ಆ್ಯಪ್ನಗರ

ಚೋಕ್ಸಿಯಿಂದ ಜೇಟ್ಲಿ ಪುತ್ರಿಗೆ ಹಣ: ರಾಹುಲ್‌ ಆರೋಪ

ಸಾವಿರಾರು ಕೋಟಿ ರೂಪಾಯಿ ವಂಚನೆ ಮಾಡಿ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಉದ್ಯಮಿ ಮೆಹುಲ್‌ ಚೋಕ್ಸಿ ಅವರ ಸಂಸ್ಥೆಯಲ್ಲಿ ಕೇಂದ್ರ ವಿತ್ತ ಸಚಿವ ಅರುಣ್‌ ಜೇಟ್ಲಿ ಅವರ ಮಗಳು ಮತ್ತು ಅಳಿಯ ವೇತನ ಪಡೆಯುತ್ತಿದ್ದರು.

Vijaya Karnataka 23 Oct 2018, 9:08 am
ರಾಯಪುರ: ಸಾವಿರಾರು ಕೋಟಿ ರೂಪಾಯಿ ವಂಚನೆ ಮಾಡಿ ವಿದೇಶದಲ್ಲಿ ತಲೆಮರೆಸಿಕೊಂಡಿರುವ ಉದ್ಯಮಿ ಮೆಹುಲ್‌ ಚೋಕ್ಸಿ ಅವರ ಸಂಸ್ಥೆಯಲ್ಲಿ ಕೇಂದ್ರ ವಿತ್ತ ಸಚಿವ ಅರುಣ್‌ ಜೇಟ್ಲಿ ಅವರ ಮಗಳು ಮತ್ತು ಅಳಿಯ ವೇತನ ಪಡೆಯುತ್ತಿದ್ದರು. ಹೀಗಾಗಿಯೇ ಚೋಕ್ಸಿ ವಿರುದ್ಧ ಕ್ರಮ ಕೈಗೊಳ್ಳದೆ, ವಿದೇಶಕ್ಕೆ ಪಲಾಯನ ಮಾಡಲು ಜೇಟ್ಲಿ ಅವಕಾಶ ಮಾಡಿಕೊಟ್ಟರು ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಗಂಭೀರ ಆರೋಪ ಮಾಡಿದ್ದಾರೆ.
Vijaya Karnataka Web rg


ಛತ್ತೀಸ್‌ಗಢದ ರಾಯಪುರದಲ್ಲಿ ಚುನಾವಣಾ ರಾರ‍ಯಲಿ ಉದ್ದೇಶಿಸಿ ಮಾತನಾಡಿದ ರಾಹುಲ್‌, ಜೇಟ್ಲಿ ರಾಜೀನಾಮೆಗೂ ಆಗ್ರಹಿಸಿದ್ದಾರೆ.

''ಜೇಟ್ಲಿ ಅವರ ಪುತ್ರಿ ಮತ್ತು ಅಳಿಯ ಇಬ್ಬರೂ ವಕೀಲರು. ಇವರಿಬ್ಬರು ಚೋಕ್ಸಿ ಅವರ ಗೀತಾಂಜಲಿ ಜ್ಯೂವೆಲ್ಸ್‌ನಲ್ಲಿ ಸಲಹೆಗಾರರಾಗಿದ್ದರು. ಇವರು ತಮ್ಮ ಸೇವೆಗಾಗಿ 24 ಲಕ್ಷ ರೂ ಹಣ ಪಡೆದಿದ್ದರು,'' ಎಂದು ರಾಹುಲ್‌ ಹೇಳಿದ್ದಾರೆ.

ಈ ಮಧ್ಯೆ, ಕಾಂಗ್ರೆಸ್‌ ಮುಖಂಡ ಸಚಿನ್‌ ಪೈಲಟ್‌ ಸಹ ರಾಹುಲ್‌ ಆರೋಪಕ್ಕೆ ಧ್ವನಿಗೂಡಿಸಿದ್ದಾರೆ. ದಿಲ್ಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಜೇಟ್ಲಿ ಅವರ ಪುತ್ರ ಅಥವಾ ಅಳಿಯನನ್ನು ಸಿಬಿಐ ಆಗಲೀ, ಜಾರಿ ನಿರ್ದೇಶನಾಲಯವಾಗಲೀ ಏಕೆ ವಿಚಾರಣೆಗೆ ಒಳಲಪಡಿಸಿಲ್ಲ ಎಂದು ಪ್ರಶ್ನಿಸಿದ್ದಾರೆ. ಜೇಟ್ಲಿ ಅವರನ್ನು ಸಂಪುಟದಿಂದ ವಜಾಗೊಳಿಸಿ, ಪ್ರಕರಣದ ಸ್ವತಂತ್ರ ತನಿಖೆ ಕೈಗೊಳ್ಳಬೇಕೆಂದು ಪೈಲಟ್‌ ಆಗ್ರಹಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ