ಆ್ಯಪ್ನಗರ

ಜಿಗ್ನೇಶ್‌, ಜೆಎನ್‌ಯು ಉಮರ್‌ಗೆ ರವಿ ಪೂಜಾರಿಯಿಂದ ಕೊಲೆ ಬೆದರಿಕೆ

ತನ್ನನ್ನು ತಾನು ಭೂಗತ ದೊರೆ ರವಿ ಪೂಜಾರಿ ಎಂದು ಹೇಳಿಕೊಂಡ ವ್ಯಕ್ತಿಯೊಬ್ಬನಿಂದ ತಮಗೆ ಮತ್ತು ಗುಜರಾತ್‌ನ ಪಕ್ಷೇತರ ಶಾಸಕ ಜಿಗ್ನೇಶ್‌ ಮೇವಾನಿ ಅವರಿಗೆ ಕೊಲೆ ಬೆದರಿಕೆ ಬಂದಿದೆ ಎಂದು ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯ(ಜೆಎನ್‌ಯು)ದ ವಿದ್ಯಾರ್ಥಿ ಮುಖಂಡ ಉಮರ್‌ ಖಾಲಿದ್‌ ಶನಿವಾರ ದಿಲ್ಲಿ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.

Vijaya Karnataka 10 Jun 2018, 5:00 am
ಹೊಸದಿಲ್ಲಿ: ತನ್ನನ್ನು ತಾನು ಭೂಗತ ದೊರೆ ರವಿ ಪೂಜಾರಿ ಎಂದು ಹೇಳಿಕೊಂಡ ವ್ಯಕ್ತಿಯೊಬ್ಬನಿಂದ ತಮಗೆ ಮತ್ತು ಗುಜರಾತ್‌ನ ಪಕ್ಷೇತರ ಶಾಸಕ ಜಿಗ್ನೇಶ್‌ ಮೇವಾನಿ ಅವರಿಗೆ ಕೊಲೆ ಬೆದರಿಕೆ ಬಂದಿದೆ ಎಂದು ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯ(ಜೆಎನ್‌ಯು)ದ ವಿದ್ಯಾರ್ಥಿ ಮುಖಂಡ ಉಮರ್‌ ಖಾಲಿದ್‌ ಶನಿವಾರ ದಿಲ್ಲಿ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ.
Vijaya Karnataka Web Mevani


ಟ್ವಿಟರ್‌ನಲ್ಲಿ ಈ ವಿಷಯ ತಿಳಿಸಿರುವ ಖಾಲಿದ್‌, ಪೊಲೀಸರಿಂದ ತಾವು ರಕ್ಷಣೆ ಕೋರಿರುವುದಾಗಿ ತಿಳಿಸಿದ್ದಾರೆ. ''ಜಿಗ್ನೇಶ್‌ ಮತ್ತು ನನಗೆ ರವಿ ಪೂಜಾರಿಯಿಂದ ಕೊಲೆ ಬೆದರಿಕೆ ಕರೆ ಬಂದಿರುವುದಕ್ಕೆ ಸಂಬಂಧಪಟ್ಟಂತೆ ದಿಲ್ಲಿ ಪೊಲೀಸರ ಬಳಿ ದೂರು ದಾಖಲಿಸಿದ್ದೇವೆ. ನಾನು ಆತನ 'ಹಿಟ್‌ ಲಿಸ್ಟ್‌'ನಲ್ಲಿದ್ದೇನಂತೆ! ಹೀಗಾಗಿ ನಾನು ಪೊಲೀಸರಿಂದ ರಕ್ಷಣೆ ಕೋರಿದ್ದೇನೆ. 2016ರ ಫೆಬ್ರವರಿಯಲ್ಲೂ ಅದೇ ವ್ಯಕ್ತಿ ನನ್ನನ್ನು ಕೊಲ್ಲುವ ಬೆದರಿಕೆ ಹಾಕಿದ್ದ'' ಎಂದು ಖಾಲಿದ್‌ ಹೇಳಿದ್ದಾರೆ.

''ಕಳೆದ ಎರಡು-ಮೂರು ದಿನಗಳಿಂದ ಮೇವಾನಿ ಅವರಿಗೆ ಕೊಲೆ ಬೆದರಿಕೆ ಕರೆಗಳು ಬರುತ್ತಾ ಇವೆ. ಆ ಪೈಕಿ ಒಂದು ಕರೆಯಲ್ಲಿ ಕರೆ ಮಾಡಿದಾತ ನನ್ನ ಹೆಸರನ್ನೂ ಉಲ್ಲೇಖಿಸಿದ್ದಾನೆ. ನಾವು ಭಾಷಣಗಳನ್ನು ನಿಲ್ಲಿಸದೇ ಹೋದಲ್ಲಿ ನಾವು ಕೊಲೆಯಾಗಿ ಹೋಗುತ್ತೇವೆ ಎಂದು ಆತ ಬೆದರಿಕೆ ಒಡ್ಡಿದ್ದಾನೆ. ಹಾಗಂತ ಮೇವಾನಿ ನನಗೆ ತಿಳಿಸಿದರು. ನನಗೆ ರಕ್ಷಣೆ ಒದಗಿಸುವ ಬಗ್ಗೆ ಶೀಘ್ರದಲ್ಲೇ ತೀರ್ಮಾನಿಸಲಿದ್ದೇವೆ ಎಂದು ಪೊಲೀಸರು ಭರವಸೆ ನೀಡಿದ್ದಾರೆ,'' ಎಂದು ಖಾಲಿದ್‌ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ