ಆ್ಯಪ್ನಗರ

ಮಿಸ್‌ ವರ್ಲ್ಡ್‌ ಮಾನುಷಿ ಛಿಲ್ಲರ್‌ ಆಲ್‌ ಇಂಡಿಯಾ ಇಂಗ್ಲಿಷ್‌ ಟಾಪರ್‌

ಮಾನುಷಿ ಛಿಲ್ಲರ್‌ ಅವರು ಡಾ ಮಿತ್ರಾ ಬಸು ಛಿಲ್ಲರ್‌ ಮತ್ತು ಡಾ ನೀಲಮ್‌ ಛಿಲ್ಲರ್‌ ದಂಪತಿಯ ಪುತ್ರಿ

Vijaya Karnataka 19 Nov 2017, 9:35 am

ಹೊಸದಿಲ್ಲಿ: ಹದಿನೇಳು ವರ್ಷಗಳ ಬಳಿಕ ಭಾರತಕ್ಕೆ ಮಿಸ್‌ ವರ್ಲ್ಡ್‌ ಪಟ್ಟ ದಕ್ಕಿಸಿಕೊಟ್ಟ ಮಾನುಷಿ ಛಿಲ್ಲರ್‌ ಪ್ರತಿಭಾವಂತೆ. ಓದಿನಲ್ಲೂ ಮುಂದಿರುವ ಮಾನುಷಿ, ಇಂಗ್ಲಿಷ್‌ ಮೇಲೆ ಭಾರಿ ಹಿಡಿತ ಹೊಂದಿದ್ದಾರೆ. ಮಾನುಷಿ ಬಗೆಗಿನ ಇನ್ನಷ್ಟು ಮಾಹಿತಿ ಇಲ್ಲಿದೆ...

Vijaya Karnataka Web miss world manushi chillar was english topper
ಮಿಸ್‌ ವರ್ಲ್ಡ್‌ ಮಾನುಷಿ ಛಿಲ್ಲರ್‌ ಆಲ್‌ ಇಂಡಿಯಾ ಇಂಗ್ಲಿಷ್‌ ಟಾಪರ್‌


ಮಾನುಷಿ ಛಿಲ್ಲರ್‌ ಅವರು ಡಾ. ಮಿತ್ರಾ ಬಸು ಛಿಲ್ಲರ್‌ ಮತ್ತು ಡಾ. ನೀಲಮ್‌ ಛಿಲ್ಲರ್‌ ದಂಪತಿಯ ಪುತ್ರಿ. ಮಾನುಷಿ ತಂದೆ 'ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ'ಯಲ್ಲಿ (ಡಿಆರ್‌ಡಿಒ) ವಿಜ್ಞಾನಿ. ತಾಯಿ ನೀಲಮ್‌ ಅವರು 'ಇನ್ಸ್‌ಟಿಟ್ಯೂಟ್‌ ಆಫ್‌ ಹ್ಯೂಮನ್‌ ಬಿಹೇವಿಯರ್‌ ಆ್ಯಂಡ್‌ ಅಲೀಡ್‌ ಸೈನ್ಸಸ್‌' ಸಂಸ್ಥೆಯಲ್ಲಿ ನ್ಯೂರೊ-ಕೆಮಿಸ್ಟ್ರಿ ವಿಭಾಗದ ಮುಖ್ಯಸ್ಥರು.

* ಮಾನುಷಿ ಛಿಲ್ಲರ್‌ ಸೌಂದರ್ಯ ಸ್ಪರ್ಧೆಗೆ ನೋಂದಾಯಿಸಿಕೊಂಡಾಗ ಮೆಡಿಸಿನ್‌ ಮತ್ತು ಸರ್ಜರಿಯಲ್ಲಿ ಪದವಿ ವಿದ್ಯಾಭ್ಯಾಸ ಮಾಡುತ್ತಿದ್ದರು.

* ಕೂಚುಪುಡಿ ನೃತ್ಯದಲ್ಲೂ ಛಿಲ್ಲರ್‌ ಸೈ ಎನಿಸಿಕೊಂಡಿದ್ದಾರೆ. ಖ್ಯಾತ ನೃತ್ಯಕಲಾವಿದರಾದ ರಾಜಾ ಮತ್ತು ರಾಧಾ ರೆಡ್ಡಿ ಇವರ ಗುರುಗಳು.

* 'ನ್ಯಾಷನಲ್‌ ಸ್ಕೂಲ್‌ ಆಫ್‌ ಡ್ರಾಮಾ' ಜತೆ ಒಡನಾಟವನ್ನೂ ಹೊಂದಿರುವ ಇವರು, ಉತ್ತಮ ಈಜುಪಟು.

* ಶಾಲೆಯ ದಿನಗಳಿಂದಲೂ ಕವನ, ಪೇಂಟಿಂಗ್‌ನಲ್ಲೂ ತೀವ್ರ ಆಸಕ್ತಿಯನ್ನು ಹೊಂದಿದ್ದಾರೆ.

* ಆಂಗ್ಲ ಭಾಷೆಯ ಮೇಲೆ ಅಗಾಧ ಹಿಡಿತ ಇರುವ ಮಾನುಷಿ, ಸಿಬಿಎಸಿ 12ನೇ ತರಗತಿಯಲ್ಲಿ ಇಂಗ್ಲಿಷ್‌ ಭಾಷೆಯಲ್ಲಿ ಆಲ್‌ ಇಂಡಿಯಾ ಟಾಪರ್‌.

iss World Manushi Chillar was english topper

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ