ಆ್ಯಪ್ನಗರ

ಖಾಸಗಿ ಲಘು ವಿಮಾನಗಳ ಹಾರಾಟಕ್ಕೆ ಅನುಮತಿ ನೀಡಿದ ಕೇಂದ್ರ ಸರ್ಕಾರ!

ದೇಶೀಯ ವಿಮಾನ ಸಂಚಾರಕ್ಕೆ ಅನುಮತಿ ನೀಡಿದ್ದ ಕೇಂದ್ರ ವಿಮಾನಯಾನ ಸಚಿವಾಲಯ, ಇದೀಗ ದೇಶೀಯ ಖಾಸಗಿ ಲಘು ವಿಮಾನಗಳ ಹಾರಾಟಕ್ಕೂ ಸೈ ಎಂದಿದೆ. ಜೊತೆಗೆ ನಿಗದಿತವಲ್ಲದ ಖಾಸಗಿ ಜೆಟ್ ವಿಮಾನಗಳ ಹಾರಾಟಕ್ಕೂ ಅನುಮತಿ ನೀಡಲಾಗಿದೆ.

Vijaya Karnataka Web 26 May 2020, 12:53 pm
ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ ದೇಶೀಯ ವಿಮಾನ ಸಂಚಾರಕ್ಕೆ ಅನುಮತಿ ನೀಡಿದ್ದ ಕೇಂದ್ರ ವಿಮಾನಯಾನ ಸಚಿವಾಲಯ, ಇದೀಗ ದೇಶೀಯ ಖಾಸಗಿ ಲಘು ವಿಮಾನಗಳ ಹಾರಾಟಕ್ಕೂ ಸೈ ಎಂದಿದೆ.
Vijaya Karnataka Web Private Jet
ಸಂಗ್ರಹ ಚಿತ್ರ


ಈ ಕುರಿತು ಪ್ರಕಟಣೆ ಹೊರಡಿಸಿರುವ ಕೇಂದ್ರ ವಿಮಾನಯಾನ ಸಚಿವಾಲಯ, ದೇಶದ ಖಾಸಗಿ ಲಘು ವಿಮಾನ ಸೇವಾ ಸಂಸ್ಥೆಗಳು ಹಾಗೂ ನಿಗದಿತವಲ್ಲದ ಖಾಸಗಿ ಜೆಟ್ ವಿಮಾನಗಳ ಹಾರಾಟಕ್ಕೆ ಅನುಮತಿ ನೀಡಲಾಗಿದೆ ಎಂದು ಸ್ಪಷ್ಟಪಡಿಸಿದೆ.

ಗೊಂದಲದಿಂದ ದೇಶಾದ್ಯಂತ ವಿಮಾನ ಸಂಚಾರ ಅಸ್ತವ್ಯಸ್ಥ, ಪ್ರಯಾಣಿಕರ ಪರದಾಟ

ದೇಶದ ಕೆಲವು ಪ್ರಮುಖ ಉದ್ಯಮಿಗಳು ತಮ್ಮ ವ್ಯಾವಹಾರಿಕ ಅನುಕೂಲಕ್ಕಾಗಿ ಖಾಸಗಿ ವಿಮಾನಗಳ ಹಾರಾಟಕ್ಕೆ ಅನುಮತಿ ಕೇಳಿದ್ದರು. ಈ ಹಿನ್ನೆಲೆಯಲ್ಲಿ ಖಾಸಗಿ ಲಘು ವಿಮಾನಗಳು ಹಾಗೂ ನಿಗದಿತವಲ್ಲದ ಖಾಸಗಿ ಜೆಟ್ ವಿಮಾನಗಳ ಹಾರಾಟಕ್ಕೆ ವಿಮಾನಯಾನ ಸಚಿವಾಲಯ ಅನುಮತಿ ನೀಡಿದೆ.


ನಿನ್ನೆ(ಮೇ. 25)ಯಿಂದಲೇ ದೇಶದಾದ್ಯಂತ ದೇಶೀಯ ವಿಮಾನಗಳ ಸಂಚಾರಕ್ಕೆ ಅನುಮತಿ ನೀಡಲಾಗಿದ್ದು, ಅದರಂತೆ ಎಲ್ಲಾ ಪ್ರಮುಖ ನಗರಗಳಲ್ಲಿ ದೇಶೀಯ ವಿಮಾನಗಳು ಹಾರಾಟ ಆರಂಭಿಸಿವೆ.

ಆಗಸದಲ್ಲಿ ಲೋಹದ ಹಕ್ಕಿಗಳ ಕಲರವ: ಹಾರಾಡುತ್ತಿದೆ ಭಾರತ!

ದೇಶೀಯ ವಿಮಾನ ಸಂಚಾರಕ್ಕೆ ವಿಮಾನ ಸಂಸ್ಥೆಗಳಿಗೆ ಹಾಗೂ ಪ್ರಯಾಣಿಕರಿಗೆ ನಿರ್ದಿಷ್ಟ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿರುವ ಕೇಂದ್ರ ವಿಮಾನಯಾನ ಸಚಿವಾಲಯ ಈ ಮಾರ್ಗಸೂಚಿಗಳ ಪಾಲನೆ ಕಡ್ಡಾಯ ಎಂದು ಸ್ಪಷ್ಟಪಡಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ