ಆ್ಯಪ್ನಗರ

ಅತ್ಯಾಚಾರ ಅಪರಾಧಿಗಳಿಗೆ ಬರೋಬ್ಬರಿ 25 ವರ್ಷ ಜೈಲು ಶಿಕ್ಷೆ

ಇದೇ ಕೋರ್ಟ್‌ ಕಳೆದ ವರ್ಷ ಅಪ್ರಾಪ್ತೆಯ ಅತ್ಯಾಚಾರಕ್ಕಾಗಿ 20 ವರ್ಷದ ಆರೋಪಿಗೆ 20 ವರ್ಷ ಜೈಲು ಶಿಕ್ಷೆ ವಿಧಿಸಿತ್ತು.

Vijaya Karnataka 9 Sep 2019, 6:25 am
ಸಿಂದೇಗಾ: ಜಾರ್ಖಂಡ್‌ ರಾಜ್ಯದ ಸಿಂದೇಗಾ ಎಂಬಲ್ಲಿ 2017ರಲ್ಲಿ 20 ವರ್ಷದ ಯುವತಿಯ ಮೇಲೆ ಅತ್ಯಾಚಾರ ನಡೆಸಿದ ಇಬ್ಬರಿಗೆ ಜಿಲ್ಲಾ ನ್ಯಾಯಾಲಯ 25 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. 2017ರ ಅಕ್ಟೋಬರ್‌ 30ರಂದು ಮಹಿಳೆ ಔಷಧ ಖರೀದಿಗೆಂದು ಸಿಂದೇಗಾ ಪಟ್ಟಣಕ್ಕೆ ಹೋಗಿದ್ದಾಗ ಆರೋಪಿಗಳು ಆಕೆಯನ್ನು ಅಪಹರಿಸಿ ರಾಣಿಕುಡಾರ್‌ ಜುಮ್ಕಿ ಹಿಲ್ಸ್‌ಗೆ ಕರೆದೊಯ್ದು ಅತ್ಯಾಚಾರ ನಡೆಸಿದ್ದರು.
Vijaya Karnataka Web Jail


ಬಳಿಕ ಖೇರಾಂತೋಳಿ ಗ್ರಾಮದಲ್ಲಿ ಆಕೆಯನ್ನು ಎಸೆದು ಹೋಗಿದ್ದರು. ಘಟನೆಯ ಬಗ್ಗೆ ಸೂಕ್ಷ್ಮ ತನಿಖೆ ನಡೆಸಿದ ಪೊಲೀಸರು ಇಬ್ಬರನ್ನು ಬಂಧಿಸಿದ್ದರು. ಈಗ ಅವರಿಗೆ ಜೈಲು ಶಿಕ್ಷೆ ವಿಧಿಸಲಾಗಿದೆ.

ಜತೆಗೆ 10,000 ರೂ. ದಂಡವನ್ನೂ ವಿಧಿಸಲಾಗಿದ್ದು, ದಂಡ ಪಾವತಿ ತಪ್ಪಿದರೆ ಮತ್ತೆ ಆರು ತಿಂಗಳು ಹೆಚ್ಚುವರಿ ಜೈಲು ಶಿಕ್ಷೆ ಕಾದಿದೆ. ಇದೇ ಕೋರ್ಟ್‌ ಕಳೆದ ವರ್ಷ ಅಪ್ರಾಪ್ತೆಯ ಅತ್ಯಾಚಾರಕ್ಕಾಗಿ 20 ವರ್ಷದ ಆರೋಪಿಗೆ 20 ವರ್ಷ ಜೈಲು ಶಿಕ್ಷೆ ವಿಧಿಸಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ