ಆ್ಯಪ್ನಗರ

ಪ್ರಿಯಾ ರಮಣಿ ವಿರುದ್ಧ ಎಂಜೆ ಅಕ್ಬರ್‌ ಮಾನನಷ್ಟ ಮೊಕದ್ದಮೆ: ಅ.31ಕ್ಕೆ ಮುಂದಿನ ವಿಚಾರಣೆ

ಪತ್ರಕರ್ತೆ ಪ್ರಿಯಾ ರಮಣಿ ವಿರುದ್ಧ ಕೇಂದ್ರ ಮಾಜಿ ಸಚಿವ ಅಕ್ಬರ್ ಸಲ್ಲಿಸಿರುವ ಮಾನನಷ್ಟ ಮೊಕದ್ದಮೆಯ ವಿಚಾರಣೆ ನಡೆಸಿರುವ ಪಟಿಯಾಲ ಕೋರ್ಟ್‌, ವಿಚಾರಣೆಯನ್ನು ಅ.31ಕ್ಕೆ ಮುಂದೂಡಿದೆ.

TIMESOFINDIA.COM 18 Oct 2018, 4:19 pm
[This story originally published in times of India oct 17, 2018]
Vijaya Karnataka Web akbar


ಹೊಸದಿಲ್ಲಿ: ಮಾಜಿ ಸಚಿವ ಎಂಜೆ ಅಕ್ಬರ್‌, ಪತ್ರಕರ್ತೆ ಪ್ರಿಯಾ ರಮಣಿ ವಿರುದ್ಧ ಸಲ್ಲಿಸಿರುವ ಮಾನನಷ್ಟ ಮೊಕದ್ದಮೆ ವಿಚಾರಣೆಯನ್ನು ಅ.31ಕ್ಕೆ ಪಟಿಯಾಲ ಹೌಸ್‌ ಕೋರ್ಟ್‌ ಮುಂದೂಡಿದೆ.

ಗುರುವಾರ ವಿಚಾರಣೆ ಕೈಗೆತ್ತಿಕೊಂಡ ಕೋರ್ಟ್‌, ಅಕ್ಬರ್‌ ಪರ ವಕೀಲರಾದ ಗೀತಾ ಲೂತ್ರ ಅವರ ವಾದವನ್ನು ಆಲಿಸಿ, ಅ.31ಕ್ಕೆ ಮುಂದೂಡಿತು.

ಕೇಂದ್ರ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವರಾಗಿದ್ದ ಅಕ್ಬರ್‌ ವಿರುದ್ಧ ಪ್ರಿಯಾ ರಮಣಿ ಮಾಡಿರುವ ಟ್ವೀಟ್‌ಗಳನ್ನು ಕೋರ್ಟ್‌ಗೆ ಸಲ್ಲಿಸಿದ ಗೀತಾ, ಇದರಿಂದ ಅಕ್ಬರ್‌ ಅವರ ಗೌರವಕ್ಕೆ ಚ್ಯುತಿಯಾಗಿದೆ ಎಂದು ವಾದಿಸಿದರು.

ಪ್ರಿಯಾ ಅವರ 2ನೇ ಟ್ವೀಟ್‌ ಸ್ಪಷ್ಟವಾಗಿ ಮಾನಹಾನಿಯ ಉದ್ದೇಶದಿಂದಲೇ ಮಾಡಿದಂತಿದೆ. ಇದನ್ನು 1200 ಮಂದಿ ಲೈಕ್‌ ಮಾಡಿದ್ದಾರೆ ಎಂದು ಹೇಳಿದ್ದಾರೆ.

20 ಮಹಿಳೆಯರು ಮಿ ಟೂ ಅಭಿಯಾನದಲ್ಲಿ ಲೈಂಗಿಕ ಕಿರುಕುಳದ ಆರೋಪ ಮಾಡಿದ್ದ ಹಿನ್ನೆಯಲ್ಲಿ, ಅಕ್ಬರ್‌ ಸಚಿವ ಸ್ಥಾನಕ್ಕೆ ಬುಧವಾರ ರಾಜೀನಾಮೆ ನೀಡಿದ್ದರು. ನ್ಯಾಯಾಲಯದಲ್ಲಿ ಈ ವಿಚಾರಕ್ಕೆ ಸಂಬಂಧಿಸಿದಂತೆ ಹೋರಾಡುತ್ತೇನೆ. ವೈಯಕ್ತಿಕವಾಗಿ ಕಾನೂನಾತ್ಮಕವಾಗಿ ಹೋರಾಡುವುದಾಗಿ ಅಕ್ಬರ್‌ ಹೇಳಿಕೆಯಲ್ಲಿ ತಿಳಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ