ಆ್ಯಪ್ನಗರ

ದಾವುದ್‌ ಇಬ್ರಾಹಿಂ ಸೊಸೆ ಮದುವೆಯಲ್ಲಿ ಬಿಜೆಪಿ ಸಚಿವ!

ಖ್ಯಾತ ಭೂಗತ ದೊರೆ ದಾವೂದ್ ಇಬ್ರಾಹಿಂ ಸೊಸೆಯ ವಿವಾಹ ಸಮಾರಂಭಕ್ಕೆ ಮಹಾರಾಷ್ಟ್ರ ಮುಖ್ಯ ಮಂತ್ರಿ ಆಪ್ತವಲಯ ಹಾಜರ್‌

ಟೈಮ್ಸ್ ಆಫ್ ಇಂಡಿಯಾ 25 May 2017, 4:11 pm
ಮುಂಬಯಿ: ಕುಖ್ಯಾತ ಭೂಗತ ದೊರೆ ದಾವೂದ್ ಇಬ್ರಾಹಿಂ ಸೊಸೆಯ ವಿವಾಹ ಸಮಾರಂಭಕ್ಕೆ ಮಹಾರಾಷ್ಟ್ರ ಮುಖ್ಯ ಮಂತ್ರಿ ಆಪ್ತ ಹಾಗೂ ಶಿಕ್ಷಣ ಸಚಿವ ಗಿರೀಶ್ ಮಹಾಜನ್, ಸೇರಿ ಹತ್ತು ಮಂದಿ ಪೊಲೀಸ್ ಅಧಿಕಾರಿಗಳು ಮತ್ತು ಹಲವು ಮಂದಿ ಶಾಸಕರು ಪಾಲ್ಗೊಂಡಿರುವುದು ಹೊಸ ವಿವಾದಕ್ಕೆ ಕಾರಣವಾಗಿದೆ.
Vijaya Karnataka Web minister mlas cops at wedding of dawood niece raise eyebrows
ದಾವುದ್‌ ಇಬ್ರಾಹಿಂ ಸೊಸೆ ಮದುವೆಯಲ್ಲಿ ಬಿಜೆಪಿ ಸಚಿವ!


ಸಹಾಯಕ ಪೊಲೀಸ್ ಕಮಿಷನರ್ ಸೇರಿ ಒಂಬತ್ತು ಮಂದಿ ಇನ್‌ಸ್ಪೆಕ್ಟರ್‌ಗಳು ಸೇರಿ ಬಿಜೆಪಿ ಶಾಸಕರಾದ ದೇವಯಾನಿ ಫರಾಂಡೆ, ಬಾಳಾ ಸಾಹೇಬ್ ಸನಾಪ್ ಹಾಗೂ ಸೀಮಾ ಹಿರ್ಲೆ, ನಾಸಿಕ್ ಮೇಯರ್ ರಂಜನಾ ಭನಾಸಿ, ಉಪಮೇಯರ್ ಪ್ರಥಮೇಶ್ ಗೀತಾ, ಹಲವು ಮಂದಿ ಮೇ 19ರಂದು ನಾಸಿಕ್‌ನಲ್ಲಿ ನಡೆದ ಈ ವಿವಾಹ ಸಮಾರಂಭದಲ್ಲಿ ಭಾಗವಹಿಸಿದ್ದಾರೆ.

ಇದೀಗ ಮುಂಬಯಿ ಮುಖ್ಯಮಂತ್ರಿ ಮದುವೆಯಲ್ಲಿ ಭಾಗಿಯಾದ ಪೊಲೀಸ್ ಅಧಿಕಾರಿಗಳ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ನಾಶಿಕ್ ಪೊಲೀಸ್ ಕಮಿಷನರ್ ರವೀಂದ್ರ ಸಿಂಘಾಲ್‌ಗೆ ಆದೇಶಿಸಿದ್ದಾರೆ.

"ವಧುವಿನ ಕಡೆಯವರಿಗೆ ದಾವೂದ್ ಸಂಪರ್ಕ ಇದೆ ಎಂಬ ಮಾಹಿತಿ ನನಗಿಲ್ಲ. ವರ, ಸ್ಥಳೀಯ ಮುಸ್ಲಿಂ ಮುಖಂಡ ಶಾಹರ್ ಖತೀಬ್ ಅವರ ಅಳಿಯ. ಮುಸ್ಲಿಂ ಸಮುದಾಯದ ಧಾರ್ಮಿಕ ಮುಖಂಡ ಖತೀಬ್ ಅವರ ಆಹ್ವಾನದ ಮೇರೆಗೆ ವಿವಾಹಕ್ಕೆ ತೆರಳಿದ್ದೇನೆ. ಆದರೆ ನನಗೆ ವಧುವಿನ ಕಡೆಯವರಿಗೆ ದಾವೂದ್ ಸಂಪರ್ಕ ಇದೆ ಎಂಬ ಮಾಹಿತಿ ನನಗಿಲ್ಲ. ಆದ್ದರಿಂದ ವಿವಾಹ ಸಮಾರಂಭದಲ್ಲಿ ಪಾಲ್ಗೊಂಡಿದ್ದೆ ಎಂದು ಒಪ್ಪಿಕೊಂಡಿದ್ದಾರೆ.

ಇನ್ನು ಈ ವಿಚಾರವನ್ನು ಪೊಲೀಸರು ಒಪ್ಪಿಕೊಂಡಿದ್ದು, ತಮಗೂ ಖತೀಬ್‌ಗೂ ಉತ್ತಮ ಬಾಂಧವ್ಯವಿದ್ದ ಹಿನ್ನೆಲೆಯಲ್ಲಿ ಈ ಮದುವೆಗೆ ತೆರಳಿದ್ದೆವು ಎಂದು ಹೇಳಿಕೆ ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ