ಆ್ಯಪ್ನಗರ

6 ದಿನ ಮೊಬೈಲ್‌ ಪೊರ್ಟೆಬಲಿಟಿ ಸ್ಥಗಿತ : ಹೊಸ ನಿಯಮ ಜಾರಿ ಪರಿಣಾಮ

ನವೆಂಬರ್‌ 4ರಿಂದ 10ರವರೆಗೂ ಮೊಬೈಲ್‌ ಸಂಖ್ಯೆಯನ್ನು ಒಂದು ನೆಟ್‌ವರ್ಕ್ನಿಂದ ಮತ್ತೊಂದು ನೆಟ್‌ವರ್ಕ್ಗೆ ಬದಲಾಯಿಸುವ 'ನಂಬರ್‌ ಪೋರ್ಟೆಬಿಲಿಟಿ' ಸೇವೆಯನ್ನು ತಾತ್ಕಲಿಕವಾಗಿ ಸ್ಥಗಿತಗೊಳಿಸಲಾಗುವುದು ಎಂದು ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್‌) ತಿಳಿಸಿದೆ.

Vijaya Karnataka Web 18 Oct 2019, 8:10 pm
ಹೊಸದಿಲ್ಲಿ: ನವೆಂಬರ್‌ 4ರಿಂದ 10ರವರೆಗೂ ಮೊಬೈಲ್‌ ಸಂಖ್ಯೆಯನ್ನು ಒಂದು ನೆಟ್‌ವರ್ಕ್ನಿಂದ ಮತ್ತೊಂದು ನೆಟ್‌ವರ್ಕ್ಗೆ ಬದಲಾಯಿಸುವ 'ನಂಬರ್‌ ಪೋರ್ಟೆಬಿಲಿಟಿ' ಸೇವೆಯನ್ನು ತಾತ್ಕಲಿಕವಾಗಿ ಸ್ಥಗಿತಗೊಳಿಸಲಾಗುವುದು ಎಂದು ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್‌) ತಿಳಿಸಿದೆ. ನವೆಂಬರ್‌ 11ರಿಂದ ನಂಬರ್‌ ಪೋರ್ಟೆಬಿಲಿಟಿಗೆ ಸಂಬಂಧಿಸಿದಂತೆ ಹೊಸ ನಿಯಮಗಳು ಜಾರಿಯಾಗುವ ಹಿನ್ನೆಲೆಯಲ್ಲಿಇದಕ್ಕೆ ಸಿದ್ಧತೆ ನಡೆಸಲು ಸೇವೆಯನ್ನು ತಾತ್ಕಾಲಿಕವಾಗ ಸ್ಥಗಿತಗೊಳಿಸಲಾಗುವುದು ಎಂದು ಪ್ರಕಟಣೆಯಲ್ಲಿಟ್ರಾಯ್‌ ತಿಳಿಸಿದೆ.
Vijaya Karnataka Web mobile


ಕರೆಗಳಿಗೆ ದರ ವಿಧಿಸಿದ ಜಿಯೊ

ಪೋರ್ಟೆಬಿಲಿಟಿ ಸೇವೆ ಯಾವಾಗ ಸ್ಥಗಿತ?
2019ರ ನವೆಮಬರ್‌ 4ರ ಸಂಜೆ 6 ಗಂಟೆಯಿಂದ 2019ರ ನವೆಂಬರ್‌ 10ರ ಮಧ್ಯರಾತ್ರಿ 12 ಗಂಟೆವರೆಗೆ.

ಒಂದು ವಾರ ಕಾಲ ಏಕೆ ಸ್ಥಗಿತ?
ನ.11ರಿಂದ ಪೋರ್ಟೆಬಿಲಿಟಿಗೆ ಸಂಬಂಧಿಸಿ ಹೊಸ ನಿಯಮ ಜಾರಿಯಾಗುವುದರಿಂದ.

ವಿವಿಧ ಸರಕಾರಿ ಆ್ಯಪ್‌ಗಳ ಬಗ್ಗೆ ನಿಮಗೆ ತಿಳಿದಿದೆಯೇ?

ಮನವಿ ಸಲ್ಲಿಸಿದರೆ ಏನಾಗುತ್ತದೆ?
ಈ ಅವಧಿಯಲ್ಲಿ ನಂಬರ್‌ ಪೊರ್ಟೆಬಿಲಿಟಿಗೆ ಎಸ್‌ಎಂಎಸ್‌ ಮೂಲಕ ಮನವಿ ಸಲ್ಲಿಸಿದರೂ 'ಯೂನಿಕ್‌ ಪೋರ್ಟಿಂಗ್‌ ಕೋಡ್‌' ಸೃಷ್ಟಿಯಾಗುವುದಿಲ್ಲ.

4ಜಿ ಸ್ಪೀಡ್‌ನಲ್ಲಿ ಯಾರು ನಂ.1?

ಹೊಸ ನಿಯಮ ಏನು, ಎತ್ತ?
  • ಇಡೀ ಪೋರ್ಟಿಂಗ್‌ ಪ್ರಕ್ರಿಯೆಯನ್ನು ಸರಳ ಮತ್ತು ಕ್ಷಿಪ್ರಗೊಳಿಸಲು ಕ್ರಮ
  • ನಿರ್ದಿಷ್ಟ ಸೇವಾ ವಲಯದಲ್ಲಿ ಪೋರ್ಟಿಂಗ್‌ ಸೇವೆ ಎರಡು ದಿನದಲ್ಲೇ ಮುಕ್ತಾಯ
  • ಒಂದು ಸೇವಾ ವೃತ್ತದಿಂದ ಮತ್ತೊಂದು ಸೇವಾ ವೃತ್ತದ ಪೋರ್ಟಿಂಗ್‌ 5 ದಿನದಲ್ಲಿ ಪೂರ್ಣ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ