೆ ಹಾಜರಾಗಿದ್ದರು. ಈ ವಿಷಯ ಇಲಾಖೆಯ ಕೆಲವೇ ಮಂದಿಗೆ ಮಾತ್ರ ತಿಳಿದಿತ್ತು ಎನ್ನಲಾಗಿದೆ.

ಕೇಂದ್ರ ಸಚಿವರಾಗಿದ್ದ ಶಶಿ ತರೂರ್‌ ಪತ್ನಿ ಸುನಂದಾ, ಲೀಲಾ ಹೋಟೆಲ್‌ ಕೊಠಡಿ ಸಂಖ್ಯೆ 345ರಲ್ಲಿ 2014 ಜನವರಿ 17ರಂದು ಕೊಲೆಯಾಗಿದ್ದರು. ತರೂರ್‌ ಜತೆಗೆ ಸಂಬಂಧ ಹೊಂದಿದ್ದರು ಎನ್ನಲಾದ ವಿಚಾರವಾಗಿ ತರಾರ್‌ ಜತೆ ಟ್ವೀಟ್‌ ಸಮರ ನಡೆದ ಮರು ದಿನವೇ ಸುನಂದಾ ಸಾವು ಸಂಭವಿಸಿತ್ತು.

ಸುನಂದಾಗೆ ಆಪ್ತರಾಗಿದ್ದ ಪತ್ರಕರ್ತೆ ನಳಿನಿ ಸಿಂಗ್‌ ಸಹ ಪ್ರಕರಣದ ಬಗ್ಗೆ ಹೇಳಿಕೆ ನೀಡಿದ್ದರು. ತರೂರ್‌ ಹಾಗೂ ತರಾರ್‌ ನಡುವೆ ವಿನಿಮಯವಾಗಿದ್ದ ಸಂದೇಶಗಳ ಬಗ್ಗೆ ತಿಳಿದುಕೊಳ್ಳಲು ಸಹಕರಿಸುವಂತೆ ಸುನಂದಾ ನನ್ನ ನೆರವು ಕೋರಿದ್ದರು ಎಂದು ನಳಿನಿ ಹೇಳಿದ್ದರು. 2014 ಚುನಾವಣೆ ನಂತರ ತರೂರ್‌ ಪಾಕ್‌ ಮೂಲದ ಪತ್ರಕರ್ತೆಯನ್ನು ಮದುವೆ ಆಗಲಿದ್ದಾರೆ ಎಂಬ ವದಂತಿ ಹರಡಿತ್ತು.
ತರೂರ್‌ ಜತೆ ಯಾವುದೇ ಅಕ್ರಮ ಸಂಬಂಧ ಹೊಂದಿದ್ದನ್ನು ವಿಚಾರಣೆ ವೇಳೆ ತರಾರ್‌ ತಳ್ಳಿಹಾಕಿದ್ದರು. ಜತೆಗೆ, ಯಾವುದೇ ಆಕ್ಷೇಪಾರ್ಹ ಇಮೇಲ್‌ ಅಥವಾ ಬಿಬಿಎಂ ಸಂದೇಶಗಳನ್ನು ಕಳುಹಿಸಿಲ್ಲ ಎಂದು ಅಧಿಕಾರಿಗಳಿಗೆ ತಿಳಿಸಿದ್ದರು ಎನ್ನಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ